ಗೃಹಜೋತಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣವಾದ ಮಾಹಿತಿ…….||
ಕೊನೆಗೂ ಕಾಂಗ್ರೆಸ್ ಸರ್ಕಾರ ಅವರು ಅಧಿಕಾರಕ್ಕೆ ಬರುವ ಮುಂಚೆ ಯಾವ ಕೆಲವು ಐದು ಗ್ಯಾರಂಟಿಗಳನ್ನು ನಾವು ಜನರಿಗೆ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದರೋ ಆ ಎಲ್ಲಾ ಗ್ಯಾರಂಟಿಗಳನ್ನು ಕೂಡ ಜನರಿಗೆ ಕೊಡುತ್ತಿದ್ದಾರೆ ಹೌದು, ಆ ಒಂದು ಯೋಜನೆಗಳನ್ನು ಜನರು ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಹೌದು ಆನ್ಲೈನ್ ಮೂಲಕ ನೀವು ಈ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಹಾಗಾದರೆ ಆ ಒಂದು ಅರ್ಜಿಯನ್ನು ಯಾವ ಒಂದು ವೆಬ್ಸೈಟ್ ನಲ್ಲಿ ಸಲ್ಲಿಸಬೇಕು? ಹಾಗೂ ಈ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದರೆ ಯಾವ ದಾಖಲಾತಿಗಳು ಬೇಕಾಗುತ್ತದೆ? ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹೌದು ಈಗಾಗಲೇ ಕಾಂಗ್ರೆಸ್ ಸರ್ಕಾರ ತಾವು ನೀಡಿದಂತಹ ಗ್ಯಾರಂಟಿ ಯೋಜನೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಮೊದಲನೆಯದು ಶಕ್ತಿ ಯೋಜನೆಯಾಗಿದೆ. ಹೌದು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದು ಇದರಲ್ಲಿ ಯಾವುದೇ ರೀತಿಯ ಹಣಕಾಸನ್ನು ಮಹಿಳೆಯರು ಕೊಡುವ ಅವಶ್ಯಕತೆ ಇಲ್ಲ. ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ. ಅದೇ ರೀತಿಯಾಗಿ ಇನ್ನು ಎರಡನೆಯದಾಗಿ ಕಾಂಗ್ರೆಸ್ ಸರ್ಕಾರ ಹೊರಡಿಸಿ ದಂತಹ ಗ್ಯಾರೆಂಟಿ ಯಾವುದೆಂದರೆ.
ಗೃಹಜ್ಯೋತಿ ಯೋಜನೆ ಹೌದು ಯಾರ ಮನೆಯಲ್ಲಿ 200 ಯೂನಿಟ್ ಒಳಗಡೆ ವಿದ್ಯುತ್ ಉಪಯೋಗಿಸುತ್ತಿರುತ್ತಾರೋ ಅವರಿಗೆ ವಿದ್ಯುತ್ ಉಚಿತ ಎನ್ನುವಂತಹ ಆದೇಶವನ್ನು ಸಿಎಂ ಸಿದ್ದರಾಮಯ್ಯ ಅವರು ಹೊರಡಿಸಿದ್ದರು. ಹೌದು ಅದೇ ವಿಷಯವಾಗಿ ಈಗ ಈ ಒಂದು ಯೋಜ ನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನೀವೇ ನಿಮ್ಮ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಗಾದರೆ ಒಂದು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಮೊದಲು ನೀವು ಗೂಗಲ್ ಗೆ ಹೋಗಿ ಸೇವಾ ಸಿಂಧು ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲಿ ಗೃಹಜ್ಯೋತಿ ಯೋಜನೆ ಎನ್ನುವಂತಹ ಆಯ್ಕೆಯನ್ನು ಮಾಡಿಕೊಂಡು. ಅಲ್ಲಿ ನಿಮ್ಮ ಹೆಸರು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಹಾಗೂ ವಿದ್ಯುತ್ ಬಿಲ್ ಯಾರ ಹೆಸರಿನಲ್ಲಿ ಇದೆಯೋ ಅವರ ಹೆಸರು ಅವರ ಮೊಬೈಲ್ ಸಂಖ್ಯೆ.
ಹೀಗೆ ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಹಾಕಿ ವೆರಿಫಿಕೇಶನ್ ಕೋಡ್ ಹಾಕಿ ಓಕೆ ಮಾಡಿದರೆ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸುಲಭವಾಗಿ ಈ ಒಂದು ಯೋಜನೆಗೆ ಅರ್ಜಿಯನ್ನು ನೀವು ಮನೆಯಲ್ಲಿಯೇ ಕುಳಿತು ಸಲ್ಲಿಸಬಹುದಾಗಿದೆ. ಅಥವಾ ಗ್ರಾಮ ಒನ್ ಬೆಂಗಳೂರು ಒನ್ ಕಚೇರಿಗೆ ಹೋಗಿ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