ಮಕರ ರಾಶಿ ಜೂನ್ ಮಾಸ ಭವಿಷ್ಯ ವಿಪರೀತ ಅದೃಷ್ಟ ನಿಮ್ಮ ಅದೃಷ್ಟ ಬದಲಾಗುತ್ತದೆ .ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮುಂದಿನ ತಿಂಗಳಿನಿಂದ ಮಕರ ರಾಶಿಯವರಿಗೆ ವಿಪರೀತ ರಾಜಯೋಗ, ಮಕರ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ…

ಉತ್ತರಾಷಾಡ ಮತ್ತು ಶ್ರವಣ ನಕ್ಷತ್ರದ ಒಂದು ಎರಡು ಮೂರು ನಾಲ್ಕನೇ ಪಾದದಲ್ಲಿ ಜನಿಸಿದವರು ಮತ್ತು ಧನಿಷ್ಠ ನಕ್ಷತ್ರದಲ್ಲಿ ಒಂದು ಮತ್ತು ಎರಡನೇ ಪಾದದಲ್ಲಿ ಜನಿಸಿದವರು ಮಕರ ರಾಶಿಯವರು ಆಗಿರುತ್ತಾರೆ. ಮಕರ ರಾಶಿಯವರಿಗೆ ಇಷ್ಟು ವರ್ಷಗಳ ಕಾಲ ಸಾಡೇಸಾತಿಯ ಪ್ರಭಾವವಿತ್ತು ಈಗ ಅದು ಕೊನೆಯ ಹಂತದಲ್ಲಿದೆ. ನ್ಯಾಯ ನೀತಿ ಧರ್ಮದಿಂದ ನಡೆದವರನ್ನು ಶನಿ ಮಹರಾಜರು ಕಾಯುವುದರಿಂದ ಮಕರ ರಾಶಿಯವರಿಗೆ ಕೂಡ ಅಷ್ಟೇ ಒಳ್ಳೆಯ ಫಲಿತಾಂಶಗಳನ್ನು ನೀಡುತ್ತಾರೆ.

ಜೂನ್ ತಿಂಗಳಲ್ಲಿ ಮಕರ ರಾಶಿಯವರಿಗೆ ರವಿ ಬಲ ಕೂಡ ಇರುತ್ತದೆ. ರವಿ ಬಲವು ಇರುವುದರಿಂದ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಸೂರ್ಯದೇವನ ಅನುಗ್ರಹ ಕೂಡ ಆಗಿರುವುದರಿಂದ ನೀವು ಹೆಚ್ಚು ಚೈತನ್ಯದಿಂದ ಇರುತ್ತೀರಿ. ಮಕರ ರಾಶಿಯವರಿಗೆ ಸೂರ್ಯನು ಆರನೇ ಮನೆಯಲ್ಲಿ ಸಂಚಾರ ಮಾಡಿದಾಗ ಸಂತೋಷ ಎನ್ನುವದು ಉಕ್ಕಿ ಬರುತ್ತದೆ.

ಇದರ ಜೊತೆಗೆ 4 ಗ್ರಹಗಳ ರಾಶಿ ಪರಿವರ್ತನೆ ಕೂಡ ಇರುವುದರಿಂದ ಇದು ಕೂಡ ಮಕರ ರಾಶಿಯವರು ಮೇಲೆ ಪರಿಣಾಮ ಬೀರಲಿದೆ. ಬುಧ ಗ್ರಹವು ಎರಡು ಬಾರಿ ರಾಶಿ ಬದಲಾಯಿಸುವುದರಿಂದ 1ನೇ ತಾರೀಖಿನಿಂದ 6ನೇ ತಾರೀಖಿನವರೆಗೆ ಒಂದು ರೀತಿಯ ಫಲ ಮತ್ತು 7ನೇ ತಾರೀಖಿನಿಂದ 14 ತಾರೀಖಿನವರೆಗೆ ಮತ್ತೊಂದು ರೀತಿಯ ಫಲ ಹಾಗೂ 15 ತಾರೀಕಿನಿಂದ 30ನೇ ತಾರೀಖಿನವರೆಗೆ ಬೇರೆ ರೀತಿಯ ಪರಿಣಾಮವನ್ನು ಪಡೆಯಬೇಕಾಗುತ್ತದೆ.

