ಮುಟ್ಟಾದ ಹೆಣ್ಣು ಮನೆಯೊಳಗಿದ್ದರೆ ಮೈಲಿಗೆಯಾಗುತ್ತಾ ? ಅವಧೂತ ಶ್ರೀ ವಿನಯ್ ಗುರುಗಳ ಈ ಮಾತು ಕೇಳಿ

ಮುಟ್ಟಾದ ಹೆಣ್ಣು ಮನೆಯೊಳಗೆ ಇದ್ದರೆ ಮೈಲಿಗೆ ಯಾಗುತ್ತಾ…? ಅವಧೂತ ಶ್ರೀ ವಿನಯ್ ಗುರೂಜಿ…..||

WhatsApp Group Join Now
Telegram Group Join Now

ಹೆಂಗಸರಲ್ಲಿ ಮುಟ್ಟಾಗುವುದು ಮೈಲಿಗೆ ಎನ್ನುವವರಿಗೆ ಶಾಸ್ತ್ರೀಯ ಭಾಷೆಯಲ್ಲಿ ಉತ್ತರಿಸುವುದಾದರೆ ಕಾಮಾಕ್ಯ ಕ್ಷೇತ್ರದಲ್ಲಿ ದೇವಿಯು ಮುಟ್ಟಾಗುತ್ತಾರೆ. ಆಕೆಯ ಯೋನಿ ಭಾಗದಿಂದ ರಕ್ತ ಹರಿಯುತ್ತದೆ ಎನ್ನಲಾಗುತ್ತದೆ. ಅದನ್ನೇ ಮಹಾ ಯೋಗಿಗಳು, ತಪಸ್ವಿಗಳು ಮಹಾಪ್ರಸಾದ ಎಂದು ಸ್ವೀಕರಿಸುತ್ತಾರೆ. ಆಕೆಯನ್ನು ಮಹಾ ಮಾತೆಯಾಗಿ ಜಗತ್ತು ಒಪ್ಪಿಕೊಂಡಿದೆ. ಸಾಮಾನ್ಯ ಹೆಣ್ಣೂ ಅವಳ ಸಮಾನವೇ ಆಗಿದ್ದಾಳೆ.

ಹೀಗಾಗಿ ಆ ದೇವಿ ಪವಿತ್ರ ಎಂದು ಒಪ್ಪಿಕೊಳ್ಳುವುದಾದರೆ ನಮ್ಮದೇ ಮನೆಯ ಹೆಣ್ಣುಮಕ್ಕಳು ಮುಟ್ಟಾದರೆ ಅಪವಿತ್ರ ಎಂದು ಒಪ್ಪಿಕೊಳ್ಳುವುದು ಎಷ್ಟು ಸರಿ, ಹೆತ್ತ ತಾಯಿ, ಹೊತ್ತ ಭೂಮಿ, ಹಾಲುಣಿಸುವ ಗೋ ಮಾತೆ, ವೇದಗಳನ್ನು ಹೇಳಿಕೊಟ್ಟ ಸರಸ್ವತಿ, ಪ್ರಣವ ಮಂತ್ರವನ್ನು ಉಪದೇಶಿಸಿದ ಗಾಯತ್ರಿ ಇವರೆಲ್ಲರೂ ಹೆಣ್ಣೆ.
ನಮ್ಮ ದೇಶ, ಭಾಷೆ, ಜಲ ಎಲ್ಲವನ್ನೂ ನಾವು ಹೆಣ್ಣೆಂದೇ ಆರಾಧಿಸಿದ್ದೇವೆ. ಮುಟ್ಟಾದಾಗ ನಮ್ಮ ಮನೆಯ ಹೆಣ್ಣು ಅಪವಿತ್ರಳೆಂದಾದರೆ ನಾವು ಆರಾಧಿಸುವುದೆಲ್ಲವೂ ಅಪವಿತ್ರವೇ?

