ದಿನದ ಆರಂಭದಲ್ಲೇ ಈ 6 ರಾಶಿಗೆ ಈ ದಿನ ಶುಭಫಲ ಧನಲಾಭ ಸಾಯಿಬಾಬಾರ ಕೃಪೆಯಿಂದ ಗುರುವಾರದ ದಿನಫಲ ನೋಡಿ..

ಮೇಷ ರಾಶಿ:- ಕಚೇರಿಯಲ್ಲಿ ಸ್ಪರ್ಧೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ನೀವು ನಿಮ್ಮ ಕೌಶಲ್ಯದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ. ಇಂದು ನಿಮಗೆ ಕೆಲವು ದೊಡ್ಡ ಹಾಗೂ ಜವಾಬ್ದಾರಿ ಕೆಲಸವನ್ನು ನೀಡಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಆರೋಗ್ಯವು ಕಾಳಜಿಗೆ ಕಾರಣವಾಗಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 11:15 ರಿಂದ 12:30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿರಲಿದೆ. ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಪಾಲುದಾರರೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ. ಇಂದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಿರಲಿದೆ. ಮನೆಯ ಸದಸ್ಯರೊಂದಿಗಿನ ಸಂಬಂಧದಲ್ಲಿ ಕೆಲವು ತೊಂದರೆ ಉಂಟಾ ಗಬಹುದು ಆದಷ್ಟು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳು ವುದು ಉತ್ತಮ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:00 ವರೆಗೆ.

ಮಿಥುನ ರಾಶಿ:- ಇಂದು ಕೆಲಸದ ದೃಷ್ಟಿಯಿಂದ ಬಹಳ ಮುಖ್ಯವಾದ ದಿನವಾಗಿರುತ್ತದೆ. ವ್ಯಾಪಾರಸ್ಥರಿಗೆ ಈ ದಿನ ಬಹಳ ವಿಶೇಷವಾದ ದಿನವಾಗಿರುತ್ತದೆ. ಉದ್ಯೋಗಸ್ಥರಿಗೆ ಈ ದಿನ ಶುಭವಾಗಲಿದೆ. ನೀವು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 7:30 ರವರೆಗೆ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

ಕಟಕ ರಾಶಿ:- ನೀವು ಕಚೇರಿಯಲ್ಲಿ ತುಂಬಾ ಸಕ್ರಿಯರಾಗಿರುತ್ತೀರಿ. ಕಚೇರಿಯಲ್ಲಿ ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸುತ್ತೀರಿ. ವ್ಯಾಪಾರಸ್ಥರಿಗೆ ಲಾಭದ ದಿನವಾಗಿರುತ್ತದೆ. ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮ ದಿನವಾಗಿರ ಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10 ಗಂಟೆಯವರೆಗೆ.

ಸಿಂಹ ರಾಶಿ:- ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸೂಚಿಸಲಾಗಿದೆ. ನಿಮ್ಮ ವ್ಯರ್ಥ ಮಾತುಗಳನ್ನು ಆಡುವುದರ ಮೂಲಕ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ನೀವೇನಾದರೂ ವಿದ್ಯಾರ್ಥಿಯಾಗಿದ್ದರೆ ನಿಮ್ಮ ಶಿಕ್ಷಣದಲ್ಲಿ ನಿಮ್ಮ ಸಾಧನೆ ಶ್ಲಾಘನೀಯ. ಈ ದಿನ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 3:30ರವರೆಗೆ.

ಕನ್ಯಾ ರಾಶಿ:- ಹಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಇಂದು ನಿಮ್ಮ ಆದಾಯಕ್ಕಿಂತ ಅಧಿಕ ವೆಚ್ಚ ಆಗಬಹುದು. ಆದ್ದರಿಂದ ನೀವು ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡುವುದು ಉತ್ತಮ. ಈ ದಿನ ಹಣಕಾಸಿಗೆ ಸಂಬಂಧಿಸಿದ ಯಾವುದೇ ವಹಿವಾಟು ಮಾಡದೇ ಇರುವುದು ಉತ್ತಮ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾನ 12 ಗಂಟೆಯವರೆಗೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ತುಲಾ ರಾಶಿ:- ನೀವೇನಾದರೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಈ ದಿನ ಕಾರ್ಯನಿರತ ದಿನವಾಗಿರುತ್ತದೆ. ಅನೇಕ ಜವಾಬ್ದಾರಿ ಕೆಲಸ ವನ್ನು ಹೊಂದಿರುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಶೀಘ್ರದಲ್ಲಿಯೇ ಪಡೆಯುತ್ತೀರಿ. ಇಂದು ಖಾಸಗಿ ಉದ್ಯೋಗಿಗಳಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಮರಸ್ಯದಿಂದ ನಡೆದುಕೊಳ್ಳಿ. ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15ರವರೆಗೆ

