ಕೇವಲ ಕುಕ್ಕರ್ ನಿಂದ ಮನೆಯಲ್ಲಿ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸಬಹುದು….!!
ಈಗಿನ ಕಾಲದಲ್ಲಿ ಪ್ರತಿಯೊಂದು ಪದಾರ್ಥಗಳು ಕೂಡ ನಮಗೆ ಕಲುಷಿತವಾಗಿಯೇ ಸಿಗುತ್ತಿದೆ ಎಂದೇ ಹೇಳಬಹುದು. ಅದರಲ್ಲಂತೂ ನಾವು ತಿನ್ನುವಂತಹ ಆಹಾರವು ಕೂಡ ಕಲುಷಿತವಾಗಿಯೇ ಬರುತ್ತಿದೆ. ಆದ್ದರಿಂದಲೇ ಹಲವಾರು ಸಮಸ್ಯೆಗಳನ್ನು ನಾವು ಎದುರಿಸುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಅದೇ ರೀತಿಯಾಗಿ ಈ ದಿನ ನಾವು ಶುದ್ಧವಾದ ತೆಂಗಿನ ಎಣ್ಣೆಯನ್ನು ಹೇಗೆ ತಯಾರಿಸಬಹುದು.
ಹಾಗೂ ಅದಕ್ಕೆ ಅನುಸರಿಸಬೇಕಾದಂತಹ ವಿಧಾನಗಳು ಏನು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮಂಗಳೂರು ಬೇರೆ ಕಡೆ ಅಡುಗೆಗಳಿಗೂ ಕೂಡ ತೆಂಗಿನ ಎಣ್ಣೆಯನ್ನೇ ಉಪಯೋಗಿಸುತ್ತಾರೆ. ಆದರೆ ಅದು ಎಷ್ಟು ಶುದ್ಧವಾಗಿರುತ್ತದೆ ಹಾಗೂ ಅದು ಯಾವುದೇ ರೀತಿಯ ಕೆಮಿಕಲ್ ಮಿಶ್ರೀತವಾಗಿರುವುದಿಲ್ಲವ ಆಗಿರುತ್ತದ ಎನ್ನುವುದು ಯಾರಿಗೂ ಕೂಡ ತಿಳಿಯುವುದಿಲ್ಲ.
ಬದಲಿಗೆ ಅವುಗಳನ್ನು ತಂದು ನಾವು ಅಡುಗೆಗಳಿಗೆ ಉಪಯೋಗಿಸುತ್ತಾರೆ. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನದಲ್ಲಿ ನೀವೇ ನಿಮ್ಮ ಮನೆಯಲ್ಲಿಯೇ ಶುದ್ಧವಾದಂತಹ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು. ಹಾಗೂ ಈ ಒಂದು ವಿಧಾನ ಸುಲಭವಾದಂತಹ ವಿಧಾನವಾಗಿದ್ದು ಪ್ರತಿಯೊಬ್ಬರೂ ಕೂಡ ಈ ರೀತಿ ಮಾಡಿ ನೀವು ಕೂಡ ಅಡುಗೆಗಳಿಗೆ ಅಥವಾ ನಿಮ್ಮ ತಲೆ ಕೂದಲಿಗೆ ಹಚ್ಚುವುದಕ್ಕೆ ಕೊಬ್ಬರಿ ಎಣ್ಣೆಯನ್ನು ನೀವೇ ತಯಾರಿಸಬಹುದು.
ಹಾಗಾದರೆ ಯಾವ ರೀತಿ ತಯಾರಿಸುವುದು ಎನ್ನುವುದನ್ನು ಹಂತ ಹಂತವಾಗಿ ಈ ದಿನ ತಿಳಿಯೋಣ. ನಿಮಗೆ ಎಷ್ಟು ಕೊಬ್ಬರಿ ಎಣ್ಣೆ ಬೇಕೋ ಅಷ್ಟು ತೆಂಗಿನಕಾಯಿಯನ್ನು ಒಂದು ಕುಕ್ಕರ್ ನಲ್ಲಿ ಹಾಕಿ ನೀರನ್ನು ಹಾಕಿ ಒಂದು ವಿಶಲ್ ಕೂಗಿಸಿಕೊಳ್ಳಬೇಕು ನಂತರ ಅದನ್ನು ಆಚೆ ತೆಗೆದು ಕಾಯಿಯನ್ನು ಬೇರೆ ಮಾಡಿಕೊಂಡು ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು.
ನಂತರ ಅಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು ನಂತರ ಅದನ್ನು ಒಂದು ಕಾಟನ್ ಬಟ್ಟೆಯ ಸಹಾಯದಿಂದ ಅದನ್ನು ಹಿಂಡಿ ಕೊಳ್ಳಬೇಕು. ನಂತರ ಆ ತೆಂಗಿನ ಹಾಲನ್ನು ಒಂದು ಬಾಣಲೆಗೆ ಹಾಕಿ ಚೆನ್ನಾಗಿ ಕುಡಿಸಬೇಕು ಹಾಗೂ ಅದರಲ್ಲಿರುವಂತಹ ತೆಂಗಿನಕಾಯಿ ಸಂಪೂರ್ಣವಾಗಿ ಕಪ್ಪಾದಂತಹ ಸಮಯದಲ್ಲಿ ನಿಮಗೆ ಶುದ್ಧವಾದoತಹ ಕೊಬ್ಬರಿ ಎಣ್ಣೆ ಸಿಗುತ್ತದೆ. ಈ ರೀತಿಯಾಗಿ ನೀವು ಮಾಡಿದರೆ ಈ ಒಂದು ಎಣ್ಣೆಯನ್ನು ಅಡುಗೆಗೆ ಹಾಗು ನಿಮ್ಮ ತಲೆ ಕೂದಲಿಗೂ ಕೂಡ ಹಚ್ಚಬಹುದು.
ಇದು ಬಹಳ ಸುಲಭವಾದಂತಹ ವಿಧಾನವಾಗಿದ್ದು. ಹೆಚ್ಚಿನ ಶ್ರಮ ಪಡದೇ ಪ್ರತಿಯೊಬ್ಬರೂ ಕೂಡ ಸುಲಭವಾಗಿ ನಿಮ್ಮ ಮನೆಗಳಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಮೇಲೆ ಹೇಳಿದಂತೆ ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಉಪಯೋಗಿಸಿಲ್ಲ ಬದಲಿಗೆ ಶುದ್ಧವಾದಂತಹ ಕೊಬ್ಬರಿ ಎಣ್ಣೆಯನ್ನು ಪಡೆಯಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.