40,50,60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು..ಸಮಯ ಮಾಡಿಕೊಂಡು ನೋಡಿ

40, 50, 60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||

WhatsApp Group Join Now
Telegram Group Join Now

40ವರ್ಷ ದಾಟಿದ ನಂತರ ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಒಳ್ಳೆಯ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದು ನಿಮ್ಮ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು ಹಾಗಾದರೆ ಆ ಸಲಹೆಗಳು ಯಾವವು ಎಂದು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯ ಸಲಹೆ ನಿಮಗೆ ಬಾಯಾರಿಕೆ ಇಲ್ಲದಿದ್ದರೂ ಅಥವಾ ಅವಶ್ಯಕತೆ ಇಲ್ಲದಿದ್ದರೂ ಸಹ ಯಾವಾಗಲೂ ದಿನಕ್ಕೆ ಕನಿಷ್ಠ ಎರಡು ಲೀಟರ್ ಅಂದರೆ ದಿನಕ್ಕೆ 8 ಲೋಟ ನೀರನ್ನು ಕುಡಿಯುವುದು ಒಳ್ಳೆಯದು. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಹೇಳಬಹುದು. ಹಾಗೂ ಹೆಚ್ಚು ನೀರನ್ನು ಕುಡಿಯುವಂಥ ಉದ್ದೇಶ ಏನು ಎಂದರೆ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿಯೇ ಬರುತ್ತದೆ.

ಆದ್ದರಿಂದ ಹೆಚ್ಚಾಗಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳು ವುದು ಒಳ್ಳೆಯದು. ಇನ್ನು ಎರಡನೆಯ ಸಲಹೆ ಸಾಧ್ಯವಾದಷ್ಟು ಕೆಲಸವನ್ನು ಮಾಡಿ ಹೆಚ್ಚಾಗಿ ನಡೆಯುವುದು ಅಥವಾ ಯಾವುದಾದರೂ ಒಂದು ಕ್ರೀಡೆಯಂತಹ ದೇಹದ ಚಲನೆ ಇರುವಂತಹ ಕೆಲವೊಂದಷ್ಟು ಕೆಲಸಗಳನ್ನು ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಕೈ ಕಾಲುಗಳಲ್ಲಿ ಯಾವುದೇ ರೀತಿಯ ನಿಶಕ್ತಿ ಕಾಣಿಸಿಕೊಳ್ಳುವುದಿಲ್ಲ.

ವಯಸ್ಸಾದ ನಂತರ ಪ್ರತಿಯೊಬ್ಬರೂ ಸ್ವಲ್ಪ ದೂರವಾದರೂ ನಡೆಯುವ ಹವ್ಯಾಸವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಬದಲಿಗೆ ಒಂದೇ ಸಮನೆ ಒಂದೇ ಸ್ಥಳದಲ್ಲಿ ಕುಳಿತರೆ ಸ್ವಲ್ಪ ದೂರವೂ ಕೂಡ ಓಡಾಡುವುದಕ್ಕೆ ಕಷ್ಟವಾಗುತ್ತದೆ. ಬದಲಿಗೆ ಸ್ವಲ್ಪ ದೂರವಾದರೂ ನಡೆಯುವುದು, ಕೆಲಸ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಇದರಿಂದ ಯಾವುದೇ ರೀತಿಯ ಮಂಡಿ ನೋವು, ಬೆನ್ನು ನೋವು, ಸೊಂಟ ನೋವು ಕಾಣಿಸಿಕೊಳ್ಳುವುದಿಲ್ಲ.

See also  ಅಗಸೆ ಮಜ್ಜಿಗೆ ಬೆಳಿಗ್ಗೆ ಎದ್ದ ತಕ್ಷಣ 21 ದಿನ ಜಾದು ನೋಡಿ..ದೇಹದಲ್ಲಿ ಇದರಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ ?

ಮೂರನೆಯ ಸಲಹೆ ಕಡಿಮೆ ತಿನ್ನಿ, ಹೆಚ್ಚು ತಿನ್ನುವ ಹಂಬಲವನ್ನು ಬಿಡಿ. ಏಕೆಂದರೆ ಅದು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮನ್ನು ವಂಚಿತಗೊಳಿಸಬೇಡಿ ಆದರೆ ಪ್ರಮಾಣವನ್ನು ಕಡಿಮೆ ಮಾಡಿ. ಪ್ರೋಟೀನ್ ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ. ನಾಲ್ಕನೆಯ ಸಲಹೆ ವಾಹನವನ್ನು ಅಗತ್ಯವಿದ್ದರೆ ಮಾತ್ರ ಬಳಸಿ ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.

ಐದನೆಯ ಸಲಹೆ ಕೋಪವನ್ನು ಬಿಟ್ಟುಬಿಡಿ ಚಿಂತಿಸುವುದನ್ನು ನಿಲ್ಲಿಸಿ ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ತೊಂದರೆಯ ಸಂದರ್ಭ ಗಳಲ್ಲಿ ನಿಮ್ಮನ್ನು ನೀವೇ ಸಮಾಧಾನಗೊಳಿಸಬೇಕು ಇಲ್ಲವಾದರೆ ಅವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರನೆಯ ಸಲಹೆ ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ. ಏಳನೆಯ ಸಲಹೆ ಮೊದಲನೆಯದಾಗಿ ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ ಹಾಗೂ ನಗುಮುಖದಿಂದ ಮಾತನಾಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">