ಈ ಲಕ್ಷಣಗಳು ನಿಮ್ಮ ದೇಹದಲ್ಲಿದ್ದರೆ ವಿಟಮಿನ್ ಬಿ 12 ಕೊರತೆ ಇದೆ ಎಂದರ್ಥ..

ದೇಹದಲ್ಲಿ ಈ ಚಿನ್ಹೆಗಳು ಕಂಡು ಬಂದರೆ ವಿಟಮಿನ್ ಬಿ12 ಕೊರತೆ ಇದೆ ಎಂದರ್ಥ……..||

WhatsApp Group Join Now
Telegram Group Join Now

ನಮ್ಮಲ್ಲಿ ಕೆಲವೊಂದಷ್ಟು ಜನ ಯಾವುದೇ ರೀತಿಯಾದಂತಹ ಪೌಷ್ಟಿ ಕಾಂಶವನ್ನು ಹೆಚ್ಚಿಸುವಂತಹ ಆಹಾರವನ್ನು ಸೇವನೆ ಮಾಡುವುದಿಲ್ಲ. ಬದಲಿಗೆ ಅನಾರೋಗ್ಯವನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಇದರಿಂದ ಅವರಿಗೆ ಹಲವಾರು ರೀತಿಯ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಂತಹ ದೇಹದಲ್ಲಿ ಪೌಷ್ಟಿಕಾಂಶತೆಯನ್ನು ಹೆಚ್ಚಿಸುವಂತಹ.

ಆಹಾರ ಕ್ರಮವನ್ನು ಅನುಸರಿಸುವುದು ಉತ್ತಮ ಇಲ್ಲವಾದರೆ ಹಲ ವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಈ ದಿನ ನಮ್ಮ ದೇಹದಲ್ಲಿ ಅದರಲ್ಲೂ ಸಸ್ಯಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಉಂಟಾಗಲು ಕಾರಣಗಳು ಏನು ಹಾಗೂ ಅಂಥವರು ಯಾವ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ಈ ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೆ ಯದಾಗಿ ವಿಟಮಿನ್ b12 ಕೊರತೆ ಯಾಕೆ ಆಗುತ್ತೆ ಹಾಗೂ ವಿಟಮಿನ್ b12 ಕೊರತೆ ಉಂಟಾದಾಗ ದೇಹದಲ್ಲಿ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗೂ ಯಾವ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮುಖ್ಯ ಅಂಶ ಏನು ಎಂದರೆ ವಿಟಮಿನ್ ಬಿ12 ಪ್ರತಿಯೊಬ್ಬರ ದೇಹಕ್ಕೂ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಪೌಷ್ಟಿಕಾಂಶವಾಗಿದೆ. ಹಾಗಾದರೆ ವಿಟಮಿನ್ ಬಿ12 ನ ಕೆಲಸ ಏನು ಎಂದು ನೋಡುವುದಾದರೆ ಇದು ರಕ್ತ ಕಣಗಳ ಉತ್ಪಾ ದನೆ ಅಂದರೆ ರಕ್ತ ದೇಹದಲ್ಲಿ ಸರಾಗವಾಗಿ ಈ ಸಂಚಾರ ಮಾಡುವುದಕ್ಕೆ ಇದು ಸಹಕಾರಿಯಾಗಿದೆ ಮತ್ತು ನರಗಳು ಮತ್ತು ಮೆದುಳಿನ ಜೀವ ಕೋಶಗಳ ಕೆಲಸವನ್ನು ನೋಡಿಕೊಳ್ಳುತ್ತದೆ.

ಹಾಗೆಯೇ ಡಿಎನ್ಎ ಅನ್ನು ಕ್ರಿಯಾಶೀಲವಾಗಿ ಇಡುವಂತೆ ಇದು ನಮ್ಮನ್ನು ನೋಡಿಕೊಳ್ಳುತ್ತದೆ. ಒಟ್ಟಾರೆಯಾಗಿ ಈ ವಿಟಮಿನ್ ಬಿ12 ನಮ್ಮ ರಕ್ತದ ಆರೋಗ್ಯ ಹಾಗೂ ನರಗಳ ಆರೋಗ್ಯ ಹಾಗೂ ಡಿಎನ್ಎ ಈ ಮೂರು ಕೆಲಸದಲ್ಲಿಯೂ ಕೂಡ ಇದು ಪ್ರಮುಖವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಎಂದೇ ಹೇಳಬಹುದು. ಮಾಂಸಹಾರ ಸೇವನೆ ಮಾಡುವವರಲ್ಲಿ ಈ ಒಂದು ಪೌಷ್ಟಿಕಾಂಶದ ಕೊರತೆ ಇರುವುದಿಲ್ಲ.

ಆದರೆ ಸಸ್ಯಹಾರಿಗಳಲ್ಲಿ ಈ ಕೊರತೆ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ ಅದರಲ್ಲೂ ಈ ಒಂದು ಸಮಸ್ಯೆ ಉಂಟಾಗಿದೆ ಎಂದರೆ ಅವರಲ್ಲಿ ಹೆಚ್ಚಾಗಿ ಸುಸ್ತು ನಿಶಕ್ತಿ, ಕೈಕಾಲುಗಳಲ್ಲಿ ನರ ಜೋಮು ಹಿಡಿಯುವುದು, ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ತಲೆ ಕೂದಲು ಉದುರುವುದು ಕಣ್ಣುಗಳ ಕೆಳಭಾಗದಲ್ಲಿ ಕಪ್ಪು ಬಣ್ಣ ಹೆಚ್ಚಾಗುವುದು ಹೀಗೆ ಇನ್ನೂ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">