ಬಾಲಿವುಡ್ ಸಿನಿಮಾದಂತೆ ಸೀಮಾ ಹೈದರಾ ಮತ್ತು ಸಚಿನ್ ಅವರ ಪ್ರೇಮಕಥೆ ಪ್ರಸ್ತುತ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿ ದಿನನಿತ್ಯ ಮಾಧ್ಯಮಗಳಿಗೆ ಹಬ್ಬದೂಟದಂತಿದೆ.
ಪಾಕಿಸ್ತಾನದ ಕರಾಚಿಯಿಂದ ನೋಯಿಡವರೆಗಿನ ಸಂಪೂರ್ಣ ಕಥೆ ಕಲ್ಪನೆಗಿಂತ ಕಡಿಮೆ ಇಲ್ಲ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿರುವಂತಹ ವಿವಾಹಿತ ಸೀಮಾ ತನ್ನ ದೇಶವನ್ನು ತೊರೆದು ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದರು ಇಲ್ಲಿಗೆ ಬಂದ ನಂತರ ನೋಹಿಡಾದ ಸಚಿನ್ ಅವರನ್ನು ತನ್ನ ಪತಿ ಎಂದು ಕರೆಯಲು ಶುರು ಮಾಡಿದರು ಆಕೆಯ ಜೊತೆಯಲ್ಲಿ ಬಂದಂತಹ ನಾಲ್ವರು ಮಕ್ಕಳು ಸಚಿನನ್ನು ಅಪ್ಪ ಎಂದು ಕರೆಯಲು ಮುಂದಾದರು ತನಿಕಾ ಸಂಸ್ಥೆಗಳು ಹಲವಾರು ಅನುಮಾನಗಳೊಂದಿಗೆ ಆಕೆಯನ್ನು ವಿಚಾರಣೆ ನಡೆಸಲು ಮುಂದಾದವು ತನ್ನ ಪ್ರೀತಿಗಾಗಿ ಭಾರತಕ್ಕೆ ಬಂದೆ ಎಂದು ಹೇಳಿದಳು.
ವಾಸ್ತವವಾಗಿ ಆನ್ಲೈನ್ ಆಟ ಪಬ್ಜಿಯೊಂದಿಗೆ ಆರಂಭವಾದ ಸೀಮಾ ಮತ್ತು ಸಚಿನ್ ಪ್ರೇಮ ಕಥೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವಂಥದ್ದಲ್ಲ ತಾನು ಸಚಿನ್ ನನ್ನು ತುಂಬಾ ಪ್ರೀತಿಸುವುದಾಗಿ ಹೇಳಿ ಇಲ್ಲೇ ಇರುವುದಾಗಿ ಹೇಳುತ್ತಾಳೆ .
ಸೀಮಾ ಮತ್ತು ಆಕೆಯ ನಾಲ್ಕು ಮಕ್ಕಳನ್ನು ಸಚಿನ್ ಇಟ್ಟುಕೊಳ್ಳಲು ಒಪ್ಪಿಕೊಂಡನು ಆದರೆ ಇದಾದ ನಂತರವೂ ಇಬ್ಬರ ಸಮಸ್ಯೆಗಳು ಕಡಿಮೆಯಾಗಿಲ್ಲ ಸೀಮಾ ಸಚಿನ್ ಮತ್ತು ಅವರ ಮಕ್ಕಳ ವಿಚಾರಣೆ ನಡೆಯುತ್ತಲೇ ಇದೆ ಪ್ರತಿದಿನವೂ ಕೂಡ ಸಿಮಾಗೆ ಸಂಬಂಧಪಟ್ಟ ವಿಚಾರಗಳು ಬಹಿರಂಗವಾಗುತ್ತಿವೆ ಯುಪಿ ಎಟಿಎಸ್ ಜೊತೆ ಐಬಿ ಕೂಡ ಈ ಸೀಮಾ ಭಾರತದ ಗಡಿ ಹೇಗೆ ದಾಟಿದಳು ಎಂದು ತನಿಖೆ ಮಾಡುತ್ತಿದೆ ಮೂರನೇ ವ್ಯಕ್ತಿಯ ಸಹಾಯದಿಂದ ನೇಪಾಳದ ಮೂಲಕ ಸೀಮಾ ಭಾರತದ ಗಡಿಯ ಒಳಗೆ ಬಂದಿದ್ದಾಳೆ ಎಂದು ಗುಪ್ತಚರ ಸಂಸ್ಥೆಗೆ ಮಾಹಿತಿ ತಲುಪಿದೆ ಜುಲೈ 4 ರಂದು ನೋಹಿಡಾ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ . ಇದಾದ ನಂತರ ನ್ಯಾಯಾಲಯ ಕೆಲವು ಸೂಚನೆ ಮತ್ತು