ಕೇವಲ 1 ಲೋಟ ರಾಗಿ ಹಾಲು ಹೀಗೆ ಮಾಡಿ ಕುಡಿದರೆ, ಆರೋಗ್ಯ ದುಪ್ಪಟ್ಟಾಗುವುದು ಖಂಡಿತಾ…
ರಾಗಿ ತಿನ್ನುವವರಿಗೆ ರೋಗವಿಲ್ಲ ಈ ಮಾತು ಜನಜನಿತವಾಗಿದೆ. ಯಾಕೆಂದರೆ ರಾಗಿಯಲ್ಲಿ ಅಷ್ಟೊಂದು ಪೋಷಕಾಂಶ ಇದೆ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ವಿಟಮಿನ್ಸ್, ಮಿನರಲ್ಸ್ ಪ್ರೋಟೀನ್ಗಳು ಎಲ್ಲವನ್ನು ಕೂಡ ಹೇರಳವಾಗಿ ರಾಗಿಯೂ ಒಳಗೊಂಡಿದೆ. ಹೀಗಾಗಿ ರಾಗಿಯನ್ನು ಯಾವುದೇ ರೂಪದಲ್ಲಿ ಆಹಾರವಾಗಿ ನಾವು ಪ್ರತಿದಿನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ದೇಹ ಬಲಿಷ್ಠಗೊಳ್ಳುತ್ತದೆ.
ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ, ಅಂಬಲಿ ಹೀಗೆ ರಾಗಿಯನ್ನು ಸೇವಿಸಬಹುದು. ಹಾಗೆಯೇ ರಾಗಿ ಹಾಲಿನಂತಹ ಒಂದು ಪಾನಿಯವನ್ನು ಕುಡಿಯುವುದರಿಂದ ದೇಹಕ್ಕೆ ಇನ್ನಷ್ಟು ಲಾಭವಾಗಲಿದೆ. ಏಕೆಂದರೆ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ನಾವು ಹೆಚ್ಚು ಸುಸ್ತಾಗುತ್ತೇವೆ. ಜೊತೆಗೆ ಕುಡಿಯುವುದಕ್ಕೆ ಯಾವುದಾದರೂ ತಂಪಾದ ಮತ್ತು ಆರೋಗ್ಯಕರವಾದ ಪಾನೀಯ ಸಿಕ್ಕರೆ ಸಾಕು ಎಂದು ನೋಡುತ್ತಿರುತ್ತೇವೆ.
ಇದಕ್ಕಾಗಿ ಹೊರಗೆ ಸಿಗುವ ಫ್ಯಾಕ್ಟರಿಗಳಲ್ಲಿ ತಯಾರಾದ ತಂಪು ಪಾನೀಯಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ನಮ್ಮ ಮನೆಯಲ್ಲಿರುವ ರಾಗಿಯನ್ನೇ ಬಳಸಿಕೊಂಡು ಒಂದು ಪಾನೀಯವನ್ನು ಮಾಡಿಕೊಳ್ಳಬಹುದು. ಈ ರಾಗಿ ಪಾನೀಯನ್ನು ಸೇವಿಸುವುದರಿಂದ ಸುಸ್ತು ಬೇಗ ಕಡಿಮೆ ಆಗುತ್ತದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಊರಿಮೂತ್ರ ಸಮಸ್ಯೆ ಯೂರಿನ್ ಇನ್ಫೆಕ್ಷನ್ ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುತ್ತವೆ.
ರಾಗಿ ಹಾಲಿನ ಸೇವನೆಯಿಂದ ದೇಹ ತಂಪಾಗಿ ಇವೆಲ್ಲಾ ನಿವಾರಣೆ ಆಗುತ್ತದೆ. ಮಲಬದ್ಧತೆ ಸಮಸ್ಯೆಯಿಂದ ನರಳುವವರೆಗೂ ಕೂಡ ಈ ರಾಗಿಹಾಲನ್ನು ಸೇವಿಸುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ದೇಹದ ಮೂಳೆಗಳಿಗೂ ಕೂಡ ಚೈತನ್ಯ ತುಂಬಿ ಶಕ್ತಿ ಬರುತ್ತದೆ. ರುಚಿ ಕೂಡ ಚೆನ್ನಾಗಿರುವುದರಿಂದ ಮನೆ ಮಂದಿಯಲ್ಲ ಸೇವಿಸಬಹುದು.
ರಾಗಿಹಾಲನ್ನು ಮಾಡುವ ವಿಧಾನ ಕೂಡ ಬಹಳ ಸರಳ. ನಿಮ್ಮ ಮನೆಯಲ್ಲಿ ಇರುವ ರಾಗಿಯನ್ನು ಚೆನ್ನಾಗಿ ಕ್ಲೀನ್ ಮಾಡಿ ಶೇಖರಿಸಿ ಇಟ್ಟುಕೊಂಡಿರಬೇಕು. ನಂತರ ಅದರಲ್ಲಿ ಮೂರು ಹಿಡಿಯಷ್ಟು ರಾಗಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡಬೇಕು. ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಒಂದು ಲೋಟ ನೀರನ್ನು ಹಾಕಿ ಗ್ರೈಂಡ್ ಮಾಡಬೇಕು.
ಇದಕ್ಕೆ ನಿಮಗೆ ಎಷ್ಟು ಸಿಹಿ ಬೇಕು ಅಷ್ಟು ಬೆಲ್ಲ ಬೆರೆಸಿ ಮತ್ತೆ ರುಬ್ಬಬೇಕು. ಈಗ ಇದನ್ನು ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಬೇಕು. ಉಳಿದ ಪದಾರ್ಥಕ್ಕೆ ಮತ್ತೆ ಸ್ವಲ್ಪ ನೀರು ಹಾಕಿ ಮತ್ತೆ ಗ್ರೈಂಡ್ ಮಾಡಬೇಕು ಈ ರೀತಿ ಐದಾರು ಬಾರಿ ಪದೇ ಪದೇ ಗ್ರೈಂಡ್ ಮಾಡಿದಾಗ ರಾಗಿಹಾಲು ಸಿಗುತ್ತದೆ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಮತ್ತಷ್ಟು ನೀರು ಹಾಕಿ ಐದರಿಂದ ಆರು ಜನರಿಗೆ ಸರ್ವ್ ಮಾಡಬಹುದು.