ಡೆಂಗ್ಯು ಜ್ವರ ಬಂದಾಗ ಈ ಮನೆಮದ್ದು ಟ್ರೈ ಮಾಡಿ ನೈಸರ್ಗಿಕ ವಾದ ಶಕ್ತಿಶಾಲಿಯಾದ ಅತ್ಯುತ್ತಮ ಮನೆಮದ್ದು ಇದು... - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಡೆಂಗ್ಯೂ ಜ್ವರ ಕಡಿಮೆಯಾಗಲು ಅತ್ಯುತ್ತಮ ಮನೆ ಮದ್ದು…..||ಪಪ್ಪಾಯ ಎಲೆ ರಸ…….||

ಡೆಂಗ್ಯೂ ಜ್ವರ ಒಂದು ವೈರಸ್ ನ ಮೂಲಕ ಹರಡುವಂತಹ ಜ್ವರವಾ ಗಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವಂತಹ ಈ ಒಂದು ಸಮಸ್ಯೆ ಅತಿ ಬೇಗನೆ ಎಲ್ಲರಿಗೂ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದೇ ಹೇಳಬಹುದು. ಈ ಒಂದು ರೋಗದ ಲಕ್ಷಣಗಳು ಏನು ಎಂದರೆ ಮೈ ಕೈ ನೋವು, ಕೀಲು ನೋವು, ಹಾಗೂ ಜ್ವರ, ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಹಾಗೂ ಡೆಂಗ್ಯೂ ಜ್ವರ ವಿಪರೀತವಾದರೆ ರಕ್ತಸ್ರಾವ ಉಂಟಾಗಿ ದೇಹದಲ್ಲಿ ರಕ್ತದ ಒತ್ತಡ ಕುಸಿತ ಕಂಡು ಸಾವು ಕೂಡ ಉಂಟಾಗ ಬಹುದು. ಈ ಒಂದು ರೋಗ ಬಂದ ತಕ್ಷಣವೇ ಯಾವುದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಈ ಒಂದು ರೋಗ ಬಂದು ಏಳರಿಂದ ಎಂಟು ದಿನ ಕಳೆದ ಮೇಲೆ ಆ ವ್ಯಕ್ತಿಯಲ್ಲಿ.


ಮೈ ಕೈ ನೋವು, ಕೀಲು ನೋವು ವಾಂತಿ, ವಾಕರಿಕೆ, ಕಣ್ಣುಗಳ ಹಿಂಭಾಗ ದಲ್ಲಿ ನೋವು ಕಾಣಿಸಿಕೊಳ್ಳುವುದು, ದೇಹದಲ್ಲಿ ನಿಶಕ್ತಿ ಕಾಣಿಸಿಕೊಳ್ಳು ವುದು, ಇವೆಲ್ಲವೂ ಈ ಡೆಂಗ್ಯೂ ಜ್ವರದ ಲಕ್ಷಣಗಳಾಗಿದೆ. ಈ ಒಂದು ಸಮಸ್ಯೆಯನ್ನು ನೀವೇನಾದರೂ ನಿರ್ಲಕ್ಷ ವಹಿಸಿದರೆ ಆ ವ್ಯಕ್ತಿ ತನ್ನ ಪ್ರಾಣವನ್ನು ಸಹ ಕಳೆದುಕೊಳ್ಳಬಹುದು ಅಷ್ಟು ಅಪಾಯಕಾರಿ ಈ ಒಂದು ರೋಗ ಎಂದು ಹೇಳಬಹುದು.

ಮೊದಲೇ ಹೇಳಿದಂತೆ ಈ ಒಂದು ಸಮಸ್ಯೆ ಅವರಲ್ಲಿ ಇದ್ದರೆ ಅವರಿಗೆ ವಿಪರೀತವಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಹಲ್ಲಿನ ವಸಡುಗಳಲ್ಲಿ ಹಾಗೂ ಮೂಗುಗಳಲ್ಲಿ ರಕ್ತಸ್ರಾವ ಉಂಟಾಗುವುದು ಜೊತೆಗೆ ಉಸಿರಾಟದ ತೊಂದರೆಗಳು ಸಹ ಕಾಣಿಸುತ್ತದೆ ಹಾಗಾಗಿ ಇಂತಹ ಲಕ್ಷಣಗಳು ಕಂಡರೆ ನೀವು ತಕ್ಷಣವೇ ಹೋಗಿ ಅದಕ್ಕೆ ಚಿಕಿತ್ಸೆ ಯನ್ನು ಪಡೆದುಕೊಳ್ಳುವುದು ಉತ್ತಮ ಅದೇ ರೀತಿಯಾಗಿ ಈ ದಿನ ಡೆಂಗ್ಯೂ ಜ್ವರ ಇದ್ದರೆ ತಕ್ಷಣದಲ್ಲಿ.

ಯಾವ ಒಂದು ಮನೆ ಮದ್ದನ್ನು ಮಾಡಿ ಉಪಯೋಗಿಸಬಹುದು ಹಾಗೂ ಆ ಒಂದು ಮನೆಮದ್ದು ಯಾವುದು ಅದನ್ನು ಹೇಗೆ ಉಪಯೋಗಿಸು ವುದು ಎಂದು ಈ ಕೆಳಗಿನಂತೆ ತಿಳಿಯೋಣ. ಇದಕ್ಕೆ ಬೇಕಾಗುವ ಪದಾರ್ಥಗಳು ಪಪ್ಪಾಯ ಗಿಡದ ಎಲೆಗಳು ಹೌದು. ಇದರಲ್ಲಿ ವಿಟಮಿನ್ಸ್ ಗಳು ಪೋಷಕಾಂಶಗಳು ಮಿನರಲ್ಸ್ ಗಳು ಹೇರಳವಾಗಿ ಇರುತ್ತದೆ. ಹಾಗಾಗಿ ಇದು ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುವುದಕ್ಕೆ ಬಹಳ ಸಹಾಯಕಾರಿಯಾಗಿದೆ.

ಮೊದಲು ಪಪ್ಪಾಯ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಬೇಕು. ಆ ರಸವನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬರುವುದರಿಂದ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆ ಹಾಗೂ ಇದು ಕಹಿ ಅಂಶವನ್ನು ಹೊಂದಿರುವುದರಿಂದ ಮಕ್ಕಳಿಗೆ ಇದನ್ನು ಕೊಡುವಾಗ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಕೊಡುವುದ ರಿಂದ ಮಕ್ಕಳಿಗೂ ಸಹ ಇದನ್ನು ಸುಲಭವಾಗಿ ಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *