ಕಾಮಕಸ್ತೂರಿ ಬೀಜಗಳ ಬಗ್ಗೆ ಯಾರು ಹೇಳಿರದ ಸತ್ಯ..ತಿಳಿದವನೆ ಬಲ್ಲ ಕಾಮಕಸ್ತೂರಿಯ ಆ ಒಂದು ಶಕ್ತಿ..

ಕಾಮ ಕಸ್ತೂರಿ ಬೀಜಗಳ ಉಪಯೋಗಗಳು…..||

WhatsApp Group Join Now
Telegram Group Join Now

ಕಾಮಕಸ್ತೂರಿ ಬೀಜದಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶಗಳು ಅಡಗಿದೆ ಹಾಗೆಯೇ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೆ ಇದನ್ನು ಯಾರು ಸೇವನೆ ಮಾಡಬಹುದು ಹಾಗೆ ಯಾರ್ಯಾರು ಸೇವನೆ ಮಾಡಬಾರದು. ಹೀಗೆ ಈ ವಿಷಯವಾಗಿ ಸಮಾಜದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಕೊಳ್ಳುತ್ತಾ ಹೋಗೋಣ.

ಕಾಮಕಸ್ತೂರಿ ಬೀಜವು ಅದ್ಭುತವಾದಂತಹ ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂಥದ್ದು, ಇದು ಶೀತ ಪ್ರಧಾನವಾಗಿರು ವಂತದ್ದು. ಹಾಗೆಯೇ ಇದರ ಸೇವನೆಯಿಂದಾಗಿ ಪಿತ್ತ ಶಮನವಾಗುತ್ತದೆ, ವಾತ ವಿಕಾರಗಳು ಕೂಡ ದೂರವಾಗುತ್ತದೆ. ಹಾಗಾದರೆ ಕಾಮಕಸ್ತೂರಿ ಬೀಜದಲ್ಲಿ ಯಾವುದೆಲ್ಲ ರೀತಿಯ ಪೋಷಕ ತತ್ವಗಳು ಇದೆ ಎಂದು ನೋಡುವುದಾದರೆ. ಮೊದಲನೆಯದಾಗಿ ಇದರಲ್ಲಿ ವಿಟಮಿನ್ ಎ ಅಂಶ ಹೇರಳವಾಗಿ ಇದ್ದು. ಇದರ ಜೊತೆಗೆ ಕ್ಯಾಲ್ಸಿಯಂ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ.

ಐರನ್, ಜಿಂಕ್, ಜೊತೆಗೆ ಇದರಿಂದ ಹಲವಾರು ಸೂಕ್ಷ್ಮ ಪೋಷಕ ತತ್ವಗಳು ಸಹ ಇದರಿಂದ ದೊರೆಯುತ್ತದೆ. ಹಾಗಾದರೆ ಇದನ್ನು ಯಾವ ಒಂದು ವಿಧಾನದಲ್ಲಿ ಬಳಸುವಂಥದ್ದು ಅದು ಹೇಗೆ ಎನ್ನುವುದರ ಬಗ್ಗೆ ನೋಡುವುದಾದರೆ. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಸೇವನೆ ಮಾಡಬಹುದು, ಇದರ ಜೊತೆಗೆ ಹಾಲಿನ ಜೊತೆಯೂ ಕೂಡ ಮಿಶ್ರಣ ಮಾಡಿ ಸೇವನೆ ಮಾಡಬಹುದು.

ಅಥವಾ ಇದನ್ನು ಮಜ್ಜಿಗೆಯ ಜೊತೆಯೂ ಕೂಡ ಮಿಶ್ರಣ ಮಾಡಿ ಸೇವನೆ ಮಾಡಬಹುದು. ಹೀಗೆ ಮೇಲೆ ಹೇಳಿದ ಎಲ್ಲ ವಿಧಾನಗಳನ್ನು ಅನುಸರಿ ಇದನ್ನು ಸೇವನೆ ಮಾಡುತ್ತಾ ಇರುವುದರಿಂದ ಇದರ ಅದ್ಭುತ ಲಾಭಗಳನ್ನು ನೀವು ಪಡೆದುಕೊಳ್ಳಬಹುದು. ಕಾಮ ಕಸ್ತೂರಿ ಬೀಜವನ್ನು ಒಂದು ಚಮಚ ನೆನೆ ಹಾಕಿದರೆ ಸಾಕು ಅದು ಒಂದು ಲೋಟದಷ್ಟು ಆಗುತ್ತದೆ. ಇದು ಯಾವುದೇ ರೀತಿಯ ಕಹಿ ಅಂಶವನ್ನು ಕೂಡ ಹೊಂದಿರುವುದಿಲ್ಲ ಬದಲಿಗೆ ಸ್ವಲ್ಪ ಪ್ರಮಾಣದಲ್ಲಿ ಒಗರು ಅಂಶವನ್ನು ಹೊಂದಿದ್ದು.

ಪ್ರತಿಯೊಬ್ಬರೂ ಕೂಡ ಇದನ್ನು ಸೇವನೆ ಮಾಡಬಹುದು. ಜೊತೆಗೆ ಕಾಮ ಕಸ್ತೂರಿ ಬೀಜವನ್ನು ನೆನೆ ಹಾಕಿ ನೀವು ಜ್ಯೂಸ್ ಸೇವನೆ ಮಾಡುತ್ತಿದ್ದರೆ ಅದರೊಟ್ಟಿಗೆ ಕೂಡ ಇದನ್ನು ಸೇವನೆ ಮಾಡಬಹುದು. ಈ ರೀತಿ ಕಾಮಕಸ್ತೂರಿ ಬೀಜವನ್ನು ಹಾಕಿ ಸೇವನೆ ಮಾಡುವುದರಿಂದ ನಿಮ್ಮ ಶರೀರಕ್ಕೆ ಮತ್ತಷ್ಟು ಬಲ ಸಿಗುತ್ತದೆ.

ಹಾಗೆ ಇದರಲ್ಲಿ ವಿಟಮಿನ್ ಎ ಹೇರಳವಾಗಿ ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಮತ್ತು ಇದು ನಮ್ಮ ಧಾತು ಕ್ಷಯವನ್ನು ತಡೆಯುತ್ತದೆ. ಹಾಗೆಯೇ ಇದು ನಮ್ಮ ಸಪ್ತ ಧಾತುಗಳನ್ನು ಕೂಡ ಬಲಿಷ್ಠಗೊಳಿಸುತ್ತದೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ಮನಸ್ಸು ಕ್ರಿಯಾಶೀಲವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">