ಕನ್ನಡದಲ್ಲಿ ನಾಯಕ ನಟಿಯಾಗಿ ನಟಿಸಿದ ಚಿತ್ರನಟಿಯರ ಮೊದಲ ಸಿನಿಮಾ ಯಾವುದು……??
ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟಿಯರು ಅಭಿನಯಿ ಸಿದ್ದು ಒಬ್ಬೊಬ್ಬರು ಕೂಡ ಒಂದೊಂದು ವಿಭಿನ್ನವಾದ ಪಾತ್ರಗಳನ್ನು ಮಾಡುವುದರ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರಲ್ಲೂ ಕೆಲವೊಬ್ಬ ನಟಿಯರು ಕೇವಲ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರ ಕೆಲಸವನ್ನು ಮಾಡುತ್ತಿದ್ದು.
ಇನ್ನು ಕೆಲವೊಬ್ಬರು ಬೇರೆ ಇಂಡಸ್ಟ್ರಿಯಲ್ಲಿಯೂ ಕೂಡ ಕೆಲಸವನ್ನು ಮಾಡುತ್ತಿದ್ದಾರೆ ಎಂದೇ ಹೇಳಬಹುದು. ಅಂದರೆ ಹಲವಾರು ಭಾಷೆಗಳ ಲ್ಲಿಯೂ ಕೂಡ ಇವರು ಅಭಿನಯವನ್ನು ಮಾಡಿದ್ದಾರೆ. ಹಾಗಾದರೆ ಈ ದಿನ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯ ಮಾಡಿರುವಂತಹ ನಟಿಯರು ಯಾರು? ಅವರ ಹೆಸರುಗಳೇನು ಅವರು ಮೊಟ್ಟ ಮೊದ ಲನೆಯದಾಗಿ ಕನ್ನಡದಲ್ಲಿ ಅಭಿನಯಿಸಿದಂತಹ ಚಿತ್ರಗಳ ಹೆಸರೇನು ಎಂಬುದರ ಬಗ್ಗೆ ಈ ದಿನ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದಾಗಿ ಅದಿತಿ ಪ್ರಭುದೇವನ್ ಇವರು ನಮ್ಮ ಕನ್ನಡ ಚಲನಚಿತ್ರ ರಂಗ ಕಂಡಂತಹ ಪ್ರತಿಭಾವಂತ ನಟಿ ಎಂದೇ ಹೇಳಬಹುದು ಇವರು ಕನ್ನಡ ಭಾಷೆಯ ಮೇಲೆ ಇಟ್ಟಿರುವಂತಹ ಅಭಿಮಾನ ನೋಡಿ ದರೆ ಇಂಥವರಾದರೂ ಕೂಡ ಇವರಿಗೆ ಒಂದು ಮೆಚ್ಚುಗೆಯನ್ನು ಕೊಡ ಲೇಬೇಕು. ಅಷ್ಟು ಸ್ಪಷ್ಟವಾಗಿ ಇವರು ಕನ್ನಡವನ್ನು ಮಾತನಾಡುತ್ತಾರೆ ಹಾಗೂ ಕನ್ನಡ ಭಾಷೆಯ ಮೇಲೆ ಅಷ್ಟೇ ಗೌರವವನ್ನು ಕೂಡ ಇಟ್ಟು ಕೊಂಡಿದ್ದಾರೆ ಎಂದೇ ಹೇಳಬಹುದು. ಇವರು ಮೊಟ್ಟಮೊದಲನೆಯ ದಾಗಿ ಅಭಿನಯಿಸಿದ ಚಿತ್ರ.
ಧೈರ್ಯಂ ಈ ಒಂದು ಚಿತ್ರ 2017ರಲ್ಲಿ ತೆರೆಕಂಡಿತು. ಅಮೂಲ್ಯ ಅಮೂಲ್ಯ ಅವರು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಬಾಲ ಕಲಾವಿದೆ ಯಾಗಿ ಅಭಿನಯ ಮಾಡಿಕೊಂಡು ಬಂದವರು. ಇವರು ಲಾಲಿ ಹಾಡು ಹೀಗೆ ಕೆಲವೊಂದು ಚಿತ್ರಗಳಲ್ಲಿ ಬಾಲಕಲಾವಿದೆ ಯಾಗಿ ಅಭಿನಯ ಮಾಡಿದರು ಸದ್ಯದಲ್ಲಿ ಇವರು ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ ಇವರು ಮೊಟ್ಟಮೊದಲನೆಯದಾಗಿ.
ಅಭಿನಯಿಸಿದ ಚಿತ್ರ ಯಾವುದು ಎಂದರೆ ಚೆಲುವಿನ ಚಿತ್ತಾರ ಈ ಒಂದು ಚಿತ್ರ 2007ರಲ್ಲಿ ತೆರೆಕಂಡಿತ್ತು. ಆಶಿಕ ರಂಗನಾಥನ್ ಮಿಲ್ಕಿ ಬ್ಯುಟಿ ಎಂದೆ ಹೆಸರನ್ನು ಪಡೆದಿರುವಂತಹ ಆಶಿಕಾ ರಂಗನಾಥನ್ ಅವರು ಕ್ರೇಜಿಬಾಯ್ ಎಂಬ ಚಿತ್ರವನ್ನು ಮಾಡುವುದರ ಮೂಲಕ ಕನ್ನಡ ಚಲನ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ಈ ಒಂದು ಚಿತ್ರ 2016 ರಲ್ಲಿ ತೆರೆ ಕಂಡಿತ್ತು.
ಆವಂತಿಕಾ ಶೆಟ್ಟಿ ಇವರು ರಂಗಿತರಂಗ ಎಂಬ ಚಿತ್ರದಲ್ಲಿ ಅಭಿನಯ ಮಾಡುವುದರ ಮೂಲಕ ತಮ್ಮ ನಟನೆಯ ವೃತ್ತಿಯನ್ನು ಪ್ರಾರಂಭಿಸಿ ದರು ಈ ಒಂದು ಚಿತ್ರ ಬಹಳ ವಿಭಿನ್ನವಾದoತಹ ಕಥೆಯನ್ನು ಒಳಗೊಂಡಿದ್ದು, 2015ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ದೀಪಾ ಸನ್ನಿಧಿ ಇವರು ಸಾರಥಿ ಚಿತ್ರದಲ್ಲಿ ಅಭಿನಯ ಮಾಡುವುದರ ಮೂಲಕ ದರ್ಶನ್ ಅವರಿಗೆ ನಾಯಕನಟಿಯಾಗಿ ಅಭಿನಯ ಮಾಡಿದ್ದರು ಈ ಒಂದು ಚಿತ್ರ 2011 ರಲ್ಲಿ ಬಿಡುಗಡೆಯಾಗಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.