ಲಕ್ಷ್ಮಿ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ…||
ಅಷ್ಟೈಶ್ವರ್ಯವನ್ನು ಕರುಣಿಸುವಂತಹ ಮಹಾಲಕ್ಷ್ಮಿಗೆ ಅಷ್ಟದಳ ಕಮಲ ಅಂದರೆ ಅತ್ಯಂತ ಪ್ರೀತಿಯಂತೆ. ಮಹಾಲಕ್ಷ್ಮಿ ಪೂಜೆಯನ್ನು ಮಾಡುವ ಸಮಯದಲ್ಲಿ ನಾವು ಅಷ್ಟದಳದ ಕಮಲವನ್ನು ಹಾಕಿ ಆನಂತರ ಕಳಶ ವನ್ನು ಸ್ಥಾಪನೆ ಮಾಡಿ, ಅಷ್ಟಲಕ್ಷ್ಮಿಗಳಾದಂತಹ ಆದಿಲಕ್ಷ್ಮಿ, ಸಂತಾನ ಲಕ್ಷ್ಮಿ, ಗಜಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿಜಯಲಕ್ಷ್ಮಿ, ಧೈರ್ಯ ಲಕ್ಷ್ಮಿ, ಮತ್ತು ಮಹಾಲಕ್ಷ್ಮಿ ಹೀಗೆ ಈ ಎಂಟು ರೂಪಗಳನ್ನು.
ಅದರಲ್ಲಿ ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ. ಮಹಾಲಕ್ಷ್ಮಿ ಪೂಜೆಗೆ ಅತ್ಯಂತ ಪ್ರಿಯವಾಗಿರುವುದು ಹಾಲು, ಮೊಸರು, ತುಳಸಿ, ಪರಿಮಳ ದ್ರವ್ಯ, ಇವುಗಳಲ್ಲಿ ಲಕ್ಷ್ಮಿಯ ವಾಸವಿರುತ್ತದೆ. ಆದ್ದ ರಿಂದ ಈ ಎಲ್ಲ ವಸ್ತುಗಳನ್ನು ಉಪಯೋಗಿಸಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ಹಾಗೂ ಲಕ್ಷ್ಮಿ ಪೂಜೆಯನ್ನು ಮಾಡುವಂತಹ ಸಮಯ ದಲ್ಲಿ ನಾವು ಮೊದಲನೆಯದಾಗಿ ಸ್ವಚ್ಛವಾಗಿ ಸ್ನಾನ ಮಾಡಿ ನಾವು ಚೆನ್ನಾಗಿ ಅಲಂಕಾರ ಮಾಡಿಕೊಂಡು ಹಣೆಯಲ್ಲಿ ಕುಂಕುಮ ಕತ್ತಲ್ಲಿ ಮಾಂಗಲ್ಯ ಧಾರಣೆ ಮಾಡಿಕೊಂಡಿರಬೇಕು ಕೆನ್ನೆಯಲ್ಲಿ ಅರಿಶಿನ ಇರಬೇಕು.
