ಮನೆಯಲ್ಲಿ ಸಂಪತ್ತು ಸಮೃದ್ಧಿ ಹೆಚ್ಚಾಗಲು ದೇವರಕೋಣೆಯನ್ನು "ಈ ವಸ್ತುಗಳಿಂದ ಶುದ್ಧಗೊಳಿಸಿ".....! ಎಷ್ಟು ದೀಪ ಹಚ್ಚಿಬೇಕು? - Karnataka's Best News Portal

ಮನೆಯಲ್ಲಿ ಸಂಪತ್ತು ಸಮೃದ್ಧಿ ಹೆಚ್ಚಾಗಲು ದೇವರಕೋಣೆಯನ್ನು “ಈ ವಸ್ತುಗಳಿಂದ ಶುದ್ಧಗೊಳಿಸಿ”…..! ಎಷ್ಟು ದೀಪ ಹಚ್ಚಿಬೇಕು?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಸಂಪ್ರದಾಯದಂತೆ ಅವರ ಮನೆತನದಲ್ಲಿ ಯಾವ ರೀತಿ ದೇವರ ಮನೆಯ ಪೂಜೆ ಮಾಡುತ್ತಾರೋ ಅದೇ ರೀತಿ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಪೂಜೆಯನ್ನು ಮಾಡುತ್ತಾರೆ. ಅಂದರೆ ಕೆಲವೊಬ್ಬರು ದೇವರ ಮನೆ ಚಿಕ್ಕದಾಗಿ ಮಾಡಿಸಿಕೊಂಡಿರುತ್ತಾರೆ ಕೆಲವೊಬ್ಬರು ದೊಡ್ಡದಾಗಿ ಹೀಗೆ ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಸಿ ಪೂಜೆ ಮಾಡುತ್ತಾರೆ.

ಆದರೆ ಕೆಲವೊಮ್ಮೆ ಬೇರೆ ಕಡೆ ಬಂದು ವಾಸಿಸುತ್ತಿರುವಂತಹ ಜನರು ಆ ಸ್ಥಳದಲ್ಲಿ ದೇವರ ಕೋಣೆ ಯಾವ ರೀತಿ ಇರುತ್ತದೆಯೋ ಅದೇ ರೀತಿ ಯಾಗಿ ಪೂಜೆ ಮಾಡುತ್ತಿರುತ್ತಾರೆ. ಏಕೆಂದರೆ ಅನಿವಾರ್ಯ ಅವರಿಗೆ ಬೇರೆ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಆ ವಾತಾವರಣಕ್ಕೆ ತಕ್ಕಂತೆ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಪೂಜೆಯನ್ನು ಮಾಡುತ್ತಾರೆ.


ದೇವರ ಮನೆ ಎಷ್ಟೇ ಇರಲಿ ಹೇಗೆ ಇರಲಿ, ಆದರೆ ನಾವು ಯಾವ ರೀತಿ ದೇವರ ಪೂಜೆಯನ್ನು ಮಾಡುತ್ತೇವೆ ಹಾಗೂ ವಾರದ ದಿನ ಅಂದರೆ ನಿಮ್ಮ ಕುಲದೇವರ ವಾರವಾಗಿರುವಂತಹ ದಿನ ದೇವರ ವಿಗ್ರಹಗಳನ್ನು ತೊಳೆದು ದೇವರ ಮನೆಯನ್ನು ಸ್ವಚ್ಛ ಮಾಡಿ, ಯಾವ ರೀತಿ ನೀವು ಆ ದಿನ ಪೂಜೆಯನ್ನು ಮಾಡುತ್ತಿರೋ ಅದೇ ರೀತಿಯಾಗಿ ನಿಮಗೆ ಪ್ರತಿಫಲ ಎನ್ನುವುದು ಸಿಗುತ್ತಾ ಹೋಗುತ್ತದೆ.

ಹಾಗೆಯೇ ನೀವು ಯಾವುದೇ ರೀತಿಯ ಪೂಜೆಯನ್ನು ಮಾಡದೆ ದೇವರ ವಿಗ್ರಹವನ್ನು ಸ್ವಚ್ಛಗೊಳಿಸದೆ ಪೂಜೆಯನ್ನು ಮಾಡದೆ ಇರುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮನೆಯ ವಾತಾವರಣ ಎಲ್ಲಾ ಹಾಳಾಗಿ ಮನೆಯಲ್ಲಿ ಯಾವುದೇ ರೀತಿಯ ಶಾಂತಿ ನೆಮ್ಮದಿ ಇರುವುದಿಲ್ಲ ಬದಲಿಗೆ ಮನೆಯಲ್ಲಿ ಅಶಾಂತಿ ಅನಾರೋಗ್ಯ ದಿಂದ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಾಗಾದರೆ ಈ ದಿನ ದೇವರ ಮನೆಯನ್ನು ಯಾವ ದಿನ ಸ್ವಚ್ಛ ಮಾಡಬೇಕು? ಯಾವ ದಿನ ಪೂಜೆ ಮಾಡಬೇಕು ಹೀಗೆ ಈ ವಿಚಾರವಾಗಿ ಹಲವರು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ. ಬಹಳ ಮುಖ್ಯವಾಗಿ ಸೋಮವಾರ ಮತ್ತು ಶುಕ್ರವಾರದ ದಿನ ದೇವರ ಮನೆಯ ವಿಗ್ರಹಗಳನ್ನು ಸ್ವಚ್ಛಗೊಳಿಸಿರಬೇಕು ಹಾಗೂ ದೇವರ ಕೋಣೆಯನ್ನು ಕೂಡ ಅರಿಶಿಣ ಅಥವಾ ಗಂಜಲದಿಂದ ಶುಚಿಗೊಳಿಸಬೇಕು.

ಹಾಗೆಯೇ ದೀಪವನ್ನು ನೀವು ಯಾವುದೇ ಕಾರಣಕ್ಕೂ ಸೋಮವಾರ ಶುಕ್ರವಾರದ ದಿನ ತೊಳೆಯಬಾರದು. ಬದಲಿಗೆ ಹಿಂದಿನ ದಿನ ದೇವರ ಮನೆಯ ಕೋಣೆಯನ್ನು ಹಾಗೂ ದೇವರ ಮನೆಯಲ್ಲಿರುವ ವಿಗ್ರಹ ಗಳನ್ನು ಸ್ವಚ್ಛಗೊಳಿಸುವುದು ಉತ್ತಮ. ಹಾಗೂ ಪ್ರತಿನಿತ್ಯ ನೀವು ದೀಪವನ್ನು ಹಚ್ಚುತ್ತಿದ್ದರೆ ಪ್ರತಿದಿನ ಭತ್ತಿಯನ್ನು ಬದಲಾಯಿಸಿಯೇ ದೀಪವನ್ನು ಹಚ್ಚಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *