ಶಿವನ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುತ್ತೆ! ನಿಮ್ಮ ಕಣ್ಣ ಮುಂದೆ ನಡೆಯುತ್ತೆ ಪವಾಡ! ನಿಂತಲ್ಲೇ ಶಿಲೆಯಾಗಿರುವ ಶಿವ ದೇವರು! - Karnataka's Best News Portal

ಶಿವನ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುತ್ತೆ! ನಿಮ್ಮ ಕಣ್ಣ ಮುಂದೆ ನಡೆಯುತ್ತೆ ಪವಾಡ! ನಿಂತಲ್ಲೇ ಶಿಲೆಯಾಗಿರುವ ಶಿವ ದೇವರು!!

ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಶಿವಲಿಂಗಗಳನ್ನು ನೀವು ನೋಡೇ ಇರುತ್ತೀರಾ. ಪ್ರತಿ ಶಿವಲಿಂಗದಲ್ಲೂ ಏನಾದರೂ ಪವಾಡ ಅಡಗಿರುತ್ತದೆ ಇಂದು ನಾನು ಹೇಳಲು ಹೊರಟಿರುವ ಶಿವ ಮಂದಿರದಲ್ಲಿ ನಡೆಯುತ್ತಿ ರುವ ಪವಾಡದ ಬಗ್ಗೆ ಕೇಳಿದರೆ ಎಂಥವರು ಕೂಡ ಆಶ್ಚರ್ಯ ಚಕಿತರಾಗುತ್ತಾರೆ.

ಭೂಮಿ ಮೇಲೆ ಹೀಗೂ ನಡೆಯುತ್ತಾ ಎಂದು ಆಶ್ಚರ್ಯವಾಗುತ್ತೀರಾ. ಈ ದೇವಸ್ಥಾನದಲ್ಲಿ ದಿನದ 24 ತಾಸು ಅನ್ನ ಪ್ರಸಾದ ದೊರೆಯುತ್ತದೆ. ಈ ಶಿವ ಪರಮಾತ್ಮನ ಮುಂದೆ ಅಕ್ಕಿ ಇಟ್ಟರೆ ನಿಮಿಷದಲ್ಲಿ ಅನ್ನ ಆಗುತ್ತದೆ. ಇಲ್ಲಿ ನಡೆಯುತ್ತಿರುವ ಅನ್ನದ ಪವಾಡ ಈ ದೇವಸ್ಥಾನದಲ್ಲಿ ಬಿಟ್ಟರೆ ಮತ್ತೆಲ್ಲೂ ನೋಡಲು ಸಾಧ್ಯವೇ ಇಲ್ಲ. ಇಲ್ಲಿ ನೆಲೆಸಿರುವ ಶಿವ ಪರಮಾತ್ಮನನ್ನು ಮೂರು ಹೆಸರಿನಲ್ಲಿ ಕರೆಯುತ್ತಾರೆ .

ಮಣಿ ಕರಣ್ ಶಿವಲಿಂಗ ಚಾವಲಿಂಗ, ಚಾವ ಲಿಂಗ ಎಂದರೆ ಅಕ್ಕಿಲಿಂಗ ಮತ್ತು ಕಾಲಭೈರವ ಲಿಂಗ. ಶಿವಪರಮಾತ್ಮನು ಕಾಲಭೈರವ ರೂಪ ತಾಳಿ ದಾಗ ಇಲ್ಲಿ ಬಂದು ನೆಲೆಸಿದ್ದರು ಎಂದು ಪುರಾವೆಯಲ್ಲಿ ಹೇಳಲಾಗಿದೆ. ಈ ದೇವಸ್ಥಾನದಲ್ಲಿ ಶಿವಲಿಂಗ ಇದೆ ಶಿವಲಿಂಗದ ಜೊತೆ ಶಿವ ಪರಮಾತ್ಮನ ರೂಪವನ್ನು ನಾವು ನೋಡಬಹುದು.

ಈ ಕಾಲಭೈರವ ರೂಪದಲ್ಲಿರುವ ಶಿಲೆ ನಿಜವಾದ ಶಿವ ಪರಮಾತ್ಮ ಎಂದು ಹೇಳಲಾಗುತ್ತದೆ. ಹಾಗಾದರೆ ಬನ್ನಿ ಈ ದೇವಸ್ಥಾನ ಯಾವುದು?ಇದು ಎಲ್ಲಿ ಇರುವುದು? ಎಂಬುದನ್ನು ಈ ದಿನ ತಿಳಿಯೋಣ. ಈ ದೇವಸ್ಥಾನದ ಹೆಸರು ಮಣಿ ಕರಣ್ ಕಾಲಭೈರವರು ಮಹಾದೇವ ಮಂದಿರ. ಹಿಮಾಚಲ ಪ್ರದೇಶಕ್ಕೆ ನೀವು ವಿಮಾನದಲ್ಲಿ ಪ್ರಯಾಣ ಮಾಡಿದರೆ ಬುಂಟಲ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ವಿಮಾನ ನಿಲ್ದಾಣದಿಂದ 13 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಮಣಿ ಕರಣ್ ಪ್ರದೇಶ ತಲುಪಿತ್ತೀರಾ .

ಇದೇ ಪ್ರದೇಶದಲ್ಲಿ ನೆಲೆಸಿರುವ ಶಿವ ಮಂದಿರ ದೇವಸ್ಥಾನ ವಿದು. ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವಲಿಂಗ ಹಾಗೂ ಕಾಲಭೈರವ ರೂಪ ಸುಮಾರು 4000 ವರ್ಷದ ಹಳೇಯದು ಎಂದು ಹೇಳಲಾಗುತ್ತೆ. 1756 ರಲ್ಲಿ ರಾಜ ಘಟ್ ಸಿಂಗ್, ಈ ಶಿವಲಿಂಗಕ್ಕೆ ದೇವಸ್ಥಾನ ಕಟ್ಟಿಸುತ್ತಾನೆ. ಈ ದೇವಸ್ಥಾನದ ವಿಷೇಷತೆ ಮತ್ತು ಪವಾಡವನ್ನು ನೋಡಲು ಭಕ್ತರು ಸಾವಿರಾರು ಕಿಲೋಮೀಟರ್ ದೂರದಿಂದ ಬರುತ್ತಾರೆ.

ಪ್ರತಿದಿನ 24 ತಾಸು ಈ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇರುತ್ತದೆ. ಮಧ್ಯರಾತ್ರಿ ಬಂದರೂ ಇಲ್ಲಿ ನಿಮಗೆ ಪ್ರಸಾದ ಸಿಗುತ್ತದೆ. ಈ ದೇವಸ್ಥಾ ನದ ಮುಂಭಾಗ ಶಿವ ಪರಮಾತ್ಮನ ಬಿಸಿ ನೀರಿನ ಬೊಗ್ಗೆ ಇದ್ದು ಈ ಬಿಸಿ ನೀರಿನ ಬೊಗ್ಗೆ ಎಲ್ಲಿಂದ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ! ನಾಲ್ಕು ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ ದೇವಸ್ಥಾನದ ಮುಂಭಾಗ ನೀರಿನ ತಾಸು ಕುದಿಯುತ್ತಾ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *