ನಮ್ಮನ್ನು ಮುಂದೆ ಛೂ ಬಿಟ್ಟು ಅಲೋಕ್ ಬೆಳೆದ ಅಂದಿದ್ಯಾಕೆ ರಾಹುಲ್ ಡಿಟ್ಟೋ…….||
ಈ ರಾಪ್ ಪರಂಪರೆ 80 ಮತ್ತು 90ರ ದಶಕದಲ್ಲಿ ಪಶ್ಚಿಮ ವಲಯದಲ್ಲಿ ಮೊದಲಿಗೆ ಪ್ರಾರಂಭ ವಾದಂತಹ ಒಂದು ಟ್ರೆಂಡ್. ಅಲ್ಲಿಂದ ಪ್ರಭಾವಿತ ಗೊಂಡು ಇದು ಭಾರತಕ್ಕೂ ಕೂಡ ಕಾಲಿಟ್ಟಿತು. ಇವತ್ತಿಗೆ ಭಾರತದಲ್ಲಿ ಸಾಕಷ್ಟು ಜನ ರಾಪರ್ ಗಳು ಇದ್ದಾರೆ. ನಾವು ಇತ್ತೀಚಿಗಷ್ಟೇ ಹಿಂದಿಯ ಬಿಗ್ ಬಾಸ್ ನಲ್ಲಿ ವಿನ್ ಆದಂತಹ ಎಂ ಸಿ ಸ್ಟ್ಯಾಂಡ್ ಎಂಬ ರಾಪರ್ ಬಗೆ ತಿಳಿದುಕೊಂಡೆವು.
ಈ ರಾಪ್ ಲೋಕದಲ್ಲಿ ಯಾವುದೇ ಇಬ್ಬರು ರಾಪ್ ಗಳ ನಡುವೆ ಯಾವುದೇ ಮನಸ್ತಾಪ ಇದ್ದರೆ ಅದು ರಾಪ್ ಹಾಡು ಅಥವಾ ಡಿಸ್ ರಾಪ್ ಮೂಲಕವಾಗಿ ಹೊರಹೊಮ್ಮುತ್ತದೆ. ಇದೇನು ಹೊಸದೇನಲ್ಲ. ಒಬ್ಬನ ವಿರುದ್ಧ ಇನ್ನೊಬ್ಬ ಡಿಸ್ ರಾಪ್ ಮಾಡಿ ಟಾಂಗ್ ಕೊಡುವುದು ಕಾಲೆಳೆಯುವುದು ಇಲ್ಲಿ ಸರ್ವೇಸಾಮಾನ್ಯ.
ಇದನ್ನು ಪದಗಳ ಸಮರ ಎಂದು ಹೇಳುತ್ತಾರೆ. ಇಂತಹ ವಾರ್ ಇದೀಗ ಕನ್ನಡದ ರಾಪ್ ವಲಯದಲ್ಲಿಯೂ ಕೂಡ ಭಾರಿ ಸುದ್ದಿಯಾಗಿದೆ. ಕನ್ನಡದ ಮಟ್ಟಿಗೆ ಈ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು ಯಾರು ಎಂದರೆ ರಾಹುಲ್ ಡಿಟ್ಟೋ, MC ಬಿಜ್ಜು, ಆಲೋಕ್, ಈ ರೀತಿ ಮುಂತಾದವರು. ಮೊನ್ನೆಯಷ್ಟೇ ರಾಹುಲ್ ಡಿಟ್ಟೋ ಅವರ ನಂಗನ್ಸಿದ್ದು ಪಾರ್ಟ್ 2 ಬಿಡುಗಡೆಯಾಗಿ ಸಕ್ಕತ್ ಸದ್ದನ್ನು ಮಾಡಿದೆ.
ಬಿಡುಗಡೆ ಕಂಡ ತಕ್ಷಣ ಜನರ ಗಮನವನ್ನು ಸೆಳೆದಂತಹ ಈ ಹಾಡು ಇದೀಗ ಸಾಕಷ್ಟು ವಿವಾದಗಳಿಗೂ ಕೂಡ ಕಾರಣವಾಗಿದೆ. ಈ ಹಿಂದೆ 2018ರಲ್ಲಿ ಇದರ ಮೊದಲ ಪಾರ್ಟ್ ರಿಲೀಸ್ ಆಗಿತ್ತು. ಆಗಲೂ ಕೂಡ ಈ ಹಾಡು ಸಾಕಷ್ಟು ವಿವಾದ ಹಾಗೂ ಚರ್ಚೆಯನ್ನು ಎಬ್ಬಿಸಿತ್ತು. ಅದರಲ್ಲಿ ಈ ರಾಹುಲ್ ಡಿಟ್ಟೋ ರಾಪ್ ಹೆಸರಲ್ಲಿ.
ಅದರ ವರ್ಚಸ್ಸು ಹಾಳು ಮಾಡುವ ಫೇಕ್ ಗಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋದ ಆರಂಭದಲ್ಲಿ ಇದು ಯಾರಿಗೂ ಅನ್ವಯಿಸುವುದಿಲ್ಲ ಹಾಗೇನಾದರೂ ಅನ್ವಯಿಸಿದರೆ ಅದಕ್ಕೆ ನಾನೇನು ಮಾಡುವುದಕ್ಕಾಗುವುದಿಲ್ಲ ಏಕೆಂದರೆ ಇದು ನಂಗನ್ಸಿದ್ದು ಎಂದೇ ಈ ಹಾಡನ್ನು ಶುರು ಮಾಡಿದ್ದರು. ಅವರು ಇದನ್ನು ತಾನೊಬ್ಬ ರಾಪರ್ ಅಂತ ಹೇಳಿಕೊಳ್ಳುವಂತಹ ಚಂದನ್ ಶೆಟ್ಟಿ ಅವರ ವಿರುದ್ಧನೆ ಮಾಡಿರು ವಂತಹ ಡಿಸ್ ರಾಪ್ ಅಂತ ಅನೇಕರು ವಾದಿಸಿದ್ದರು.
ಈ ಹಾಡು ಬಂದಾಗ ರಾಹುಲ್ ಡಿಟ್ಟೋ, ಆಲೋಕ್, MC ಬಿಜ್ಜು, ಮುಂತಾದವರೆಲ್ಲ ಒಟ್ಟಿಗೆ ಇದ್ದರು. ಈ ಒಂದು ಸಾಂಗ್ ಕೂಡ ಆಲೋಕ್ ಅವರ ಪ್ರೊಡಕ್ಷನ್ ನಲ್ಲಿ ಅವರದ್ದೇ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು. ಆದರೆ ಇವಾಗ ರಿಲೀಸ್ ಆಗಿರುವಂತಹ ನಂಗನ್ಸಿದ್ದು ಪಾರ್ಟ್ 2 ನಲ್ಲಿ ಅವರು ಟಾರ್ಗೆಟ್ ಮಾಡಿರುವುದು ಆಲೋಕ್ ಅವರನ್ನೇ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.