ಸೊಳ್ಳೆ ಕಚ್ಚೋದು ಇರಲಿ ಮನೆಯ ಹತ್ತಿರ ಕೂಡ ಬರೊಲ್ಲ ಸೊಳ್ಳೆ ಓಡಿಸುವ ಭಯಂಕರ ಉಪಾಯ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸೊಳ್ಳೆಗಳನ್ನು ಓಡಿಸುವ 100% ಭಯಂಕರ ಉಪಾಯ…!!

ಮಳೆಗಾಲ ಪ್ರಾರಂಭವಾಯಿತು ಎಂದ ತಕ್ಷಣ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಇದಕ್ಕೆ ಬಹಳ ಪ್ರಮುಖವಾ ದಂತಹ ಕಾರಣ ಏನು ಎಂದರೆ ಮಳೆಗಾಲದಲ್ಲಿ ನಮ್ಮ ಅಕ್ಕಪಕ್ಕದಲ್ಲಿರು ವಂತಹ ಜಾಗಗಳೆಲ್ಲವೂ ಸಹ ಸ್ವಲ್ಪ ಮಟ್ಟಿಗೆ ನೀರಿನ ಅಂಶ ಸೇರುವುದ ರಿಂದ ಅದರಲ್ಲಿ ಕೊಳೆಯುವಂತಹ ಪದಾರ್ಥಗಳು ಇರುತ್ತದೆ ಆದ್ದರಿಂದ ಸೊಳ್ಳೆಗಳೆಲ್ಲವೂ ಸಹ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ಈ ಸೊಳ್ಳೆಗಳು ನಮಗೆ ಬಂದು ಕಚ್ಚುವುದರಿಂದ ಅದರ ಮೂಲಕ ನಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಅದರಲ್ಲೂ ಡೆಂಗ್ಯೂ ನಂತಹ ಸಮಸ್ಯೆಗಳು ಅಧಿಕ ವಾಗಿ ಕಾಣಿಸಿಕೊಳ್ಳುತ್ತದೆ ಜೊತೆಗೆ ಯಾರು ತಮ್ಮ ಮನೆಯ ಸುತ್ತಮುತ್ತ ಹಾಗೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರುವುದಿಲ್ಲವೋ ಅವರಿಗೂ ಸಹ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ಸುತ್ತಮುತ್ತ ಇರುವಂತಹ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಉತ್ತಮ.

ಇದರಿಂದ ನಿಮ್ಮ ಮನೆಯ ಸುತ್ತ ಸ್ವಚ್ಛವಾಗಿರುವುದಷ್ಟೇ ಅಲ್ಲದೆ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳುವಂತಹ ಸೊಳ್ಳೆಯನ್ನು ದೂರ ಮಾಡುವುದಕ್ಕೆ ಯಾವ ಒಂದು ಮನೆಯ ಔಷಧಿಯನ್ನು ತಯಾರಿಸ ಬಹುದು ಹಾಗೂ ಅದನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ.

ಹಾಗೂ ಅದನ್ನು ಹೇಗೆ ಉಪಯೋಗಿಸುವುದು ಎನ್ನುವಂತಹ ಸಂಪೂ ರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಒಂದು ಮಿಕ್ಸಿ ಜಾರಿಗೆ ಒಂದು ಹಿಡಿ ಒಣ ಬೇವಿನ ಸೊಪ್ಪು, ಹತ್ತರಿಂದ ಹದಿನೈದು ಲವಂಗ, ಪಚ್ಚ ಕರ್ಪೂರ ಹಾಗೂ 10 ಪಲಾವ್ ಎಲೆ ಒಂದು ಮುಷ್ಟಿ ಈರುಳ್ಳಿ ಸಿಪ್ಪೆ ಇಷ್ಟನ್ನು ಹಾಕಿ ಚೆನ್ನಾಗಿ ನುಣ್ಣನೆಯ ಪುಡಿ ಮಾಡಿಕೊಳ್ಳಬೇಕು.

ಇದರಲ್ಲಿರುವಂತಹ ಎಲ್ಲಾ ಪದಾರ್ಥಗಳು ಕೂಡ ಅದರದ್ದೇ ಆದಂತಹ ಒಂದು ಘಾಟಿನ ಅಂಶವನ್ನು ಹೊಂದಿದ್ದು ಇದು ಸೊಳ್ಳೆಗಳು ದೂರ ಹೋಗುವುದಕ್ಕೆ ಸಹಾಯವಾಗುತ್ತದೆ. ಈ ಒಂದು ವಾಸನೆಗೆ ಸೊಳ್ಳೆ ನಿಮ್ಮ ಮನೆಯ ಹತ್ತಿರವೂ ಕೂಡ ಸುಳಿಯುವುದಿಲ್ಲ ಹಾಗಾದರೆ ಇದನ್ನು ಹೇಗೆ ಉಪಯೋಗಿಸುವುದು ಎನ್ನುವುದಾದರೆ ಯಾವುದಾದರೂ ಒಂದು ದೀಪವನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಒಳಗಡೆ ಈ ಒಂದು ಪುಡಿಯನ್ನು ಹಾಕಿ ಮಿಶ್ರಣ ಮಾಡಿ ದೀಪವನ್ನು ಹಚ್ಚಬೇಕು.

ಈ ರೀತಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಸೊಳ್ಳೆಗಳ ಕಾಟ ಇರುವುದಿಲ್ಲ. ಜೊತೆಗೆ ಇದ್ದರೂ ಸಹ ಈ ಒಂದು ಘಾಟಿನ ಅಂಶಕ್ಕೆ ಮನೆಯ ಆಚೆ ಹೋಗುತ್ತದೆ ಇದು ನಿಮಗೆ ಯಾವುದೇ ರೀತಿಯ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಜೊತೆಗೆ ಇದರಲ್ಲಿರು ವಂತಹ ಎಲ್ಲಾ ಅಂಶಗಳು ನಿಮಗೆ ಉತ್ತಮವಾದಂತಹ ಆರೋಗ್ಯಕ್ಕೂ ಕೂಡ ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *