ನಿಂಬೆಹಣ್ಣಿನ ಸೇವನೆ ಯಾರು ಮಾಡಬಾರದು ಗೊತ್ತಾ?
ನಿಂಬೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ಆಯುರ್ವೇದ ಚಿಕಿತ್ಸೆಯಲ್ಲಿ, ಮನೆ ಮದ್ದು ಮಾಡುವಾಗ ಕೂಡ ನಿಂಬೆಹಣ್ಣಿನದೇ ಮೇಲುಗೈ. ನಿಂಬೆಹಣ್ಣಿನ ರಸ, ನಿಂಬೆಹಣ್ಣಿನ ಉಪ್ಪಿನಕಾಯಿ ಈ ರೀತಿ ಪ್ರತಿದಿನ ಕೂಡ ನಮ್ಮ ಆಹಾರದ ಭಾಗವಾಗಿ ನಿಂಬೆಹಣ್ಣಿನ ಅಂಶ ದೇಹ ಸೇರುತ್ತಲೇ ಇರುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಎನ್ನುವ ಒಂದು ಅಂಶ ಇರುತ್ತದೆ. ಅದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಿಟ್ರಿಕ್ ಅಂಶ ದೇಹ ಸೇರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಹೊಸ ಚೈತನ್ಯ ಬರುತ್ತದೆ.
ನಿಂಬೆ ರಸವು ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ಹೊರಹಾಕಲು ಸಹಾಯ ಮಾಡುತ್ತದೆ. ಪ್ರತಿ ದಿನ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಷಾಪಾನ ಮಾಡುವ ಸಮಯದಲ್ಲಿ ಒಂದು ಲೋಟ ನೀರಿಗೆ ಒಂದು ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಕುಡಿಯುವುದರಿಂದ ಅವರ ದೇಹದಲ್ಲಿರುವ ಟಾಕ್ಸಿನ್ ಅಂಶವೆಲ್ಲ ಹೊರ ಹೋಗುತ್ತದೆ. ಪ್ರತಿದಿನ ತಪ್ಪದೆ ಇದನ್ನು ಅಭ್ಯಾಸ ಮಾಡಿಕೊಂಡರೆ ಅವರೇ ಆಶ್ಚರ್ಯ ಪಡುವ ರೀತಿಯಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
,ಆಯುರ್ವೇದ ತಜ್ಞರು ಮತ್ತು ಹಿರಿಯರು ಎಲ್ಲರೂ ಸಹ ನಿಂಬೆರಸದ ಸೇವನೆಯನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಎಲ್ಲರ ಆರೋಗ್ಯಕ್ಕೂ ಕೂಡ, ಎಲ್ಲರ ದೇಹದ ಪರಿಸ್ಥಿತಿಗೂ ಇದು ಒಗ್ಗುವುದಿಲ್ಲ. ಕೆಲವರು ನಿಂಬೆ ಹಣ್ಣಿನ ರಸ ಸೇವನೆ ಮಾಡಲೇಬಾರದು. ಯಾರು ನಿಂಬೆಹಣ್ಣಿನ ಸೇವನೆ ಮಾಡಬಾರದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ ನೋಡಿ.
ಯಾರು ಪ್ರತಿ ದಿನ ಐರನ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಅವರು ನಿಂಬೆಹಣ್ಣಿನ ಸೇವನೆ ಮಾಡಬಾರದು. ಹೊಟ್ಟೆಯಲ್ಲಿ ಅಲ್ಸರ್ ಇರುವವರು ಕೂಡ ನಿಂಬೆಹಣ್ಣಿನ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಇತ್ತೀಚಿಗೆ ಎಲ್ಲರಿಗೂ ಹಲ್ಲು ನೋವಿನ ಸಮಸ್ಯೆ ಇದೆ. ಯಾರಿಗೆಲ್ಲಾ ಹಲ್ಲಿನಲ್ಲಿ ಸೆನ್ಸಿಟಿವಿಟಿ ಇರುತ್ತದೆ, ಬಿಸಿ ಮತ್ತು ತಂಪು ತಿಂದಾಗ ಹಲ್ಲಿಗೆ ತಾಗಿ ನೋವು ಉಂಟಾಗುತ್ತದೆ, ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ನಿಂಬೆ ಹಣ್ಣಿನ ಸೇವನೆ ಮಾಡಬಾರದು.
ಅಸಿಡಿಟಿ ತೊಂದರೆ ಇರುವವರು ಕೂಡ ನಿಂಬೆಹಣ್ಣಿನ ಸೇವನೆ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ಇಂಥವರು ಸೇವನೆ ಮಾಡುವುದರಿಂದ ಅವರ ಅಸಿಡಿಟಿ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಕಿಡ್ನಿಯ ಸಮಸ್ಯೆ ಇರುವವರು ಕೂಡ ಯಾವುದೇ ಕಾರಣಕ್ಕೂ ನಿಂಬೆಹಣ್ಣಿನ ಸೇವನೆ ಮಾಡಲೇಬಾರದು. ವೈದ್ಯರು ಕೂಡ ಅವರಿಗೆ ಇಂತಹದ್ದೇ ಸಲಹೆಯನ್ನು ನೀಡುತ್ತಾರೆ.
ಮೈಗ್ರೇನ್ ತಲೆನೋವು ಎನ್ನುವುದು ಎಲ್ಲರನ್ನು ಹಿಂಡಿ ಹಿಪ್ಪೆ ಮಾಡುವ ಒಂದು ಕಾಯಿಲೆ. ಈ ರೀತಿ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಯಾವುದೇ ಕಾರಣಕ್ಕೂ ನಿಂಬೆ ಹಣ್ಣಿನಿಂದ ತಯಾರಿಸಿದ ಪದಾರ್ಥಗಳನ್ನು ಆಗಲಿ ಅಥವಾ ನಿಂಬೆ ರಸವನ್ನೇ ಆಗಲಿ ಸೇವಿಸಬಾರದು. ಮೂಳೆಗಳಲ್ಲಿ ತೊಂದರೆ ಇರುವವರು ಕೂಡ ಯಾವುದೇ ಕಾರಣಕ್ಕೂ ನಿಂಬೆಹಣ್ಣಿನ ಸೇವನೆ ಮಾಡಬಾರದು.