ಗ್ಯಾಸ್ಟ್ರಿಕ್‌ ಬರಬಾರದು ಎಂದರೆ ಇವುಗಳನ್ನು ತಿನ್ನುವುದು ಇಂದೇ ಬಿಟ್ಟುಬಿಡಿ..ಗ್ಯಾಸ್ಟ್ರಿಕ್‌ ಬಂದಾಗ ಏನು ಮಾಡಬೇಕು

ಗ್ಯಾಸ್ಟ್ರಿಕ್ ನ ಲಕ್ಷಣಗಳೇನು? ಏನು ಮಾಡಬೇಕು?

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವಂತಹ ಆಹಾರ ಕ್ರಮದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ನಾವು ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಅಧಿಕ ಪ್ರಮಾಣದ ಹುಳಿ ಖಾರ ಹೆಚ್ಚಿನ ಕೊಲೆಸ್ಟ್ರಾಲ್ ಅಂಶ ಹೀಗೆ ಎಲ್ಲಾ ಅನಾರೋಗ್ಯವನ್ನು ಹೆಚ್ಚಿಸುವಂತಹ ಅಂಶಗಳೇ ಇದ್ದು. ಇದರಿಂದ ನಮ್ಮಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತಿದೆ ಎಂದೇ ಹೇಳಬಹುದು.

ಆದರೆ ಜನಕ್ಕೆ ಈ ಮಾಹಿತಿ ತಿಳಿದಿದ್ದರೂ ಸಹ ಅವರು ತಮ್ಮ ಆಹಾರ ಕ್ರಮದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಏಕೆ ಎಂದರೆ ಆಹಾರ ಪದಾರ್ಥಗಳೆಲ್ಲವೂ ಅವರಿಗೆ ತಿನ್ನುವ ಸಮಯದಲ್ಲಿ ಹೆಚ್ಚು ರುಚಿಯನ್ನು ಕೊಡುತ್ತದೆ. ಆದ್ದರಿಂದ ಅವುಗಳನ್ನು ಅವರು ದೂರ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಬದಲಿಗೆ ಅದನ್ನೇ ಸೇವನೆ ಮಾಡುತ್ತಾರೆ. ಅದರಿಂದ ತಮ್ಮ ಆರೋಗ್ಯವನ್ನು ಸಹ ಹಾಳು ಮಾಡಿಕೊಳ್ಳುತ್ತಾರೆ.

ಹಾಗೂ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡ ನಂತರ ಯಾವ ರೀತಿಯ ಕೆಲವು ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಅದನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ? ಯಾವ ಆಹಾರ ಕ್ರಮ ಸೇವನೆ ಮಾಡಬೇಕು? ಹೀಗೆ ಈ ಎಲ್ಲಾ ರೀತಿಯ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಈ ಒಂದು ಸಮಸ್ಯೆ ಹೆಚ್ಚಾದರೆ ಯಾವ ರೀತಿಯ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ. ಪ್ರತಿಯೊಬ್ಬರ ಹೊಕ್ಕಳಿನ ಭಾಗದಿಂದ ಸ್ವಲ್ಪ ಮೇಲ್ಭಾಗದಲ್ಲಿ ಹೊಟ್ಟೆ ಊದಿಕೊಂಡಂತೆ ಆಗುತ್ತದೆ. ಹಾಗೂ ಆ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವೊಂದಷ್ಟು ಜನರಿಗೆ ಹೊಟ್ಟೆ ಉಬ್ಬರ ಆಗುವುದು, ಸ್ವಲ್ಪ ಆಹಾರ ತಿಂದರೂ ಅವರಿಗೆ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು.

ಈ ರೀತಿಯ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತಿರುತ್ತದೆ. ಹಾಗೂ ಸಮಯವಲ್ಲದ ಸಮಯದಲ್ಲಿ ಅಧಿಕವಾದಂತಹ ಆಹಾರವನ್ನು ಸೇವನೆ ಮಾಡುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಆಹಾರ ಗಳು ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವುಗಳನ್ನು ತಿನ್ನದೇ ಇರುವುದು ಉತ್ತಮ. ಹಾಗಾದರೆ ಈ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳು ವುದು ಎಂದು ನೋಡುವುದಾದರೆ.

ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು, ಬೆಳಗಿನ ಸಮಯ ಬೇಗ ತಿಂಡಿ ಮಾಡುವುದು ಹಾಗೂ 6 ಗಂಟೆ ನಂತರ ಮಧ್ಯಾನದ ಊಟ ಹಾಗೂ ರಾತ್ರಿ ಊಟ 7 ಗಂಟೆಗೆ ಸೇವನೆ ಮಾಡಬೇಕು. ಜೊತೆಗೆ ಹಣ್ಣು ಸೊಪ್ಪು ತರಕಾರಿಗಳನ್ನು ಅಧಿಕವಾಗಿ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">