ಗುರು ಪುಷ್ಯಾಮೃತ ಯೋಗದ ದಿನ ಈ ವಸ್ತು ಖರೀದಿ ಮಾಡಿದರೆ ಶುಭವಾಗುತ್ತೆ.. » Karnataka's Best News Portal

ಗುರು ಪುಷ್ಯಾಮೃತ ಯೋಗದ ದಿನ ಈ ವಸ್ತು ಖರೀದಿ ಮಾಡಿದರೆ ಶುಭವಾಗುತ್ತೆ..

ಗುರು ಪುಷ್ಯಾಮೃತ ಯೋಗ ಮತ್ತೆ ಕೂಡಿಬಂದಿದೆ, ತಪ್ಪದೇ ಮಕ್ಕಳಿಗೆ ಈ ಸಮಯದಲ್ಲಿ ಸಣ್ಣ ಶ್ಲೋಕ ಪಾರಾಯಣ ಮಾಡಿಸಿ ನಂತರ ಹೇಳಿ..!!

WhatsApp Group Join Now
Telegram Group Join Now

ಗುರುವಾರದ ದಿನ ನಮಗೆ ಸೂರ್ಯೋದಯದ ಕಾಲಕ್ಕೆ ಪುನರ್ವಸು ನಕ್ಷತ್ರ ಇದ್ದರೂ ಸಹ ಆ ದಿನ 11 ಗಂಟೆ 59 ನಿಮಿಷಕ್ಕೆ ಪುನರ್ವಸು ನಕ್ಷತ್ರ ಮುಗಿದು ಪುಷ್ಯ ನಕ್ಷತ್ರ ಬರುತ್ತದೆ. ಅಂದರೆ ಗುರುವಾರ ಪುಷ್ಯ ನಕ್ಷತ್ರ ಸ್ಪರ್ಶವಾದ ಕೂಡಲೇ ಗುರು ಪುಷ್ಯಾಮೃತ ಯೋಗ ಎಂದೇ ಹೇಳುತ್ತೇವೆ.

ಶಾಸ್ತ್ರದ ಪ್ರಕಾರ ಕೆಲವು ವಾರಗಳು ತಿಥಿಗಳು ಕೆಲವು ನಕ್ಷತ್ರಗಳು ಸಯ್ಯೋಗ ಗೊಂಡಾಗ ವಿಶೇಷವಾದ ಯೋಗ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗೂ ಅದೇ ರೀತಿಯಾಗಿ ಆ ಒಂದು ಸಮಯ ದಲ್ಲಿ ನಾವು ಯಾವುದೇ ರೀತಿಯ ಕೆಲಸವನ್ನು ಮಾಡಿದರು ಅಂದರೆ ನಾವು ಒಳ್ಳೆಯ ಯೋಗದಲ್ಲಿ ಮಾಡಿದರೆ ನಮಗೆ ಅದು ಸರ್ವಸಿದ್ಧಿ ಕೊಡುತ್ತದೆ ಎಂದು ಹೇಳುತ್ತಾರೆ.

ಹಾಗಾದರೆ ಈ ದಿನ ಗುರು ಪುಷ್ಯಾಮೃತ ಯೋಗದಲ್ಲಿ ಯಾವ ಒಂದು ಮಂತ್ರವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಮಕ್ಕಳಲ್ಲಿ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ ಅಂದರೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಅವರು ಮುಂದಿನ ದಿನಗಳಲ್ಲಿ ಹೆಚ್ಚು ಯಶಸ್ವಿಯಾಗುವಂತೆ ಈ ಒಂದು ಶ್ಲೋಕವನ್ನು ನೀವು ನಿಮ್ಮ ಮಕ್ಕಳಿಗೆ ಈ ಸಮಯದಲ್ಲಿ ಹೇಳಿಕೊಡಲೇ ಬೇಕು ಇದರಿಂದ ಅವರ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ.

ಹಾಗೆಯೇ ಈ ಗುರುವಾರ ಮತ್ತೊಂದು ವಿಶೇಷತೆ ಏನು ಎಂದರೆ ಗುರುವಾರದ ದಿನ ಪುಷ್ಯ ನಕ್ಷತ್ರ ಚಂದ್ರ ಮಿಥುನ ರಾಶಿಯಲ್ಲಿ ಸ್ಥಿತನಾಗಿ ದ್ದರೂ ಕೂಡ ಸಂಜೆ 4:00 ನಂತರ ತನ್ನ ಸ್ವಂತ ರಾಶಿ ಆದಂತಹ ಕರ್ಕಾಟಕ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ. ಇದರಿಂದ ಪೂರ್ಣ ಪ್ರಮಾಣದ ಫಲವನ್ನು ಕೊಡುತ್ತಾನೆ. ಆದ್ದರಿಂದ ಈ ಒಂದು ಗುರುವಾರ ದಿನ ನಾವು ಯಾವುದೇ ರೀತಿಯ

ಕೆಲಸ ಕಾರ್ಯ ಪೂಜೆ ಮಾಡಿದರು ಅದು ಮನುಷ್ಯನಿಗೆ ಸಂಪತ್ತು ಸಮೃದ್ಧಿ, ಯಶಸ್ಸನ್ನು ತಂದುಕೊಡುತ್ತದೆ. ಹಾಗೆಯೇ ಆ ದಿನ ಮಾಡಿ ದಂತಹ ಎಲ್ಲ ಕೆಲಸಗಳು ಕೂಡ ನಮಗೆ ಯಶಸ್ಸನ್ನು ತಂದುಕೊಡುತ್ತದೆ. ಹಾಗೂ ಈ ದಿನ ನೀವು ಬಂಗಾರವನ್ನು ಖರೀದಿ ಮಾಡಿದರೆ ಬಹಳ ಶ್ರೇಷ್ಠ ಯೋಗ ಕೂಡಿಬರುತ್ತದೆ. ಇದರ ಜೊತೆ ಯಾರು ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾರೋ ದೊಡ್ಡವರಿರಬಹುದು ಅಥವಾ ಚಿಕ್ಕ ಮಕ್ಕಳಿರಬಹುದು.

ಅವರು ಈ ಒಂದು ಸಮಯದಲ್ಲಿ ಅಂದರೆ ಗುರುವಾರದಿಂದ ಒಂದು ತಿಂಗಳ ಅವಧಿಯಲ್ಲಿ ಈ ಒಂದು ಪೂಜಾ ವ್ರತವನ್ನು ಅನುಸರಿಸಿದರೆ ಅವರಿಗೆ ಜ್ಞಾನ ಅಭಿವೃದ್ಧಿಯಾಗುತ್ತದೆ ಮಕ್ಕಳು ಯಶಸ್ಸನ್ನು ಪಡೆಯು ತ್ತಾರೆ. ಒಂದು ಶ್ಲೋಕವನ್ನು ಗುರುವಾರದ ದಿನ ಬೆಳಗಿನ ಸಮಯ ಬ್ರಾಹ್ಮಿ ಮುಹೂರ್ತದಲ್ಲಿ ಮಕ್ಕಳಿಗೆ ಹೇಳಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">