ಗಂಡ ಹೆಂಡತಿಯ ಕಣ್ಣೀರು ಬರಿಸುವ ಕಥೆ..ಪ್ರತಿ ದಿನ ಗಂಡ ಹೆಂಡತಿ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು…

ಗಂಡ ಮತ್ತು ಹೆಂಡತಿಯ ಕಣ್ಣೀರು ಬರಿಸುವ ಕಥೆ……||

WhatsApp Group Join Now
Telegram Group Join Now

ಪ್ರತಿ ದಿನ ಒಂದೇ ಸಮಯಕ್ಕೆ ಗಂಡ ಹೆಂಡತಿ ರೈಲಿನಲ್ಲಿ ಒಟ್ಟಿಗೆ ಪ್ರಯಾ ಣಿಸುತ್ತಿದ್ದರು ಯುವಕನೊಬ್ಬ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು ಅವನು ಪ್ರತಿದಿನವೂ ಗಂಡ ಹೆಂಡತಿಯನ್ನು ನೋಡುತ್ತಿದ್ದನು. ರೈಲಿನಲ್ಲಿ ಕೂತು ಗಂಡ ಹೆಂಡತಿ ತುಂಬಾನೆ ಮಾತನಾಡುತ್ತಿದ್ದರು. ಅವರಿಬ್ಬರ ಜೋಡಿ ಪರ್ಫೆಕ್ಟ್ ಜೋಡಿ ಅನಿಸುತಿತ್ತು. ಹೆಂಡತಿ ಸ್ವೆಟರ್ ಹೆಣೆಯುತ್ತಾ ಮಾತಾಡುತ್ತಿದ್ದಳು.

ಒಂದು ದಿನ ಪತಿ-ಪತ್ನಿ ರೈಲಿನಲ್ಲಿ ಬಾರದೆ ಇದ್ದಾಗ, ಯುವಕನಿಗೆ ಸ್ವಲ್ಪ ಶಾಕ್ ಆಯ್ತು, ಏಕೆಂದರೆ ಅವನಿಗೆ ಪ್ರತಿದಿನ ಅವರನ್ನು ನೋಡುವ
ಅಭ್ಯಾಸವಾಗಿತ್ತು. ಗಂಡ ಹೆಂಡತಿ ಒಂದು ತಿಂಗಳ ಕಾಲ ಆ ರೈಲಿನಲ್ಲಿ ಪ್ರಯಾಣಿಸಲಿಲ್ಲ. ಅವರು ಎಲ್ಲೋ ಹೊರಗೆ ಹೋಗಿರಬಹುದು ಎಂದು ಯುವಕ ಭಾವಿಸಿದನು ಒಂದು ದಿನ ಪತಿ ಮಾತ್ರ ರೈಲಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಯುವಕ


ನೋಡಿದನು, ಹೆಂಡತಿ ಅವನೊಂದಿಗೆ ಇರಲಿಲ್ಲ. ಗಂಡ ತುಂಬಾ ಬೇಸರವಾಗಿದ್ದ. ಯುವಕನಿಗೆ ಕುತೂಹಲ ತಡೆಯೋಕಾಗದೆ ಹೋಗಿ ಗಂಡನನ್ನು ಕೇಳಿದನು. ನಿಮ್ಮ ಹೆಂಡತಿ ಇಂದು ನಿಮ್ಮೊಂದಿಗೆ ಇಲ್ಲ. ಗಂಡ ಉತ್ತರಿಸಲಿಲ್ಲ, ಯುವಕನು ಮತ್ತೊಮ್ಮೆ ಅವರ ಹೆಂಡತಿಯ ಬಗ್ಗೆ ಕೇಳಿದನು, ಅವಳು ಈಗ ಈ ಜಗತ್ತಿನಲ್ಲಿ ಇಲ್ಲ ಆಕೆಗೆ ಕ್ಯಾನ್ಸರ್ ಇತ್ತು ಎಂದು ಕೇಳಿ ಯುವಕನಿಗೆ ತುಂಬಾ ಶಾಕ್ ಆಯ್ತು.

ಯುವಕನು ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಬಯಸಿದ. ಹೆಂಡತಿಗೆ ಲಾಸ್ಟ್ ಸ್ಟೇಜ್ ಕ್ಯಾನ್ಸರ್ ಇತ್ತು ವೈದ್ಯರೂ ಕೂಡ ಭರವಸೆ ಕಳೆದುಕೊಂಡಿದ್ದರು ಅವಳಿಗೆ ಈ ವಿಷಯ ಮೊದಲೇ ಗೂತ್ತಿತು, ಆದರೆ ನಾವು ಹೆಚ್ಚು ಹೆಚ್ಚು ಸಮಯ ಒಟ್ಟಿಗೆ ಕಳೆಯಬೇಕು ಎಂಬ ಹಠ ಅವಳಲ್ಲಿತ್ತು. ಅದಕ್ಕೆ ಪ್ರತಿದಿನ ನಾನು ಆಫೀಸಿಗೆ ಹೋದಾಗ ಅವಳೂ ಕೂಡ ನನ್ನ ಜೊತೆ ಬರುತ್ತಿದಳು.

ನಾನು ನನ್ನ ಆಫೀಸ್ ಹತ್ತಿರವಿರುವ ಸ್ಟೇಷನ್‌ನಲ್ಲ ಇಳಿಯುತಿದ್ದೆ, ಅಲ್ಲಿಂದ ನಾನು ನನ್ನ ಆಫೀಸಿಗೆ ಹೋಗುತ್ತಿದ್ದೆ ಮತ್ತು ಅವಳು ಮನೆಗೆ ತಿರುಗಿ ಹೋಗುತ್ತಿದ್ದಳು. ಕಳೆದ ತಿಂಗಳು ಅವಳು ನನ್ನನ್ನು ಬಿಟ್ಟು ಹೋದಳು ಎಂದು ಕೊರಗಿ ಅಳುತಿದ್ದ ಗಂಡನ ಆ ಯುವಕ ಸಮಾಧಾನ ಮಾಡಿದ. ಇದ್ದಕ್ಕಿದ್ದಂತೆ ಯುವಕನ ಗಮನ ಸ್ವೆಟರ್ ಮೇಲೆ ಬಿತ್ತು. ಅವನ ಹೆಂಡತಿ ರೈಲಿನಲ್ಲಿ ಹೆಣೆಯುತಿದ್ದ ಸ್ವೆಟರ್ ಅದು.

ಗಂಡ ಹೆಂಡತಿಯ ಅಪಾರ ಪ್ರೀತಿ ಆ ಸ್ವೆಟರ್ ಮೇಲೆ ಕಂಡುಬರುತ್ತಿತ್ತು. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಮುರಿಯಲಾಗದಿರ ಬೇಕು, ಸಾವು ಮಾತ್ರ ಅವರನ್ನು ಬೇರ್ಪಡಿಸುವಂತಾಗಿರಬೇಕು ಪ್ರತಿ ಸುಖ ದುಃಖದಲ್ಲೂ ಹೆಂಡತಿ ತನ್ನ ಗಂಡನ್ನು ಬೆಂಬಲಿಸಿದರೆ, ಪತಿಯೂ ತನ್ನ ಹೆಂಡತಿಗೆ ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲು ಬಯಸುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]