ಕುರ ಎಂದು ನೆಗ್ಲೆಟ್ ಮಾಡಬೇಡಿ …ಇದರಿಂದ ಆಪತ್ತು ಕಟ್ಟಿಟ್ಟಬುತ್ತಿ ಡಾ ಅಂಜಿನಪ್ಪ ಅವರು ಹೇಳೊದೇನು ನೋಡಿ

ಕುರ ಎಂದು ನೆಗ್ಲೆಟ್ ಮಾಡಿದರೆ ಕಾದಿದೆ ಆಪತ್ತು…….!!

WhatsApp Group Join Now
Telegram Group Join Now

ದೇಹದ ಯಾವುದೇ ಭಾಗದಲ್ಲಿ ಈ ಒಂದು ಕುರ ಸಮಸ್ಯೆ ಕಾಣಿಸಬಹುದು. ಅದರಲ್ಲೂ ಕೆಲವೊಬ್ಬರಿಗೆ ಬೆರಳುಗಳ ಮಧ್ಯ ಭಾಗದಲ್ಲಿ ಕೆಲವೊಬ್ಬರಿಗೆ ಹಿಂಭಾಗದಲ್ಲಿ ಅದರಲ್ಲೂ ಹೆಚ್ಚಿನ ಜನಕ್ಕೆ ತೊಡೆಗಳ ಮಧ್ಯಭಾಗದಲ್ಲಿ ಹೀಗೆ ಹೆಚ್ಚಾಗಿ ಬೆವರು ಯಾವ ಜಾಗದಲ್ಲಿ ಬರುತ್ತದೆಯೋ ಆ ಜಾಗದಲ್ಲಿ ಈ ಒಂದು ಸಮಸ್ಯೆ ಅಂದರೆ ಕುರ ಕಾಣಿಸಿಕೊಳ್ಳುತ್ತದೆ.

ಹೆಚ್ಚಿನ ಜನ ಈ ಸಮಸ್ಯೆ ಬಂದರೆ ಬೇರೆಯವರಿಗೆ ಹೇಳುವುದಕ್ಕೂ ಕೂಡ ಮುಜುಗರ ಪಡುತ್ತಾರೆ. ಆದರೆ ಈ ಸಮಸ್ಯೆ ಬಂದರೆ ಅದರಿಂದ ಎಷ್ಟು ನೋವನ್ನು ಅನುಭವಿಸುತ್ತಾರೆ ಎಂದರೆ ಈ ಸಮಸ್ಯೆ ಬಂದವರಿ ಗಷ್ಟೇ ತಿಳಿದಿರುತ್ತದೆ. ಆದ್ದರಿಂದ ಯಾರೇ ಆಗಲಿ ಈ ಸಮಸ್ಯೆ ಬಂದ ತಕ್ಷಣ ಅದನ್ನು ಮುಚ್ಚಿಡಬೇಡಿ ಬದಲಿಗೆ ಆ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಮುಂದಾಗಿ.


ಹಾಗೇನಾದರೂ ನೀವು ಅದನ್ನು ಮುಚ್ಚಿಡಲು ಬಯಸಿದರೆ ಮುಂದಿನ ದಿನದಲ್ಲಿ ಅದರಿಂದ ಹೆಚ್ಚಿನ ಪ್ರಮಾಣದ ತೊಂದರೆಯನ್ನು ಅನುಭವಿಸ ಬೇಕಾಗುತ್ತದೆ. ಆದ್ದರಿಂದ ಕುರ ಎಂದು ತಕ್ಷಣ ಇದನ್ನು ಮುಚ್ಚಿಡುವುದರ ಬದಲು ಅದನ್ನು ದೂರ ಮಾಡಿಕೊಳ್ಳುವುದು ಉತ್ತಮ. ಅದರಲ್ಲೂ ಈ ಒಂದು ಸಮಸ್ಯೆ ಹೆಚ್ಚಾಗಿ ಬೇಸಿಗೆಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಏಕೆ ಎಂದರೆ ಪ್ರತಿಯೊಬ್ಬರೂ ಕೂಡ ಈ ಒಂದು ಸಮಯದಲ್ಲಿ ಹೆಚ್ಚಾಗಿ ಬೆವರುತ್ತಿರುತ್ತಾರೆ.

ಹಾಗೆ ಅವರ ದೇಹವು ಹೆಚ್ಚಾಗಿ ಉಷ್ಣಾoಶದಿಂದ ಕೂಡಿರುತ್ತದೆ ಹೀಗಾಗಿ ಈ ಒಂದು ಸಮಸ್ಯೆ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿರುತ್ತದೆ. ಹಾಗೂ ಹೆಚ್ಚಾಗಿ ಯಾರು ಉಷ್ಣಾಂಶದ ಪ್ರಮಾಣ ಹೆಚ್ಚು ಮಾಡುವಂತ ಆಹಾರವನ್ನು ಸೇವನೆ ಮಾಡುತ್ತಾರೋ ಅವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ತಂಪಾಗಿರುವ ತಣ್ಣಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ.

ಅದರಲ್ಲೂ ಈ ಸಮಸ್ಯೆ ಕಾಣಿಸಿಕೊಂಡರೆ ಯಾವ ರೀತಿಯ ತೊಂದರೆ ಉಂಟಾಗುತ್ತದೆ ಎಂದರೆ ಕುರ ಆಗಿರುವಂತಹ ಜಾಗದಲ್ಲಿ ಹೆಚ್ಚಾಗಿ ನೀರಿನ ಅಂಶ ಸೇರಿಕೊಳ್ಳುತ್ತದೆ ಅಂದರೆ ಕೀವು ಸೇರಿಕೊಳ್ಳುತ್ತದೆ ಇದನ್ನು ಹೊರ ಹಾಕಿದರೆ ಮಾತ್ರ ನಿಮಗೆ ಈ ಸಮಸ್ಯೆ ದೂರವಾಗುತ್ತದೆ. ಬದಲಿಗೆ ಕೆಲವೊಬ್ಬರು ಇದನ್ನು ಹಾಗೆ ಬಿಡುತ್ತಾರೆ ನಂತರ ಇದರಿಂದ ಇನ್ನೂ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ.

ಈ ಒಂದು ಕೀವು ಆಚೆ ಬಂದರೆ ಆ ಒಂದು ಜಾಗದಲ್ಲಿ ಹೆಚ್ಚು ನೋವು ಉಂಟಾಗುತ್ತಿರುತ್ತದೆ. ಕೆಲವೊಮ್ಮೆ ಆ ಜಾಗದಲ್ಲಿ ಚಿಕ್ಕ ಚಿಕ್ಕ ಗಾಯಗಳು ಕೂಡ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಯಾರೇ ಆಗಲಿ ಸಣ್ಣಪುಟ್ಟ ಸಮಸ್ಯೆ ಎಂದು ಬೇಜವಾಬ್ದಾರಿತನ ಮಾಡುವ ಬದಲು ಅದನ್ನು ದೂರ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">