ಸಲಹೆಗಳೊಂದಿಗೆ ಜುಲೈ 7ರಂದು ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು ಇದೀಗ ಏಟಿಎಸ್ ಸಂಪೂರ್ಣ ತನಿಖೆಯನ್ನು ನಡೆಸುತ್ತಿದೆ . ಎಟಿಎಸ್ ಮೂಲಗಳ ಪ್ರಕಾರ ಇದುವರೆಗಿನ ವಿಚಾರಣೆಯಲ್ಲಿ ಸೀಮಾ ಎಲ್ಲಾ ಪ್ರಶ್ನೆಗಳಿಗೆ ತುಂಬಾ ನಿರಾತಂಕವಾಗಿ ಉತ್ತರವನ್ನು ನೀಡಿದ್ದಾಳೆ . ಮಾಧ್ಯಮದ ಎದುರು ಮುಕ್ತವಾಗಿ ಮಾತಾಡುವಂತೆ ತನಿಕಾ ಅಧಿಕಾರಿಗಳೊಂದಿಗೆ ಕೂಡ ಮುಕ್ತವಾಗಿ ಮಾತನಾಡುತ್ತಿದ್ದಾಳೆ. ಆಕೆಗೆ ಏನನ್ನ ಕಲಿಸಿ , ಏನೋ ಉದ್ದೇಶವನಿಟ್ಟುಕೊಂಡು ಆಕೆಯನ್ನು ಭಾರತಕ್ಕೆ ಕಳುಹಿಸಲಾಗಿದೆಯ ಎಂದು ಅರ್ಥ ಮಾಡಿಕೊಳ್ಳಲು ಎಟಿಎಸ್ ಪ್ರಯತ್ನಿಸುತ್ತಿದೆ. ಏಕೆಂದರೆ ಸೀಮಾ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿವುದರಿಂದ ಈ ಎಲ್ಲಾ ಅನುಮಾನಗಳು ಹುಟ್ಟಿಕೊಂಡಿವೆ.
ಈಕೆ ಮೊದಲು ಪಬ್ಜಿಯೊಂದಿಗೆ ಸಚಿನ್ ಭೇಟಿಯಾಗಿ ನಂತರ ಭಾರತಕ್ಕೆಬರಲುಯೋಜಿಸಿದಳಂತೆ ಹಣಕ್ಕಾಗಿ ಮನೆಯನ್ನು ಮಾರಿದಳು ಮತ್ತೆ ತನ್ನ ಎಲ್ಲಾ ನಾಲ್ಕು ಮಕ್ಕಳ ಪಾಸ್ಪೋರ್ಟ್ ಗಳನ್ನು ಸಹ ಮಾಡಿಸಿದಳು ಟ್ರಾವೆಲ್ ಏಜೆಂಟ್ ಸಹಾಯದಿಂದ ಟಿಕೆಟ್ ಕೂಡ ಬುಕ್ಕು ಮಾಡಿಸಿದಳು ಐದನೇ ತರಗತಿಯನ್ನು ಓದಿದಾಕೆ ಈ ಎಲ್ಲವನ್ನು ಹೇಗೆ ಮಾಡಿದಳು ಎಂದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ. ದುಡ್ಡನ್ನು ಉಳಿಸಲು ಸೀಮಾ ಮೊದಲು ಕರಾಚಿಯಿಂದ ಶರ್ಜಗೆ ಬಂದು ಅಲ್ಲಿಂದ ನೇಪಾಳಕ್ಕೆ ವಿಮಾನ ವಿಮಾನದಲ್ಲಿ ಬಂದಳಂತೆ. ಶರ್ಜಾ ವಿಮಾನ ನಿಲ್ದಾಣದಲ್ಲಿ ಕನೆಕ್ಟಿಂಗ್ ಫ್ಲೈಟ್ ಗಾಗಿ ಕಾದು ಅದರಲ್ಲಿ ಬಂದ ಸೀಮಾ ನೇಪಾಳಕ್ಕೆ ತಲುಪಿದಳು . ಆಕೆ ಇಮಿಗ್ರಷನ್ಗೆ ಕಣ್ಣನ್ನು ತಪ್ಪಿಸಿ ಉತ್ತರ ಪ್ರದೇಶಕ್ಕೆ ತಲುಪಿದಳು . ಎಸ್‌ಎಸ್‌ಬಿ ಸೀಮಾ ತಲುಪಿದ ಸ್ಥಳಗಳಲ್ಲಿ ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದೆ. ಭದ್ರತಾ ಏಜೆನ್ಸಿಗಳ ಮುಂದಿರುವ ದೊಡ್ಡ ಆತಂಕವೆಂದರೆ ಸೀಮಾ ಮತ್ತು ಐದರ್ ಭಾರತ ಮತ್ತು ನೇಪಾಳ ಗಡಿಯಿಂದ ಹೇಗೆ ಪ್ರವೇಶಿಸಿದರು ಎಂದು ಭದ್ರತಾ ಏಜೆನ್ಸಿಗಳ ನಡುವೆ ಸಾಕಷ್ಟು ಪ್ರಶ್ನೆಗಳಿವೆ.