1ನೇ ತಾರೀಖಿನಿಂದ ಆರಂಭದ ದಿನಗಳಲ್ಲಿ ಹಣಕಾಸಿನ ಸೌಖ್ಯತೆ, ಬಂಧು ಮಿತ್ರರ ಜೊತೆಗೆ ಉತ್ತಮ ಒಡನಾಟ, ಕುಟುಂಬದಲ್ಲಿ ಶಾಂತಿಯ ವಾತಾವರಣ ಈ ರೀತಿಯ ಪರಿಸ್ಥಿತಿ ಇರುತ್ತದೆ. ನಂತರದ ದಿನಗಳಲ್ಲಿ 7 ನೇ ತಾರೀಖಿನ ನಂತರ ಪತಿ ಪತ್ನಿ ನಡುವೆ ಕಲಹ, ವೈ ಮನಸು, ವಿನಾಕಾರಣ ಬೇಸರ ಈ ರೀತಿ ಮನಸ್ಥಿತಿ ಬದಲಾಗಿರುತ್ತದೆ. ನಂತರ 15ನೇ ತಾರೀಖಿನಿಂದ 30 ನೇ ತಾರೀಖಿನವರೆಗೆ ರವಿಯ ಅನುಗ್ರಹ ಇರುವುದರಿಂದ ಇನ್ನು ಹೆಚ್ಚಿನ ಪ್ರತಿಕೂಲ ಪರಿಣಾಮಗಳೇ ಉಂಟಾಗಲಿದೆ.

ಉದ್ಯೋಗದಲ್ಲಿ ಮುನ್ನಡೆ, ಉನ್ನತಾಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ವೃದ್ಧಿ, ಇನ್ನು ಮುಂತಾದ ಉತ್ತಮ ಫಲಿತಾಂಶಗಳು ಸಿಗುತ್ತದೆ. ಮಕರ ರಾಶಿಗೆ ಅಷ್ಟಮಾಧಿಪತಿಯಾಗಿ ರವಿ 6ನೇ ಮನೆಯಲ್ಲಿ ಸಂಚಾರ ಇರುವುದರಿಂದ ವಿಪರೀತ ರಾಜಯೋಗ ಇರುತ್ತದೆ. ಬುಧ ಕೂಡ ಜೊತೆಯಲ್ಲಿ ಇರೋದರಿಂದ ಬುಧಾದಿತ್ಯ ಯೋಗ ಕೂಡಿ ಬರುತ್ತದೆ. ಈ ರೀತಿ ಯೋಗ ಬಂದಾಗ ಬಹಳ ದಿನಗಳಿಂದ ಕೋಟಿನಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಕೇಸ್ ಒಂದು ನಿಮ್ಮ ಪರ ಆಗಲಿದೆ.

ಜೊತೆಗೆ ಬಹಳ ದಿನದಿಂದ ಕಾಡಿದ್ದ ಕಾಯಿಲೆಗಳು ಕೂಡ ಗುಣಮುಖವಾಗುತ್ತದೆ ಅಥವಾ ಅದರ ಚಿಕಿತ್ಸೆಗೆ ಸಮಯ ಕೂಡಿ ಬರುತ್ತದೆ. ನೀವು ಮಾಡಿದ್ದ ಎಲ್ಲಾ ಸಾಲಗಳು ತೀರುತ್ತವೆ, ಹಾಗೆಯೇ ಹಣಕಾಸಿಗೆ ಲಾಭಗಳು ಕೂಡ ಹರಿದು ಬರುತ್ತದೆ. ಈ ವಿಷಯದ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *