ಹೆಲ್ಮೇಟ್ ಹಾಕದ ವ್ಯಕ್ತಿಗೆ 500 ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೋಲಿಸ್..ಸೇಡಿಗಾಗಿ ಆ ವ್ಯಕ್ತಿ ಮಾಡಿದ್ದೇನು ನೋಡಿ

ಹೆಲ್ಮೆಟ್ ಹಾಕದ ವ್ಯಕ್ತಿಗೆ 500 ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸ್…|| ಸೇಡಿಗಾಗಿ ಆ ವ್ಯಕ್ತಿ ಮಾಡಿದ್ದೇನು…..||

WhatsApp Group Join Now
Telegram Group Join Now

ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್ ಎಂಬಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಈ ಶ್ರೀನಿವಾಸ್ ಎಂಬ ವ್ಯಕ್ತಿ ಮಾಡಿದ ಒಂದು ಕೆಲಸ ನೋಡಿದರೆ ನೀವೆಲ್ಲರೂ ಕೂಡ ಒಂದು ಕ್ಷಣ ದಂಗಾಗುತ್ತೀರಿ. ಒಂದು ದಿನ ಶ್ರೀನಿವಾಸ್ ಕೆಲಸದ ನಿಮಿತ್ತ ಹೆಲ್ಮೆಟ್ ಹಾಕಿಕೊಳ್ಳದೆ

ಬೈಕ್ ನಲ್ಲಿ ಹೋಗುತ್ತಿದ್ದರು ಆಗ ಟ್ರಾಫಿಕ್ ಪೊಲೀಸ್ ಶ್ರೀನಿವಾಸ್ ನನ್ನು ತಡೆದು 500 ರೂಪಾಯಿ ಹೆಲ್ಮೆಟ್ ಫೈನ್ ಅನ್ನು ವಸೂಲಿ ಮಾಡುತ್ತಾರೆ. ಟ್ರಾಫಿಕ್ ಇನ್ಸ್ಪೆಕ್ಟರ್ ರಮೇಶ್ ಚಂದ್ರ ಅವರು ಶ್ರೀನಿವಾಸ್ ಅವರನ್ನು ಯಾವುದೋ ಒಂದು ವಿದ್ಯುತ್ ರಿಪೇರಿ ಮಾಡುವುದಕ್ಕೆ ಹೋಗುತ್ತಿ ದ್ದಂತಹ ಸಮಯದಲ್ಲಿ ತಡೆದು ನಿಲ್ಲಿಸಿದ್ದರು ಇನ್ಸ್ಪೆಕ್ಟರ್ ರಮೇಶ್ ಚಂದ್ರ ಅವರ ಬಳಿ.

ಸರ್ ಈ ಬಾರಿ ನನ್ನನ್ನು ಕ್ಷಮಿಸಿ ಬಿಟ್ಟುಬಿಡಿ ಫೈನ್ ಹಾಕಬೇಡಿ ಎಂದು ರಮೇಶ್ ಚಂದ್ರ ಅವರ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಆದರೂ ಕೂಡ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರ ಬಳಿ ಹಣ ವಸೂಲಿ ಮಾಡದೆ ಬಿಡುವುದಿಲ್ಲ ಹಾಗೂ ಆ ಸಮಯದಲ್ಲಿ ಅವರ ಗಾಡಿಯನ್ನು ಸಹ ಹಿಡಿದುಕೊಳ್ಳುತ್ತಾರೆ ಆಗ ಶ್ರೀನಿವಾಸ್ ಅವರು ತಮ್ಮ ಜೂನಿಯರ್ ಲೈನ್ ಮ್ಯಾನ್ ಅಂದರೆ ರಿಪೇರಿ ಮಾಡುವಂತಹ ವ್ಯಕ್ತಿಗೆ ಕರೆ ಮಾಡಿ.

ನಾನು ರಿಪೇರಿ ಮಾಡುವುದಕ್ಕೆ ಬರಲು ಸಾಧ್ಯವಾಗುವುದಿಲ್ಲ ನನ್ನನ್ನು ಪೊಲೀಸರು ಹಿಡಿದಿದ್ದಾರೆ. ನನ್ನ ಬೈಕ್ ಹಿಡ್ಕೊಂಡಿದ್ದಾರೆ ಆದ್ದರಿಂದ ನಾನು ಬರಲು ಸಾಧ್ಯವಿಲ್ಲ ನೀವೇ ರಿಪೇರಿ ಮಾಡಿ ಎಂದು ಹೇಳುತ್ತಾರೆ. ಆಗ ಜೂನಿಯರ್ ಲೈನ್ ಮ್ಯಾನ್ ಗಳು ಪೊಲೀಸರ ಬಳಿ ದಯವಿಟ್ಟು ಅವರನ್ನು ಬಿಟ್ಟು ಕಳುಹಿಸಿ ಸಾರ್ ಆತ ಬಡವ ಆತನಿಗೆ ಫೈನ್ ಹಾಕಬೇಡಿ ಎಂದು ಫೋನ್ ಮೂಲಕವೇ ಇನ್ಸ್ಪೆಕ್ಟರ್ ಹತ್ತಿರ ಮಾತನಾಡುತ್ತಾರೆ.

ಆದರೆ ಇನ್ಸ್ಪೆಕ್ಟರ್ ರಮೇಶ್ ಅವರು ಯಾರ ಮಾತನ್ನು ಸಹ ಕೇಳಲಿಲ್ಲ. ಶ್ರೀನಿವಾಸ್ ಗೆ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದಕ್ಕೆ 500 ರೂಪಾಯಿ ದಂಡವನ್ನು ಹಾಕೆಬಿಟ್ಟರು. ಆದರೆ ಇನ್ಸ್ಪೆಕ್ಟರ್ ಗೆ ದಂಡವನ್ನು ಕಟ್ಟುವಂತಹ ಸಮಯದಲ್ಲಿ ಶ್ರೀನಿವಾಸ್ ಗೆ ಯಾವ ಒಂದು ಯೋಚನೆ ಓಡುತ್ತಿತ್ತು ಎಂದು ಗೊತ್ತಿರಲಿಲ್ಲ. ದಂಡವನ್ನು ಕಟ್ಟಿ

ಟ್ರಾಫಿಕ್ ಪೊಲೀಸರ ಎಲ್ಲರ ಮಾತುಗಳನ್ನು ಕೇಳಿದ ನಂತರ ಶ್ರೀನಿವಾಸ್ ನೇರವಾಗಿ ಏರ್ ಟಿಸಿಟಿ ಆಫೀಸ್ ಗೆ ಬಂದು. ಇನ್ಸ್ಪೆಕ್ಟರ್ ರಮೇಶ್ ಕೆಲಸ ಮಾಡುತ್ತಿದ್ದಂತಹ ಸ್ಟೇಷನ್ ನ ಹಿಂದಿನ ಎರಡು ವರ್ಷದ ಎಲ್ಲಾ ಕರೆಂಟ್ ಬಿಲ್ ಗಳನ್ನು ಚೆಕ್ ಮಾಡಲು ಶುರು ಮಾಡಿದ. ಆಗ ಸ್ಟೇಷನ್ ನ ಕರೆಂಟ್ ಬಿಲ್ ಅನ್ನು ಬಹಳ ತಿಂಗಳಿನಿಂದ ಕಟ್ಟೆ ಇಲ್ಲ ಎಂಬ ವಿಷಯ ಗೊತ್ತಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]