ಕೂದಲು ಉದುರುವುದು ಹಾಗೂ ತಲೆ ಹೊಟ್ಟಿನ ನಿವಾರಣೆಗೆ ತಪ್ಪದೇ ಇದನ್ನು ಹೀಗೆ ಬಳಸಿ.. - Karnataka's Best News Portal

ಕೂದಲು ಉದುರುವಿಕೆ||ತಲೆಯಲ್ಲಿ ಹೊಟ್ಟು ನಿವಾರಣೆಗೆ ಮನೆಮದ್ದು||

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಕೂದಲು ಉದುರುವ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಅದಕ್ಕಾಗಿ ಅವರು ಹಲ ವಾರು ವಿಧದ ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆಗಳನ್ನು, ಶಾಂಪುಗಳನ್ನು ತಂದು ಹಚ್ಚುತ್ತಾರೆ. ಹಾಗೂ ಕೆಲವೊಂದು ಅಡ್ಡ ಪರಿಣಾಮವನ್ನು ಉಂಟು ಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಕೂದಲು ಉದುರುವಂತಹ ಸಮಸ್ಯೆ ಹಾಗೂ ತಲೆಯಲ್ಲಿ ಹೊಟ್ಟು ಈ ಸಮಸ್ಯೆ ಯಾವ ಕಾರಣಕ್ಕಾಗಿ ನಮಗೆ ಕಾಣಿಸಿ ಕೊಳ್ಳುತ್ತಿದೆ?

ಈ ಸಮಸ್ಯೆ ನಮ್ಮ ದೇಹದಲ್ಲಿ ಕಾಣಿಸಿ ಕೊಳ್ಳಲು ಪ್ರಮುಖವಾದ ಕಾರಣ ಏನು? ಎನ್ನುವುದನ್ನು ಯಾರು ಕೂಡ ತಿಳಿಯುವುದಿಲ್ಲ ಹಾಗೂ ಅವರಿಗೆ ಈ ವಿಷಯವಾಗಿ ಗೊತ್ತಿರುವುದು ಇಲ್ಲ. ಹಾಗಾದರೆ ಈ ದಿನ ತಲೆಯಲ್ಲಿ ಕೂದಲು ಉದುರುವಂತಹ ಸಮಸ್ಯೆ ತಲೆಯಲ್ಲಿ ಹೊಟ್ಟು ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಏನು ಎಂದರೆ ಮುಖ್ಯವಾಗಿ ಮಲಬದ್ಧತೆಯ ಸಮಸ್ಯೆ ಹೌದು!

ಹೊಟ್ಟೆಯಲ್ಲಿ ಮಲ ಸಂಗ್ರಹಣೆ ಆದರೆ ಮೆದುಳಿನಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಹೊಟ್ಟೆಯಲ್ಲಿ ಸಂಗ್ರಹವಾದoತಹ ಮಲ ಸರಿಯಾದ ಸಮಯದಲ್ಲಿ ಆಚೆ ಹೋಗುವುದು ಬಹಳ ಮುಖ್ಯವಾಗಿರು ತ್ತದೆ ಇಲ್ಲವಾದಲ್ಲಿ ನಮ್ಮ ದೇಹದಲ್ಲಿ ರಕ್ತಸಂಚಾರ ಸರಿಯಾದ ಕ್ರಮದಲ್ಲಿ ಆಗುವುದಿಲ್ಲ. ಆ ಸಮಯದಲ್ಲಿ ಹೊಟ್ಟೆಯಲ್ಲಿರುವಂತಹ ಮಲ ನಮ್ಮ ಮೆದುಳಿಗೆ ಹೋಗಿ ಸಂಗ್ರಹವಾಗುತ್ತದೆ ಆದರೆ ಈ ವಿಷಯ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ.

ಈ ರೀತಿ ಆಗುವುದರಿಂದ ನಿಮ್ಮ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಮೊದಲನೇಯದಾಗಿ ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬೇಕು. ಆನಂತರ ತಲೆಯಲ್ಲಿ ಹೊಟ್ಟು ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾದರೆ ನಿಮ್ಮ ಹೊಟ್ಟೆಯನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳುವುದು ಎಂದರೆ ಒಂದು ತಿಂಗಳ ಕಾಲ.

ಹಣ್ಣು ತರಕಾರಿ ಸೊಪ್ಪು ಗಳನ್ನೇ ತಿನ್ನಬೇಕು. ಜೊತೆಗೆ ಹೆಚ್ಚಾಗಿ ಕಾಳುಗಳನ್ನು ತಿನ್ನಬೇಕು ಹಾಗಾದರೆ ಇದು ಆಹಾರ ಪದ್ಧತಿಯಾಯಿತು ಇನ್ನು ತಲೆಯಲ್ಲಿರುವ ಹೊಟ್ಟು ನಿವಾರಣೆಗೆ ಅ ದರೆ ಮೇಲ್ಭಾಗದಲ್ಲಿ ಹಚ್ಚುವುದಕ್ಕೆ ಯಾವ ಮನೆಮದ್ದನ್ನು ಉಪಯೋಗಿಸುವುದು ಎಂದರೆ, ನಿಂಬೆ ಹಣ್ಣಿನ ರಸ ಮತ್ತು ಕೊಬ್ಬರಿ ಎಣ್ಣೆ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ತಲೆಕೂದಲಿಗೆ ಹಚ್ಚಿ ಬೆಳಗಿನ ಸಮಯ ಬಿಸಿಲಿನಲ್ಲಿ ನಿಂತುಕೊಳ್ಳಬೇಕು.

ನಂತರ ಶೀಗೆಕಾಯಿಯಿಂದ ನಿಮ್ಮ ತಲೆಯನ್ನು ತೊಳೆಯಬೇಕು. ಇದರ ಜೊತೆ ಪ್ರತಿದಿನ ಬೆಳಗ್ಗಿನ ಸಮಯ ಖಾಲಿ ಹೊಟ್ಟೆಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ತಲೆ ಕೂದಲು ಹೇರಳವಾಗಿ ಬೆಳೆಯುತ್ತದೆ ಜೊತೆಗೆ ತಲೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *