ಕರಗಿತು ಕೆಜಿಎಫ್ ಬಾಬು ಆಸ್ತಿ ಆದರೂ ನಂ ಒನ್ ಶ್ರೀಮಂತ ಏನಿದೆ ಎಷ್ಟಿದೆ ಏನೇನಿದೆ ನೋಡಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಏನೇನಿದೆ? ಎಷ್ಟಿದೆ? ನೋಡಿ?

ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿರುವ ಬೆನ್ನೆಲು ಅವರ ಬಳಿ ಇರುವ ಆಸ್ತಿ ಕೂಡ ಬಹಿರಂಗ ವಾಗಿದೆ. ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಕೆಜಿಎಫ್ ಬಾಬುರವರ ಪತ್ನಿ ಕೂಡ ಚುನಾವಣೆಗೆ ನಿಂತಿದ್ದಾರೆ. ಬೆಂಗಳೂರಿನ ಚಿಕ್ಕ ಪೇಟೆಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಅವರು ತಮ್ಮ ಕುಟುಂಬದ ಆಸ್ತಿ ಕೂಡ ಘೋಷಿಸಿಕೊಂಡಿದ್ದಾರೆ.

ಕೆಜಿಎಫ್ ಬಾಬು ರವರ ಪತ್ನಿ ಎಷ್ಟು ಶ್ರೀಮಂತೆ? ಕೆಜಿಎಫ್ ಬಾಬು ಎಷ್ಟು ಕೋಟಿಯ ಒಡೆಯ ಇವರ ಒಂದು ದಿನದ ಆದಾಯ ಎಷ್ಟು? ಇವರ ಬಳಿ ಏನೇನು ಇದೆ ಎಲ್ಲವನ್ನು ನೋಡೋಣ. ಕೆಜಿಎಫ್ ಬಾಬಾ ಎಷ್ಟು ಶ್ರೀಮಂತ ಗೊತ್ತಾ? ಕೆಜಿಎಫ್ ಬಾಬುರವರ ನಿಜವಾದ ಹೆಸರು ಯೂಸುಫ್ ಷರೀಫ್ ಆದರೆ ಕೆಜಿಎಫ್ ಬಾಬು ಅಂತಾನೆ.


ಇವರು 2021 ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದರು. ಆಗ ತಮ್ಮ ಕುಟುಂಬದ ಒಟ್ಟು ಆಸ್ತಿ 1744 ಕೋಟಿ ಅಂತ ಘೋಷಿಸಿಕೊಂಡಿದ್ದರು. ಇದೀಗ 2023ರಲ್ಲಿ ಇವರ ಪತ್ನಿಯಾದ ಶಾಜಿಯಾತರಣಂ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಒಟ್ಟು ಆಸ್ತಿ ಬರೋಬ್ಬರಿ 1622 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಎರಡು ವರ್ಷದಲ್ಲಿ 172 ಕೋಟಿ ಎಷ್ಟು ಆಸ್ತಿ ಕರಗಿದೆ ಎಂದು ಅರ್ಥ ಪತ್ನಿಯದ್ದು ಬರಿ 40 ಲಕ್ಷದಷ್ಟು ಆಸ್ತಿ! ಬಾಬುಬಳಿ ಇದೆ 1621 ಕೋಟಿ
ಕೆಜಿಎಫ್ ಬಾಬು ರವರ 1622 ಕೋಟಿ ಆಸ್ತಿಯಲ್ಲಿ ಶಾಜಿಯಾ ತರಣದ್ದು ಬರೀ 40 ಲಕ್ಷ ಮಾತ್ರ.1,62,171 ಕೋಟಿ ಇರೋದು ಕೆಜಿಎಫ್ ಬಾಬು ಹೆಸರಲ್ಲಿ 1538 ಕೋಟಿ ಚಿರಾಸ್ತಿಯೇ ಇದೆ. ಚಿರಾಸ್ತಿ ಎಂದರೆ ಜಮೀನು ಮತ್ತು ಕಟ್ಟಡಗಳೆಲ್ಲ ಬರುತ್ತೆ.

ಕಟ್ಟಡಗಳ ಪ್ಯಾಕೇಜ್ ವಿಚಾರದಲ್ಲಿ ಎಂಟಿಬಿ ನಾಗರಾಜ್ ಮತ್ತು ಡಿಕೆಶಿ ಯನ್ನೇ ಹೊಡೆದಂತೆ ಕೆಜಿಎಫ್ ಬಾಬು ರವರು. ಬಾಬುರ ವರ್ಷದ ಆದಾಯ 43 ಕೋಟಿ. ಕೆಜಿಎಫ್ ಬಾಬು ರವರ ಒಂದು ವರ್ಷದ ಆದಾಯ ಬರೋಬ್ಬರಿ 46 ಕೋಟಿ. ವರ್ಷಕ್ಕೆ 46 ಕೋಟಿ ಅಂದರೆ ತಿಂಗಳಿಗೆ 3.75 ಕೋಟಿ. ದಿನಕ್ಕೆ 12.75 ಲಕ್ಷ ಗಂಟೆಗೆ 50,000 ಆಗುತ್ತೆ.

ಬಾಬುಗೆ ಇಷ್ಟೆಲ್ಲ ಆದಾಯ ಬರುತ್ತಲ್ಲ ಇವರ ಪತ್ನಿಯ ಆದಾಯ ಎಷ್ಟು ಇರಬಹುದು ಎಂಬ ಪ್ರಶ್ನೆ ಮೂಡಬಹುದು? ಇವರ ಪತ್ನಿಯ ಆದಾಯ ಸೊನ್ನೆ! ಬಾಬು ಬಳಿ ಇದೆ ಎರಡು ಕೋಟಿಯ ಕಾರು! ಒಂದುವರೆ ಕೆಜಿ ಎಷ್ಟೇ ಚಿನ್ನ ಮತ್ತು ವಜ್ರ. ಕೆಜಿಎಫ್ ಬಾಬುಬಳಿ ಬರೋಬ್ಬರಿ ಎರಡು ಕೋಟಿ ಮೌಲ್ಯದ ರೋಲ್ಸ್ ರಾಯಲ್ಸ್ ಕಾರಿದೆ. ಅದರ ಜೊತೆಗೆ 49 ಲಕ್ಷದ ಮೌಲ್ಯದ ಫಾರ್ಚುನರ್ ಕಾರ್ ಕೂಡ ಇದೆ. ಅದಲ್ಲದೆ ಒಂದೂ ವರೆ ಲಕ್ಷದಷ್ಟು ಚಿನ್ನ ಮತ್ತು ವಜ್ರವಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *