ಸದಾನಂದ ಗೌಡರ ಕಣ್ಣೀರ ಕಥೆ ಒಬ್ಬ ಮಗ ಸಾವು…ಮತ್ತೋರ್ವ…ಸಿದ್ದು ಮಗನ ಸಾವಿಗೆ ಸದಾನಂದ ಗೌಡರು ಹೇಳಿದ್ದೇನು

ಹಾಯ್ ಫ್ರೆಂಡ್ಸ್ ಮಾಜಿ ಸಿಎಂ ಸದಾನಂದ ಗೌಡ ಅವರ ಮಕ್ಕಳ ಕಥೆ ಗೊತ್ತಾ ? ಮೊದಲ ಮಗ ಸಣ್ಣ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಇದು ಹೇಗೆ, ಎರಡನೆಯ ಮಗನಿಗೂ ಅಪಘಾತವಾದಾಗ ಏನಾಯಿತು ವಿಧಿಯ ಬಗ್ಗೆ ಇಂದಿಗೂ ಆಶ್ಚರ್ಯವೆನಿಸುತ್ತದೆ ಸದಾನಂದಗೌಡ ರವರಿಗೆ .

WhatsApp Group Join Now
Telegram Group Join Now

ಸದಾನಂದ ಗೌಡರು ಯಾವಾಗಲೂ ಇರುವುದು ಏಕೆ? ಎಲ್ಲವನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ಮಗ ಕೌಶಿಕ್ ಗೌಡನ ಸಾವು ಸದಾನಂದ ಗೌಡರಿಗೆ ಇಬ್ಬರು ಮಕ್ಕಳು ಮೊದಲನೆಯ ಮಗ ಕೌಶಿಕ್ ಗೌಡ 2003ರಲ್ಲಿ ನಿಡ್ಡೆ ಕಾಲೇಜಿನಲ್ಲಿ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದರು . ಒಂದು ದಿನ ಕೌಶಿಕ್ ಗೌಡ ಪುತ್ತೂರಿನಲ್ಲಿದ್ದ ಮನೆಗೆ ಬಂದಿದ್ದರು ಅದೇ ದಿನ ಸದಾನಂದ ಗೌಡರ ಅಕ್ಕ ಅಂದರೆ ಕೌಶಿಕ್ ಗೌಡರ ಅತ್ತೆ ಮನೆಗೆ ಬಂದಿದ್ದರು. ಜೀಪಿನಲ್ಲಿ ಬಂದಿದ್ದ ಅವರು ವಾಪಸ್ ಹೋಗುವಾಗ ಹೇಗೂ ಎರಡು ದಿನ ರಜೆ ಇದೆಯಲ್ಲವಾ ಆದ್ದರಿಂದ ನೀನು ಮನೆಗೆ ಬಾ ಎಂದು ಕೌಶಿಕ್ ಗೌಡನನ್ನು ಕರೆದರು ಆದರೆ ಕೌಶಿಕ್ ಗೌಡ ಅತ್ತೆ ಮನೆಗೆ ಹೋಗಲು ಒಪ್ಪಲಿಲ್ಲ. ನಾನು ಬರೋದೇ ಇಲ್ಲ ಎಂದು ಹಠ ಹಿಡಿದರು ಆಗ ಅವರ ತಾಯಿ ಏಕೆ ಹೋಗುವುದಿಲ್ಲ ಎಂದು ಕೌಶಿಕ್ ಗೌಡನನ್ನು ಕೇಳಿದರು.