ಹಿಂದಿನ ಕಾಲದಲ್ಲಿ ಇಂದಿನಂತೆ ಮಹಿಳೆಯರಿಗೆ ಆರೋಗ್ಯ ಕಾಳಜಿ ವಹಿಸುವಂತಹ ವ್ಯವಸ್ಥೆಗಳಿರಲಿಲ್ಲ, ಈ ಕಾರಣಕ್ಕೆ ಜ್ಞಾನಿಗಳು ರಕ್ತಸ್ರಾವದಿಂದ ನಿಸ್ತೇಜಳಾದ ಹೆಣ್ಣಿಗೆ ಕೆಲಸದ ಸುಸ್ತು ತಾಕಬಾರದು ಎಂಬ ಉದ್ದೇಶದಿಂದ ನಿಯಮಿತ ಕಾಲಕ್ಕೆ ಅವಳು ಹೊರಗಿರಬೇಕೆಂಬ ನಿಯಮಗಳನ್ನು ಮಾಡಲಾಯಿತು. ಇದು ಮೈಲಿಗೆ ಎನ್ನುವ ಭಾವದಿಂದ ಆದದ್ದಲ್ಲ. ಕಾಲಾನಂತರದಲ್ಲಿ ಅತಿಬುದ್ಧಿವಂತಿಕೆಯ ಜನರು ಅದಕ್ಕೆ ಮೈಲಿಗೆಯ ಪಟ್ಟ ಕಟ್ಟಿದರು.

ಮಹಿಳೆಯರನ್ನು ಮನೆಯವರಿಂದ ದೂರವಿಡುತ್ತಿದ್ದ ಕಾರಣ ಆ ಸಮಯದಲ್ಲಿ ರಕ್ತದ ಕಾರಣದಿಂದ ಕ್ರಿಮಿಗಳು ಮಕ್ಕಳನ್ನು ಬಾಧಿಸುವ ಸಾಧ್ಯತೆಯಿತ್ತು. ಈ ಕಾರಣಕ್ಕೆ ಮಗುವಿನಿಂದ ತಾಯಿಯನ್ನು ಕೆಲ ದಿನಗಳ ಕಾಲ ದೂರವಿಡುತ್ತಿದ್ದರು. ಪ್ರಸ್ತುತ ಇದನ್ನು ಮಡಿವಂತಿಕೆಗೆ ತರುವ ಮೂಢ ಕಾರ್ಯವಾಗಿದೆ. ಜೀವ ಹೋಗುವ ಸಂದರ್ಭದಲ್ಲಿ ಇಂತಹ ವಿಷಯಗಳನ್ನು ಪರಿಗಣಿಸದೇ ಇರುವವರು ಮಡಿವಂತಿಕೆಯ ವಿಚಾರವನ್ನು ಅಸಹಾಯಕರ ಮೇಲೆ ಹೇರುವ ಪ್ರಯತ್ನ ಮಾಡುತ್ತಿರುವುದು ಅಸಹನೀಯ.

ವೈಚಾರಿಕಾ ದೃಷ್ಟಿಯಿಂದ ನೋಡಿದರೆ ಮುಟ್ಟಾಗುವುದು ಪ್ರಕೃತಿಯ ಸಹಜ ಗುಣ. ದೇಹದ ಪ್ರಕೃತಿಗೂ ದೇವರಿಗೂ ಸಂಬಂಧವಿಲ್ಲ. ಹಿಂದಿನ ಕಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ಋಷಿಗಳು ಮಾಡಿದ ವ್ಯವಸ್ಥೆ ಪ್ರಸ್ತುತ ಹುಚ್ಚಾಟವಾಗಿರುವುದು ವಿಶಾದನೀಯ. ಯುವಜನತೆಯು ಈ ವಿಚಾರಗಳ ಬಗ್ಗೆ ಜಾಗೃತ ಮನಸ್ಥಿತಿ ಹೊಂದಬೇಕು. ಮುಟ್ಟಾದ ಸಮಯದಲ್ಲಿ ಹೆಣ್ಣಿಗೆ ಆರೈಕೆ ಮುಖ್ಯವೇ ವಿನಃ ಅಪವಿತ್ರಳು ಎಂಬ ಪಟ್ಟವಲ್ಲ.

ಆ ಸಮಯದಲ್ಲಿ ಅವಳಿಗೆ ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ವಿಶ್ರಾಂತಿ ಕೊಡುವುದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದು ಬಹಳ ಮುಖ್ಯವಾಗಿರುತ್ತದೆ. ಆಶ್ರಮದಲ್ಲೂ ಇಂತಹ ಕಟ್ಟುಪಾಡು ಗಳನ್ನು ಪಾಲಿಸಲಾಗುವುದಿಲ್ಲ ಎಂಬ ಮಾತನ್ನು ವಿನಯ್ ಗುರೂಜಿ ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">