ಮಹಿಳೆಯರು 2,000 ಪಡೆಯಲು ಬೇಕು ಈ ದಾಖಲೆಗಳು…..|| ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ……….||
ಎಲ್ಲರಿಗೂ ತಿಳಿದಿರುವಂತೆ ಮಹಿಳೆಯರಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು 2000 ಹಣ ಕೊಡುವುದಾಗಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಹೌದು ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿದ್ದರಾಮ ಯ್ಯ ಅವರು ಈ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮುನ್ನ ನಾವೇನಾದರೂ ಅಧಿಕಾರಕ್ಕೆ ಬಂದರೆ ಅಂದರೆ ನಮ್ಮ ಪಕ್ಷ ಗೆದ್ದರೆ.
ನಾವು ಮಹಿಳೆಯರಿಗೆ ಅಂದರೆ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು 2000 ಹಣವನ್ನು ಕೊಡುತ್ತೇವೆ ಎನ್ನುವಂತಹ ಗ್ಯಾರoಟಿಯನ್ನು ನೀಡಿದ್ದರು. ಹೌದು ಅದೇ ರೀತಿಯಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅವರು ಯಾವ 5 ಗ್ಯಾರಂಟಿಯನ್ನು ನೀಡಿದ್ದರೋ ಅವೆಲ್ಲವನ್ನು ಸಹ ನಾವು ಈಡೇರಿಸುತ್ತೇವೆ ಎನ್ನುವಂತಹ ಸಂಪೂರ್ಣ ವಾದ ಭರವಸೆಯನ್ನು ನೀಡಿದ್ದಾರೆ.
ಅದೇ ರೀತಿಯಾಗಿ ಯಾವ ಐದು ಗ್ಯಾರಂಟಿಯನ್ನು ಅವರು ನೀಡಿದ್ದರು ಎಂದರೆ ಮೊದಲನೆಯದಾಗಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಹೊಂದಿ ರುವಂತಹ ವ್ಯಕ್ತಿಗಳಿಗೂ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣದ ವ್ಯವಸ್ಥೆ ಹಾಗೂ ಮನೆಯಲ್ಲಿರುವಂತಹ ಮಹಿಳಾ ಮುಖ್ಯಸ್ಥ ಅಂದರೆ ಮನೆಯ ಒಡತಿಗೆ ಪ್ರತಿ ತಿಂಗಳು 2000 ಹಣ ನೀಡುವ ವ್ಯವಸ್ಥೆ.
ನಾಲ್ಕನೆಯದಾಗಿ 200 ಯೂನಿಟ್ ವಿದ್ಯುತ್ ಉಚಿತ, ಹಾಗೂ 2023 24 ನೇ ಸಾಲಿನ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3000 ಹಣವನ್ನು ಕೊಡುವುದಾಗಿ ಹೀಗೆ 5 ಗ್ಯಾರಂಟಿಯನ್ನು ಸಹ ಕಾಂಗ್ರೆಸ್ ಸರ್ಕಾರ ನೀಡುವುದಾಗಿ ಆದೇಶವನ್ನು ಕೊಟ್ಟಿತು ಹಾಗೂ ಈ ವಿಚಾರವಾಗಿ ಎಲ್ಲಾ ಗ್ಯಾರಂಟಿಯನ್ನು ಸಹ ಅವರು ಈಡೇರಿಸುತ್ತೇವೆ ಎನ್ನುವಂತಹ ಭರವಸೆಯನ್ನು ಸ್ವತಹ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ.
ಯಾವ ಮಹಿಳೆ ಪ್ರತಿ ತಿಂಗಳು 2,000 ಹಣವನ್ನು ಪಡೆಯಬಹುದು ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಅರ್ಜಿಯನ್ನು ನೀವು ಆನ್ಲೈನ್ ಮೂಲಕ ಸಲ್ಲಿಸಬಹುದು.
ಅದರಲ್ಲೂ ಗ್ರಾಮ 1 ಕೇಂದ್ರಗಳಲ್ಲಿ, ಸೇವಾ ಸಿಂಧು ಪೋರ್ಟಲ್ ಮೂಲಕ, ಬೆಂಗಳೂರು ಒನ್, ಕರ್ನಾಟಕ ಒನ್ ಇವುಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯನ್ನು ಪಡೆದುಕೊಳ್ಳುವಂತಹ ಮಹಿಳೆಯ ಆಧಾರ್ ಕಾರ್ಡ್ ಹಾಗೂ ಅವಳ ಪತಿಯ ಆಧಾರ್ ಕಾರ್ಡ್ ಅವಶ್ಯಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.