ಕಿವಿಗಳ ಹೊಲಸು ತೆಗೆಯುವ ವಿಧಾನ….ಕಿವಿ ನೋವು ಕಿವಿ ತುರಿಕೆಗೆ ಮನೆ ಮದ್ದು..ಈ ವಿಧಾನ ಬಳಸಿ..

ಕಿವಿಗಳ ಹೊಲಸು ತೆಗೆಯುವ ವಿಧಾನ….ಕಿವಿ ನೋವು ಕಿವಿ ತುರಿಕೆಗೆ ಮನೆ ಮದ್ದು

WhatsApp Group Join Now
Telegram Group Join Now

ಕಿವಿ ದೇಹದ ಒಂದು ಜ್ಞಾನೇಂದ್ರಿಯ ಎಂದೇ ಹೇಳಬಹುದು. ಸಾಮಾನ್ಯ ವಾಗಿ ಎಲ್ಲರಿಗೂ ತಿಳಿದಿರುವಂತೆ ದೇಹದಲ್ಲಿ ಪಂಚೇಂದ್ರಿಯಗಳು ಇದ್ದಾವೆ ಅವುಗಳು ಯಾವುವು ಎಂದರೆ ಕಣ್ಣು, ಕಿವಿ, ಮೂಗು, ಚರ್ಮ, ಹಾಗೂ ನಾಲಿಗೆ, ಅವುಗಳಲ್ಲಿ ಕಿವಿ ಕೂಡ ಒಂದು. ಈ ಎಲ್ಲ ಪಂಚೇಂದ್ರಿಯಗಳಲ್ಲಿಯೂ ಕೂಡ ಒಂದೊಂದು ವಿಧಾನ.

ಉಪಯೋಗವನ್ನು ಪಡೆದುಕೊಳ್ಳುತ್ತೇವೆ. ಇವುಗಳಿಂದ ಶಬ್ದ ಸ್ಪರ್ಶ ರೂಪ ರಸ ಗಂಧ ಎನ್ನುವಂತಹ ವಿಷಯಗಳನ್ನು ನಾವು ತಿಳಿದುಕೊಳ್ಳ ಬಹುದು. ಅದೇ ರೀತಿಯಾಗಿ ಬಹಳ ಮುಖ್ಯವಾಗಿ ಕಿವಿಯಿಂದ ಗ್ರಹಿಸುವಂತಹ ಬಹಳ ಮುಖ್ಯವಾದಂತಹ ಕೆಲಸ ಯಾವುದು ಎಂದರೆ ಶಬ್ದ ಹೌದು ಪ್ರತಿಯೊಬ್ಬರೂ ಕೂಡ ಯಾವುದೇ ವಿಚಾರವಾಗಿ ಗ್ರಹಿಸಬೇಕು ಎಂದರೆ ಅವರಿಗೆ ಕಿವಿ ಅತ್ಯಗತ್ಯವಾಗಿ ಇರಲೇಬೇಕು ಹಾಗೂ ಅದು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಬೇಕು.

ಆದ್ದರಿಂದ ನಾವು ನಮ್ಮ ಕಿವಿಯ ಆರೋಗ್ಯವನ್ನು ಬಹಳಷ್ಟು ಜಾಗರೂ ಕತೆಯಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ ಕೆಲವೊಬ್ಬರು ಕಿವಿಯಲ್ಲಿ ಕಸ ಸೇರಿಕೊಂಡಿದೆ ಎನ್ನುವಂತಹ ಉದ್ದೇಶದಿಂದ ಕೈಗೆ ಸಿಕ್ಕಂತಹ ಪದಾರ್ಥಗಳನ್ನು ಉಪಯೋಗಿಸಿ ಕಿವಿಯ ಒಳಗಡೆ ಇರು ವಂತಹ ಕಸವನ್ನು ತೆಗೆಯುತ್ತಿರುತ್ತಾರೆ. ಆದರೆ ಆ ರೀತಿ ಮಾಡುವುದು ಬಹಳ ಅಪಾಯಕಾರಿಯಾಗಿರುತ್ತದೆ ಏಕೆಂದರೆ ಕಿವಿಯ ಒಳಗೆ ಸೂಕ್ಷ್ಮಾತಿ ಸೂಕ್ಷ್ಮ ನರಗಳು ಇರುತ್ತದೆ.