ಆಕೆಗೆ ಐ ಎಸ್ ಐ ತರಬೇತಿ ಸಿಕ್ಕಿದೆ ಎಂದು ಅನುಮಾನಗಳಿವೆ ಈ ಮಹಿಳೆ ನೇಪಾಳದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾಳೆ ಎಂದು ಮಾಜಿ ಮಿಲಿಟರಿ ಅಧಿಕಾರಿಗಳ ಅಭಿಪ್ರಾಯವಾಗಿದೆ ಮಾತಿನ ಶೈಲಿಯಿಂದ ಹಿಡಿದು ವೇಷ ಭೂಷಣದವರೆಗೆ ಎಲ್ಲಾ ಎಲ್ಲಾ ಮಾಹಿತಿಯನ್ನು ಆಕೆಗೆ ಕಲಿಸಲಾಗಿದೆ. ಏಕೆ ಸೀರೆ ಉಡುವ ರೀತಿ ಯುಪಿಯ ಮಾದರಿಯಲ್ಲಿದೆ. By ಭಾರತೀಯರಂತೆ ಕಾಣುವಂತೆ ಸೀಮಾ ಮತ್ತೆ ಸಚಿನ್ ಗೆ ವೇಷವನ್ನು ಬದಲಿಸಲಾಗಿದೆ. ಇವರು ಮಾತನಾಡುವ ಭಾಷೆ ಎಲ್ಲರನ್ನೂ ದಿಗಲುಗೊಳಿಸುತ್ತದೆ.
ಮಾತೃಭಾಷೆ ಉರ್ದುವನ್ನು ಮಾತನಾಡಬಲ್ಲರು. ಉತ್ತರ ಪ್ರದೇಶದ ಹಿಂದಿಯನ್ನು ಹಾಗೂ ಇಂಗ್ಲೀಷನ್ನು ಮಾತನಾಡುತ್ತಾಳೆ. ಅದು ಕೂಡ ತುಂಬಾ ನಿರರ್ಗಳವಾಗಿ ಮಾತನಾಡುತ್ತಾಳೆ. ಐದನೇ ತರಗತಿಯನ್ನು ಓದಿದ ಈ ಪಾಕಿಸ್ತಾನದ ಮಹಿಳೆ ಈ ಎಲ್ಲವನ್ನು ಎಲ್ಲಿ ಕಲಿತಾಳು ಅನುಮಾನವಿದೆ. ಮೇ 13ನೇ ತಾರೀಕು ಭಾರತಕ್ಕೆ ಬಂದಿದ್ದಾಗಿ ಸೀಮಾ ಹಾಗೂ ಸಚಿನ್ ಹೇಳಿದ್ದಾರೆ ಹೇಳಿದ್ದಾರೆ. ಆದರೆ ಆ ತಾರೀಕಿನಂದು ಸೀಮಾ ಮತ್ತು ಆಕೆಯ ಮಕ್ಕಳುಹಾಗೂ ಸಚಿನ್ ಭಾರತಕ್ಕೆ ಬಂದಿಲ್ಲವೆಂದು ಸಿಸಿಟಿವಿ ಕ್ಯಾಮೆರಾಗಳು ತಿಳಿಸಿವೆ. ಹಾಗಾದರೆ ಆಕೆ ಭಾರತಕ್ಕೆ ಬಂದಿದ್ದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.
ಪಾಕಿಸ್ತಾನದಲ್ಲಿ ನಡೆದಂತಹ ಆಕೆಯ ಮೊದಲನೇ ಮದುವೆಯ ಐದರ್ ನ ಜೊತೆಗಿನ 2 ಸಿಡಿಗಳನ್ನು ತಂದಿದ್ದಾಳೆ. ಹಾಗೂ ಈಕೆ 4 ಆಕ್ಟಿವ್ ಮೊಬೈಲ್ ಗಳನ್ನು ಹೊಂದಿದ್ದಾಳೆ.