ವೃಶ್ಚಿಕ ರಾಶಿ:- ಪ್ರೀತಿಯ ವಿಷಯದಲ್ಲಿ ಈ ದಿನ ತುಂಬಾ ವಿಶೇಷ ದಿನವಾ ಗಿದೆ. ಈ ದಿನ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕಚೇರಿಯ ವಾತಾವರಣ ಅಷ್ಟೇನೂ ಉತ್ತಮ ವಾಗಿರುವುದಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಮಗೆ ಸೂಚಿಸಲಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವರು ಪ್ರಶಸ್ತಿಗಳನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ಧನಸ್ಸು ರಾಶಿ:- ವ್ಯಾಪಾರಸ್ಥರು ಈ ದಿನ ಉತ್ತಮ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆ ಇದೆ. ನೀವು ವ್ಯಾಪಾರವನ್ನು ಉನ್ನತಗೊಳಿಸಲು ಪ್ರಯತ್ನಿಸಿದರೆ ಅದು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಉನ್ನತ ಸುದ್ದಿಯನ್ನು ಕೇಳಬಹುದು. ವಿಶೇಷವಾಗಿ ಬ್ಯಾಂಕಿಂಗ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ದಿನ ವಿಶೇಷವಾದ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಮಕರ ರಾಶಿ:- ನೀವು ನಿಮ್ಮ ಕಚೇರಿಯ ಒತ್ತಡವನ್ನು ಮನೆಗೆ ತೆರದೆ ಇದ್ದರೆ ಉತ್ತಮವಾಗಿರುತ್ತದೆ. ಇಲ್ಲವಾದರೆ ನಿಮ್ಮ ಮನೆಯ ವಾತಾ ವರಣ ಹದಗೆಡಬಹುದು. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಕೋಪವನ್ನು ತಪ್ಪಿಸಿ. ಹಣದ ಪರಿಸ್ಥಿತಿ ಈ ದಿನ ತೃಪ್ತಿಕರವಾಗಿರುತ್ತದೆ. ನೀವು ಯಾವುದೇ ಪ್ರಯತ್ನದಲ್ಲಿಯೂ ಕೂಡ ಯಶಸ್ಸನ್ನು ಪಡೆಯು ತ್ತೀರಿ. ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 6:15 ರಿಂದ 9:30ಗೆ.

ಕುಂಭ ರಾಶಿ:- ಇಂದು ದಿನದ ಆರಂಭ ಅಷ್ಟು ಉತ್ತಮವಾಗಿರುವುದಿಲ್ಲ. ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರ ಬಹುದು. ಆದರೆ ದಿನದ ಅರ್ಧ ಭಾಗದಿಂದ ಒಳ್ಳೆಯ ಸುದ್ದಿ ಸಿಗುವುದ ರಿಂದ ತಾಳ್ಮೆಯಿಂದ ಕೆಲಸ ಮಾಡಲು ನಿಮಗೆ ಸೂಚಿಸಲಾಗಿದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 12:00 ಯಿಂದ 3:45 ರವರೆಗೆ.

ಮೀನ ರಾಶಿ:- ಕೆಲಸದ ಸ್ಥಳದಲ್ಲಿ ಈ ದಿನ ತುಂಬಾ ಪ್ರಯೋಜನಕಾರಿ ಯಾಗಿರಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಸಂಭವಿಸುವಂತಹ ಬದಲಾವಣೆಯಿಂದ ಲಾಭವನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 10:15 ರಿಂದ ಮಧ್ಯಾನ 1:30 ರವರೆಗೆ.

[irp]