ಅಸಲು ಅಷ್ಟೇ ಕೊಡೋದು ..ಚಿಕ್ಕಬಳ್ಳಾಪುರ ಜನತೆಯ ಕಣ್ಣೀರೊರೆಸಲು ಪ್ರದೀಪ್ ಈಶ್ವರ್ ಮಾಡ್ತಾ ಇರೊ ಕೆಲಸ ಏನು ನೋಡಿ

ಅಸಲು ಕೊಡೋದು ಅಷ್ಟೇ ಇವ್ರು….!! ಚಿಕ್ಕಬಳ್ಳಾಪುರ ಜನತೆಯ ಕಣ್ಣೀರೊರೆಸಲು ಮುಂದಾದ ಪ್ರದೀಪ್ ಈಶ್ವರ್…..!!

WhatsApp Group Join Now
Telegram Group Join Now

ಈಗ ಕೆಲವೇ ದಿನಗಳ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು ಎಲ್ಲಾ ಕಡೆಯಲ್ಲಿಯೂ ಕೂಡ ಅಧಿಕವಾಗಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಈ ಬಾರಿ ಮುಖ್ಯಮಂತ್ರಿಯ ಸ್ಥಾನವನ್ನು ಸಹ ಕಾಂಗ್ರೆಸ್ ಪಕ್ಷವೇ ತನ್ನದಾಗಿಸಿಕೊಂಡಿದೆ. ಅದೇ ರೀತಿಯಾಗಿ ಪ್ರತಿಯೊಂದು ಭಾಗದಲ್ಲಿಯೂ ಕೂಡ ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಪಡೆದಿದ್ದು.

ಹಲವಾರು ಬಿಜೆಪಿಯ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಹಿಂದೆ ಹಾಕಿದೆ ಅದೇ ರೀತಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಸುಧಾಕರ್ ಅವರನ್ನು ಒಬ್ಬ ಸಾಮಾನ್ಯ ಪ್ರದೀಪ್ ಈಶ್ವರ್ ಎನ್ನುವರು ಸೋಲಿಸಿ ಕಾಂಗ್ರೆಸ್ ಪಕ್ಷದಲ್ಲಿ ಜಯವನ್ನು ಸಾಧಿಸಿದ್ದಾರೆ. ಹೌದು ಪ್ರದೀಪ್ ಈಶ್ವರ್ ಅವರು ಈ ಹಿಂದೆ ಯಾವುದೇ ರೀತಿಯಾದಂತಹ ರಾಜಕೀಯದ ಸಂಬಂಧವನ್ನು ಹೊಂದಿರಲಿಲ್ಲ.

ಬದಲಿಗೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಅವರ ವಿರುದ್ಧವಾಗಿ ನಿಂತು ಹೆಚ್ಚಿನ ಮತಗಳನ್ನು ಪಡೆಯುವುದರ ಮೂಲಕ ಜಯವನ್ನು ಸಾಧಿಸಿದ್ದಾರೆ ಹೌದು. ಹಾಗಾದರೆ ಈ ಪ್ರದೀಪ್ ಈಶ್ವರ್ ತಾವು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ಗೆದ್ದ ನಂತರ ಜನರಿಗೆ ಯಾವ ಕೆಲವೊಂದಷ್ಟು ವಿಚಾರವಾಗಿ ಸಹಾಯವನ್ನು ಮಾಡುತ್ತಿದ್ದಾರೆ ಹಾಗೆಯೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇರುವಂತಹ ಬಡ ಜನತೆಗೆ ಯಾವ ರೀತಿಯ

ಸಹಾಯವನ್ನು ಮಾಡುತ್ತಿದ್ದಾರೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರದೀಪ್ ಈಶ್ವರ್ ಅವರ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಚಿಕ್ಕಬಳ್ಳಾಪುರ ದಲ್ಲಿ ಕೆಲವೊಂದಷ್ಟು ಬಡ ಕುಟುಂಬದವರು ಬೇರೆಯವರಿಂದ ಒಂದು ಲಕ್ಷ ಹಣವನ್ನು ಸಾಲವಾಗಿ ಪಡೆದಿರುತ್ತಾರೆ. ಅವರು ಕಳೆದ ಎರಡು ವರ್ಷಗಳಿಂದಲೂ ಸಹ ಸಾಲವನ್ನು ತೀರಿಸಲಾಗದೆ ಬಡ್ಡಿಯನ್ನು ಕಟ್ಟಿಕೊಂಡು ಬರುತ್ತಿದ್ದರು.

ಆದರೆ ಇನ್ನು ಉಳಿದಂತಹ ಹಣವನ್ನು ಅವರು ಕೊಡುತ್ತಾರೆಯೇ ಹೊರತು ಯಾವುದೇ ರೀತಿಯ ಬಡ್ಡಿ ಹಣವನ್ನು ಕೊಡುವುದಿಲ್ಲ ಹಾಗೇನಾದರೂ ಅವರು ಬಡ್ಡಿಯನ್ನು ಕಟ್ಟಲೇಬೇಕು ಎಂದರೆ ಈಗಲೇ ಎಫ್ಐಆರ್ ಮಾಡಿ ಎಂದು ಹೇಳುವುದರ ಮೂಲಕ ಪ್ರದೀಪ್ ಈಶ್ವರ್ ಅವರು ಜನಸಾಮಾನ್ಯರ ಮುಂದೆ ಹೇಳುತ್ತಾರೆ. ಕೇವಲ ಇದೊಂದೇ ವಿಷಯ ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರದ ಎಲ್ಲಾ ಜನರಿಗೂ ಸಹ ಅನುಕೂಲವಾಗುವಂತೆ ಅವರ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು.

ಆದ್ದರಿಂದ ಇಂತಹ ವ್ಯಕ್ತಿಗಳು ನಮ್ಮ ರಾಜಕೀಯದಲ್ಲಿ ಇದ್ದರೆ ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬ ಜನರು ಕೂಡ ಯಾವುದೇ ರೀತಿಯ ಕಷ್ಟ ಇಲ್ಲದೆ ಬದುಕಬಹುದಾಗಿದೆ. ಜೊತೆಗೆ ಎಲ್ಲರ ಪ್ರೀತಿಗೂ ಸಹ ಪಾತ್ರರಾಗುತ್ತಾರೆ. ಜನರಿಗೆ ರಾಜಕೀಯ ವ್ಯಕ್ತಿಗಳ ಮೇಲೆ ಇನ್ನು ಹೆಚ್ಚಿನ ಬೆಲೆ ಗೌರವ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]