ಹಾಗೇನಾದರೂ ನೀವು ಕಿವಿಯ ಒಳಗೆ ಬೇರೆ ಪದಾರ್ಥಗಳನ್ನು ಹಾಕಿ ದರೆ ಅವುಗಳು ಆ ಒಂದು ಸೂಕ್ಷ್ಮ ನರಗಳನ್ನು ತೊಂದರೆಗೆ ಉಂಟಾಗು ತ್ತದೆ. ಆದ್ದರಿಂದ ಅವೆಲ್ಲವುಗಳನ್ನು ಕೂಡ ಉಪಯೋಗಿಸುವುದು ತಪ್ಪು ಬದಲಿಗೆ ಅದಕ್ಕೆ ಉತ್ತಮವಾದಂತಹ ವಿಧಾನವನ್ನು ಅನುಸರಿಸುವುದರ ಮೂಲಕ ಕಿವಿಯನ್ನು ಸ್ವಚ್ಛ ಮಾಡಿಕೊಳ್ಳುವುದು ಉತ್ತಮ ಅದಕ್ಕಾಗಿ ಆಯುರ್ವೇದದಲ್ಲಿ ಒಂದು ವಿಧಾನವು ಕೂಡ ಇದೆ. ಆದ್ದರಿಂದ ನೀವು ಆ ವಿಧಾನವನ್ನು ಅನುಸರಿಸುವುದು ಇನ್ನೂ ಉತ್ತಮವಾಗಿರುತ್ತದೆ.

ಇದರ ಜೊತೆ ಪ್ರತಿಯೊಬ್ಬರೂ ಕೂಡ ಅನುಸರಿಸಬೇಕಾದಂತಹ ವಿಧಾನಗಳು ಯಾವುದು ಎಂದರೆ ವಾರಕ್ಕೆ ಒಮ್ಮೆಯಾದರೂ ಕೂಡ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದು ಉತ್ತಮ ತಲೆಯ ನೆತ್ತಿ ಭಾಗಕ್ಕೆ ಹರಳೆಣ್ಣೆಯನ್ನು ಹಾಕುವುದರಿಂದ ದೇಹ ತಂಪಾಗುತ್ತದೆ ಜೊತೆಗೆ ಯಾವುದೇ ರೀತಿಯಾದಂತಹ ಸಮಸ್ಯೆ ಬರುವುದಿಲ್ಲ ದೇಹದಲ್ಲಿರು ವಂತಹ ಎಲ್ಲ ಉಷ್ಣಾಂಶವನ್ನು ಇದು ತೆಗೆದು ಹಾಕುವುದಕ್ಕೆ ಸಹಾಯಮಾಡುತ್ತದೆ.

ಇದರ ಜೊತೆ ಕಿವಿಯ ಒಳಗೆ ಎರಡರಿಂದ ಮೂರು ಹನಿ ಹರಳೆಣ್ಣೆ ಯನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ಆನಂತರ ಸ್ನಾನ ಮಾಡುವುದರಿಂದ ಕಿವಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ. ಜೊತೆಗೆ ಈ ರೀತಿ ಎಣ್ಣೆಯನ್ನು ಹಾಕುವುದರಿಂದ ಕಿವಿಯ ಒಳಗಡೆ ಇರುವಂತಹ ಎಲ್ಲಾ ಹೊಲಸು ಕೂಡ ಆಚೆ ಬರುತ್ತದೆ ಆನಂತರ ಅದನ್ನು ನೀವು ಚಿಮಟ್ಟಿಗೆ ಸಹಾಯದಿಂದ ಮೆಲ್ಲನೆ ತೆಗೆಯುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]