ಹೀಗೆ ನಾವು ಹೇಗೆ ಅಲಂಕಾರವನ್ನು ಮಾಡಿಕೊಳ್ಳತ್ತೇವೋ ಅದೇ ರೀತಿಯಾಗಿ ತಾಯಿ ಮಹಾಲಕ್ಷ್ಮಿಗೂ ಕೂಡ ಗೆಜ್ಜೆ ವಸ್ತ್ರ, ಅರಿಶಿಣ, ಗಂಧ, ಕುಂಕುಮ, ಅಕ್ಷತೆ, ಇವೆಲ್ಲವನ್ನು ಕೂಡ ಇಟ್ಟುಕೊಂಡು ಮಹಾಲಕ್ಷ್ಮಿ ಯನ್ನು ಪೂಜೆ ಮಾಡಬೇಕು. ಅದೇ ರೀತಿಯಾಗಿ ಹರದಿರುವಂತಹ ಬಟ್ಟೆಗಳನ್ನು ಹಂಚಿಲ್ಲದ ಸೀರೆಗಳನ್ನು ಹಾಕಿ ಪೂಜೆಯನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ದರಿದ್ರ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಲಕ್ಷ್ಮಿ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಶುದ್ಧವಾದoತಹ ಬಟ್ಟೆಯನ್ನು ಹಾಕಿ ಅಲಂಕಾರ ಮಾಡಿಕೊಂಡು ತಲೆಯನ್ನು ಚೆನ್ನಾಗಿ ಬಾಚಿ ನಂತರ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು. ಹಾಗೂ ನೀವು ಪೂಜೆ ಮಾಡುವಂತಹ ಸಮಯದಲ್ಲಿ ಯಾರಾದರೂ ಹೊಟ್ಟೆ ಹಸಿದಿದೆ ಎಂದು ಬಂದರೆ ಅವರಿಗೆ ಊಟವನ್ನು ಹಾಕಿ ಕೊಟ್ಟು ನಂತರ ನೀವು ಪೂಜೆಯನ್ನು ಮಾಡಬೇಕಾಗುತ್ತದೆ.
ಇದಕ್ಕಾಗಿ ಶ್ರೀಮನ್ನಾರಾಯಣ ದೇವರು ಈ ರೀತಿ ಹೇಳುತ್ತಾರೆ, ಯಾರ ಮನೆಯಲ್ಲಿ ಅತಿಥಿ ಸತ್ಕಾರ ಆಗುತ್ತದೆಯೋ, ಯಾರ ಮನೆಗಳಲ್ಲಿ ದಯೆ ಕರುಣೆ ಎನ್ನುವುದು ಇರುತ್ತದೆಯೋ, ಅಲ್ಲಿ ಭದ್ರವಾಗಿ ಲಕ್ಷ್ಮಿ ನೆಲೆ ನಿಲ್ಲುತ್ತಾಳೆ ಎಂಬ ಮಾತನ್ನು ಹೇಳುತ್ತಾರೆ. ಹಾಗೆಯೇ ಯಾರು ದವಸ ಧಾನ್ಯಗಳನ್ನು ಸ್ವೀಕರಿಸಿ ಇಟ್ಟುಕೊಂಡಿರುತ್ತಾರೆ ಗೋವುಗಳನ್ನು ರಕ್ಷಣೆ ಮಾಡುತ್ತಿರುತ್ತಾರೋ.
ಅಲ್ಲಿ ನಾನು ನೆಲೆಸುತ್ತೇನೆ ಎಂದು ತಾಯಿ ಮಹಾಲಕ್ಷ್ಮಿ ಹೇಳುತ್ತಾಳೆ. ಯಾರ ಮನೆಗಳಲ್ಲಿ ಸದಾ ಜಗಳವಾಡುತ್ತಿರುತ್ತಾರೋ, ಕೆಟ್ಟ ಮಾತು ಗಳನ್ನು ಹೇಳುತ್ತಿರುತ್ತಾರೋ, ಅಂತಹ ಮನೆಯಲ್ಲಿ ನಾನು ನೆಲೆಸುವು ದಿಲ್ಲ ಅಲ್ಲಿ ಅನಿಷ್ಟ ಲಕ್ಷ್ಮಿ ಬಂದು ನೆಲೆಸುತ್ತಾಳೆ ಎಂದು ಸ್ವತಹ ಲಕ್ಷ್ಮಿ ದೇವಿಯೇ ಹೇಳುತ್ತಾಳೆ. ಪ್ರತಿಯೊಬ್ಬರೂ ಕೂಡ ಲಕ್ಷ್ಮಿ ಪೂಜೆಯನ್ನು ಮಾಡುವಂತಹ ಸ್ಥಳಗಳಲ್ಲಿ ಶುದ್ಧೋದಕವನ್ನು ಹಾಕಿ ರಂಗವಲ್ಲಿಯನ್ನು ಹಾಕಿ ಲಕ್ಷ್ಮಿಯ ಪೂಜೆಯನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.