ಆಪ್ತರು ಅಂತ ಅತಿಯಾಗಿ ನಂಬಿದ್ದಕ್ಕೆ ಈ ಸೂರಿಗೆ ಸಿಕ್ಕಿದ್ದು ಎಂಥ ಬಹುಮಾನ ಗೊತ್ತಾ……?
ಈಗ ಎಲ್ಲಾ ಕಡೆ ಈ ಸೂರಿ ಅವರದ್ದೇ ಮಾತು. ಮೊನ್ನೆ ಮಾರ್ಚ್ 31 ನೇ ತಾರೀಖು ತಮಿಳಿನ ಬಹು ನಿರೀಕ್ಷಿತ ಚಿತ್ರ ವಾದಂತಹ ವಿಡುತಲೈ ತೆರೆಕಂಡಿತ್ತು. ಈ ಚಿತ್ರ ತನ್ನ ಕಥೆ ಹಾಗೂ ನಟನೆಯ ವಿಷಯವಾಗಿ ಎಲ್ಲಾ ಕಡೆ ಬಾರಿ ಮೆಚ್ಚುಗೆಯನ್ನು ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಈ ಸೂರಿ ತನ್ನ ಕರಿಯರ್ ನಲ್ಲಿ ಅನೇಕ ಏರಿಳಿತಗಳನ್ನು ಕಂಡಂತಹ ನಟ. ಕೊನೆಗೂ ಈ ಒಂದು ಸಿನಿಮಾ ಅವರಿಗೆ ಸಿನಿ ರಂಗದಲ್ಲಿ ಉತ್ತಮ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಿದೆ. ನಟ ಸೂರಿ ಅವರು ಈ ಹಿಂದೆ ತಮಿಳಿನ ಹಾಸ್ಯ ಕಲಾವಿದರಾದಂತಹ ಗೌಂಡಮ್ ಮಣಿ ಅವರ ಜೊತೆ ಎಷ್ಟೋ ಏಟುಗಳನ್ನು ತಿಂದಿದ್ದಾರೆ.
ಈ ಸೂರಿ ತಮಿಳುನಾಡಿಕ ಗಣ್ಯಾತಿ ಗಣ್ಯ ನಟರುಗಳ ಜೊತೆ ಅಭಿನಯಿಸಿದ್ದಾರೆ. ಆರಂಭದಲ್ಲಿ ಇವರು ಕಾಮಿಡಿ ನಟ ಮಾತ್ರ, ಕಳೆದ 22 ಹಾಗೂ 23 ವರ್ಷಗಳಿಂದಲೂ ಕೂಡ ಅನೇಕ ಚಿತ್ರಗಳಲ್ಲಿ ಹಾಸ್ಯ ಹಾಗೂ ಸೈಡ್ ರೋಲ್ ಗಳಲ್ಲಿ ನಟಿಸುತ್ತಾ ಬಂದಿರುವಂತಹ ಸೂರಿ ತಮ್ಮ ವೃತ್ತಿಯ ಜರ್ನಿಯಲ್ಲಿ ಅನೇಕ ಕಷ್ಟಗಳನ್ನು ಕಂಡಂತವರು. ಸ್ವಂತ ಆಪ್ತರಿಂದ ಹಾಗೂ ಸ್ನೇಹಿತರಿಂದ ದೊಡ್ಡ ದೊಡ್ಡ ವಂಚನೆಗೂ ಕೂಡ ಇವರು ಗುರಿಯಾಗಿದ್ದಾರೆ.
ಇವರಿಗೆ ತಾವು ಹುಟ್ಟಿ ಬೆಳೆದಂತಹ ಹಳ್ಳಿಯಲ್ಲಿ ಭೂಮಿಯನ್ನು ಖರೀದಿ ಮಾಡಬೇಕು ಎಂಬ ಆಸೆ ಇತ್ತು. ತನ್ನದೇ ಶ್ರಮದ ಸಂಪಾದನೆಯಲ್ಲಿ ಖರೀದಿಸಿದಂತಹ ಜಾಗದಲ್ಲಿ ತಮ್ಮ ಜೀವನವನ್ನು ಸಾಗಿಸಬೇಕು ಎಂಬ ಆಸೆ ಇತ್ತು. ಈ ರೀತಿ ತಮ್ಮ ಸಿನಿಮಾ ಶೂಟಿಂಗ್ ವೇಳೆಯಲ್ಲಿ ತನಗೆ ಜಾಗ ಬೇಕು ಎಂದು ಹೇಳುತ್ತಿದ್ದಂತಹ ಇವರ ಮಾತುಗಳನ್ನು ಕೇಳಿಸಿಕೊಂಡಂತಹ ಇವರ ಆಪ್ತ ಸ್ನೇಹಿತರೊಬ್ಬರು.
ಇವರಿಗೆ ಹಳ್ಳಿಯಲ್ಲಿ ಯಾಕೆ? ಚೆನ್ನೈ ಸಿಟಿಯಲ್ಲಿಯೇ ನೀನು ಬೇಕಾದ ಜಾಗವನ್ನು ಖರೀದಿ ಮಾಡಿ ಮುಂದುವರಿಯಬಹುದು ಎಂದು ಸಲಹೆಯನ್ನು ಕೊಟ್ಟರು. ಹೀಗೆ ಈ ಒಂದು ಐಡಿಯಾವನ್ನು ಕೊಟ್ಟವರು ಕೂಡ ಸೂರಿ ಅವರ ಆಪ್ತ ಸ್ನೇಹಿತರೆ. ಚೆನ್ನೈನಲ್ಲಿ ಸುಮಾರು ಒಂದು ಮುಕ್ಕಾಲು ಎಕರೆ ಜಾಗವನ್ನು ಸ್ವತಹ ತಾನೇ ನಿನಗೆ ಬುಕ್ ಮಾಡುತ್ತೇನೆ ಎಂದು ಹೇಳಿ ಇವರ ಹತ್ತಿರ ಕೋಟಿಗಟ್ಟಲೆ ಹಣವನ್ನು ಪೀಕಿ.
ಇವರನ್ನು ಆತ ನಂಬಿಸಿದ್ದ, ಈತ ನನ್ನ ಸ್ನೇಹಿತನೇ ನನಗೆ ಹಿತವನ್ನು ಬಯಸುತ್ತಾನೆ ಎಂದು ನಂಬಿದಂತಹ ಸೂರಿ ಅವರಿಗೆ ಎರಡು ವರ್ಷದ ಬಳಿಕ ಅವರಿಗೆ ತಿಳಿದಂತಹ ಸತ್ಯ ಏನು ಎಂದರೆ ಅವರ ಹಣದಲ್ಲಿ ಬುಕ್ ಆದಂತಹ ಆ ಜಾಗ, ಅವರು ಯಾರನ್ನು ಅತಿಯಾಗಿ ನಂಬಿದ್ದರೋ ಅವರೇ ತನಗೆ ಮೋಸ ಮಾಡಿದ್ದಾರೆ ಎಂದು ತಿಳಿಯುವ ಹೊತ್ತಿಗೆ ಸೂರಿ ಅವರು ತಮ್ಮ ಕೋಟಿಗಟ್ಟಲೆ ಬೆವರಿನ ಹಣವನ್ನು ಕಳೆದುಕೊಂಡಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.