ದಿಯಾ ನಟ ಪೃಥ್ವಿ ಅಂಬಾರ್ ಬದುಕಿನ ನೋವು ಹೆತ್ತ ತಾಯಿಯ ದುರಂತ ದಿಯಾ ಹಿಟ್ ಆಯ್ತು ಅಮ್ಮ ಸತ್ತು ಹೋದಳು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದಿಯಾ ಸೂಪರ್ ಹಿಟ್ ಆಯ್ತು! ಅಮ್ಮ ಸತ್ತು ಹೋದಳು ಸರ್….! ಪೃಥ್ವಿ ಅಂಬಾರ್…||

ಪೃಥ್ವಿ ಅಂಬಾರ್ ಅವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಒಬ್ಬ ಅತ್ಯುತ್ತಮ ನಟ ಎಂದೇ ಹೇಳಬಹುದು. ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವುದಷ್ಟೇ ಅಲ್ಲದೆ ತುಳು ಚಲನ ಚಿತ್ರೋದ್ಯಮಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಇವರು ಮೊದಲನೆ ಯದಾಗಿ ಮಂಗಳೂರಿನಲ್ಲಿ ರೇಡಿಯೋ ಜಾಕಿ ಆಗಿಯೂ ಕೂಡ ಕೆಲಸವನ್ನು ನಿರ್ವಹಿಸುತ್ತಿದ್ದರು.

ಇವರು 2014ರಲ್ಲಿ ಬರ್ಕೆ ಎಂಬ ತುಳು ಚಿತ್ರದ ಮೂಲಕ ಮೊಟ್ಟ ಮೊದಲನೆಯದಾಗಿ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು. ಹಾಗೂ ಇವರು ಕನ್ನಡದಲ್ಲಿ ನಟನೆ ಮಾಡಿರುವಂತಹ ಅತ್ಯುತ್ತಮ ವಾದಂತಹ ಚಿತ್ರ ದಿಯಾ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಾಡುವುದರ ಮೂಲಕ ಎಲ್ಲ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ಎಂದು ಹೇಳಬಹುದು. ಸದ್ಯದಲ್ಲಿ ಇವರು ಜೊತೆ ಜೊತೆಯಲಿ ಧಾರವಾಹಿಯಲ್ಲಿಯೂ ಕೂಡ ಅಭಿನಯವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು.

ಪೃಥ್ವಿ ಅವರು ಮೂಲತಃ ಉಡುಪಿಯವರಾಗಿದ್ದು ಇವರು 17 ಆಗಸ್ಟ್ 1988 ರಲ್ಲಿ ಜನಿಸಿದರು. ಇವರು ನೃತ್ಯಗಾರ ಹಾಗೂ ನಟರು ಕೂಡ ಹೌದು. ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವುದಷ್ಟೇ ಅಲ್ಲದೆ ತುಳು ಭಾಷೆಯಲ್ಲಿಯೂ ಕೂಡ ಹಲವಾರು ಚಿತ್ರಗಳನ್ನು ಮಾಡಿದ್ದಾರೆ. ಹಾಗೂ ಅದರಲ್ಲಿಯೂ ಕೂಡ ಹೆಚ್ಚು ಯಶಸ್ಸನ್ನು ಪಡೆದುಕೊಂಡಿದ್ದಾರೆ, ಇವರು ನಟಿಸಿರುವಂತಹ ದಿಯಾ ಚಿತ್ರ.

ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ಕಥೆಯನ್ನು ಹೊಂದಿದ್ದು ಇದರಿಂದ ಇವರಿಗೆ ಮತ್ತಷ್ಟು ಜನಪ್ರಿಯತೆ ಬಂದಿತು ಎಂದೇ ಹೇಳ ಬಹುದು. ಇವರು ಮೂಲತಃ ಉಡುಪಿಯವರಾಗಿದ್ದು ಮೊದಲೇ ಹೇಳಿ ದಂತೆ ಮಂಗಳೂರು ಹಾಗೂ ಉಡುಪಿಯಲ್ಲಿ ಅತ್ಯುತ್ತಮವಾದಂತಹ ಆರ್ ಜೆ ಆಗಿ ಕೆಲಸ ಮಾಡುತ್ತಿದ್ದರು. ಅದರಲ್ಲೂ ಭೈರಾಗಿ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಜೊತೆ ಅಭಿನಯವನ್ನು ಮಾಡುವುದರ ಮೂಲಕ ತಮ್ಮ ನಟನೆಯನ್ನು ಪ್ರದರ್ಶಿಸಿದ್ದಾರೆ ಎಂದೇ ಹೇಳಬಹುದು.

ಪೃಥ್ವಿ ಅವರ ತಾಯಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು ಆ ಸಮಯ ದಲ್ಲಿ ಇವರು ದಿಯಾ ಚಿತ್ರವನ್ನು ನಟನೆ ಮಾಡಿದ್ದರು ಆ ಯಶಸ್ಸನ್ನು ನೋಡಿದಂತಹ ಪೃಥ್ವಿ ಅವರ ತಾಯಿ ಒಂದು ವರ್ಷದಲ್ಲಿಯೇ ಸಾವನ್ನಪುತ್ತಾರೆ ಈ ಒಂದು ವಿಷಯವನ್ನು ತಿಳಿದಂತಹ ಪೃಥ್ವಿ ಮನುಷ್ಯ ಎಷ್ಟೇ ಹಣಕಾಸು ಇದ್ದರು ಆ ವ್ಯಕ್ತಿ ನಮ್ಮ ಜೊತೆ ಇಲ್ಲ ಎಂದರೆ ಯಾವುದೇ ಹಣಕಾಸು.

ನಮಗೆ ನೆಮ್ಮದಿಯನ್ನು ಕೊಡುವುದಿಲ್ಲ ಎನ್ನುವ ಮಾತನ್ನು ಇವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅದೇ ರೀತಿಯಾಗಿ ನಮ್ಮ ತಾಯಿ ಕೇವಲ ಕ್ಲರ್ಕ್ ಆಗಿ ಸೇರಿಕೊಂಡಂತಹ ಅವರು ರಿಟೈರ್ಡ್ ಆಗುವಂತಹ ಸಮಯದಲ್ಲಿ ಮ್ಯಾನೇಜರ್ ಆಗಿದ್ದರು. ಆದರೆ ಅವರು ಒಂದೇ ವರ್ಷಕ್ಕೆ ಕ್ಯಾನ್ಸರ್ ಸಮಸ್ಯೆಯಿಂದ ತೀರಿ ಹೋಗುತ್ತಾರೆ ಎಂಬ ಮಾಹಿತಿಯನ್ನು ಪೃಥ್ವಿಯವರು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *