ಆಧಾರ್ ಬ್ಯಾಂಕ್ ಖಾತೆ ಲಿಂಕ್ ಆಗದಿದ್ದರೆ ದುಡ್ಡು ಬರಲ್ಲ.ಅನ್ನ ಭಾಗ್ಯದ ಹಣ ನಿಮ್ಮ ಅಕೌಂಟ್ ಗೆ ಬರಬೇಕಂದ್ರೆ ಈ ಕೆಲಸ ಮಾಡಲೇಬೇಕು. ಪ್ರತಿ ಕೆಜಿಗೆ 34 ರೂಪಾಯಿಯಂತೆ 15 ದಿನದೊಳಗೆ ನಿಮ್ಮ ಖಾತೆಗೆ ಹಣ ಬರುತ್ತೆ ಬಿಪಿಎಲ್ ಖಾತೆದಾರರಿಗೆ ಬ್ಯಾಂಕಿಗೆ ನೇರವಾಗಿ ಹಣ ಬರಲು ಕೆಲವು ಕಂಡಿಷನ್ಸ್ ಇದೆ .ಮೊದಲನೆಯದಾಗಿ ನೀವು ಬಿಪಿಎಲ್ ಕಾರ್ಡ್ದಾರರಾಗಿರಬೇಕು ಎಪಿಎಲ್ ಕಾರ್ಡ್ ಅಲ್ಲ ರೇಷನ್ ಕಾರ್ಡ್ ನಲ್ಲಿ ನಮೂದಾಗಿರುವ ಕುಟುಂಬದ ಯಜಮಾನಿ ಯಜಮಾನ ಬ್ಯಾಂಕ್ ಖಾತೆ ಆಧಾರ್ ಜೋಡಣೆ ಕಡ್ಡಾಯ .ಆಧಾರ್ ಬ್ಯಾಂಕ್ ಲಿಂಕ್ ಆಗದಿದ್ದರೆ ದುಡ್ಡು ಬರೋದಿಲ್ಲ .ಮೊದಲು ನಿಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ನಂಬರ್ ಜೋಡಣೆ ಆಗಿದೆಯಾ ದೃಢೀಕರಿಸಿಕೊಳ್ಳಿ .ಆಧಾರ್ ಜೋಡಣೆ ಆಗದಿದ್ರೆ ಬ್ಯಾಂಕ್ ಖಾತೆ ಇರದಿದ್ದರೆ ಮೊದಲು ಖಾತೆ ತೆರೆಯಿರಿ .ಅದಕ್ಕೆ ಆಧಾರ್ ಲಿಂಕ್ ಮಾಡಿಸಿ ಮನೆಯ ಮುಖ್ಯಸ್ಥರ ಅಕೌಂಟ್ ಇಲ್ಲದಿದ್ದರೆ ಇತರ ಸದಸ್ಯರ ಆಕ್ಟಿವ್ ಬ್ಯಾಂಕ್ ಖಾತೆ ವಿವರವನ್ನು ನೀಡಬಹುದು .ಅನ್ನ ಭಾಗ್ಯದ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಡಿಬೀಟಿ ಮೂಲಕ ನಿಮ್ಮ ಖಾತೆಗೆ ದುಡ್ಡು ನೇರವಾಗಿ ಜಮೆಯಾಗಲಿದೆ. ಇವತ್ತೆ ದುಡ್ಡು ಬಂದಿರುತ್ತೆ ಅಂತ ಬ್ಯಾಂಕ್ ಖಾತೆ ಚೆಕ್ ಮಾಡುವ ಅವಶ್ಯಕತೆ ಇಲ್ಲ 15 ದಿನದ ಒಳಗಾಗಿ ನಿಮ್ಮ ಖಾತೆಗೆ ಹಣ ಬಂದುಬಿಡುತ್ತದೆ.ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.