ಅತ್ತೆ ಕರೆಯುತ್ತಿದ್ದಾರಲ್ಲವಾ ಕೌಶಿಕ್ ಗೌಡ ಆದ್ದರಿಂದ ನೀನು ಹೋಗಿ ಬಾ ಎಂದು ತಾಯಿ ಕೌಶಿಕ್ ಗೌಡನಿಗೆ ಹೇಳಿದರು. ಎಲ್ಲರ ಒತ್ತಾಯದ ಮೇರೆಗೆ ಕೌಶಿಕ್ ಗೌಡ ಅತ್ತೆಯ ಮನೆಗೆ ಹೊರಟರು. ಸುಳ್ಯ ಹತ್ತಿರ ಬಂದಾಗ ಸಿಕ್ಕ ಮಾವನ ಮಗ ಜೊತೆ ಜೀಪಿನಲ್ಲಿ ಹೊರಟಿದ್ದಾಗ ಕೌಶಿಕ್ ಗೌಡ ಸುಳ್ಯ ಹತ್ತಿರ ಬಂದಿದ್ದರು. ಅತ್ತೆಯ ಮನೆ ಇನ್ನೇನು ಸ್ವಲ್ಪ ದೂರದಲ್ಲೇ ಇತ್ತು. ಅದೇ ದಾರಿಯಲ್ಲಿದ್ದ ಮಾವನ ತಮ್ಮನ ಮಗ ಏಕೆ ಜೀಪಿನಲ್ಲಿ ಹೋಗುತ್ತಿದ್ದೀಯಾ? ಬಾ ನನ್ನ ಜೊತೆ ಬೈಕಿನಲ್ಲಿ ಹೋಗೋಣ ಎಂದು ಕರೆದನು. ಆಗ ಕೌಶಿಕ್ ಗೌಡ ಜಿಪಿಲಿಂದ ಇಳಿದು ಬೈಕಿನ ಹಿಂಭಾಗದಲ್ಲಿ ಕುಳಿತರು.

ಕೌಶಿಕ್ ಗೌಡ ಹಾಗೂ ಅವರ ಮಾವನ ತಮ್ಮನ ಮಗ ಬೈಕಿನಲ್ಲಿ 3 ಕಿಲೋಮೀಟರ್ಗಳ ವರೆಗೆ ಪ್ರಯಾಣಿಸಿದ್ದರು ಬೈಕ್ ಸ್ಕಿಡ್ ಆಗಿ ಅಪಘಾತವಾಯಿತು. ಬೈಕ್ ಓಡಿಸುತ್ತಿದ್ದ ಮಾವನ ತಮ್ಮನ ಮಗನಿಗೆ ಏನು ಆಗಿರಲಿಲ್ಲ, ಬೈಕಿಗೂ ಅಷ್ಟೇನೂ ಡ್ಯಾಮೇಜ್ ಆಗಿರಲಿಲ್ಲ , ಆದರೆ ಕಲ್ಲಿನ ಮೇಲೆ ಬಿದ್ದಿದ್ದ ಕೌಶಿಕ್ ಗೌಡನಿಗೆ ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದ್ದಿತ್ತು ಕ್ಷಣದಲ್ಲಿ ಅವರು ಪ್ರಾಣವನ್ನು ಕಳೆದುಕೊಂಡಿದ್ದರು. ಆಗ ಸದಾನಂದ ಗೌಡರು ಪುತ್ತೂರು ಕ್ಷೇತ್ರದ ಶಾಸಕರಾಗಿದ್ದರು.

ಕೌಶಿಕ್ ಗೌಡನಿಗೆ ಅಪಘಾತವಾದ ದಿನ ಸದಾನಂದ ಗೌಡರು ಒಂದು ಹಳ್ಳಿಗೆ ಭೇಟಿ ನೀಡಿದ್ದರು. ಅದನ್ನು ಉತ್ಸಾಹಂಬುಲೆನ್ಸ್ ಅವರ ಮುಂದೆಯೇ ಹಾದು ಹೋಗಿತ್ತು. ಸದಾನಂದ ಗೌಡರ ಎರಡನೇ ಮಗನಿಗೂ ಆಗಿತ್ತು ಅಪಘಾತ.

ಅದು 2008 ಮೊದಲನೆಯ ಮಗ ಕೌಶಿಕ್ ಗೌಡ ವಿಧಿವಶರಾಗಿ ಐದು ವರ್ಷ ಕಳೆದಿತ್ತು. ಎರಡನೆಯ ಮಗ ಕಾರ್ತಿಕ್ ಗೌಡ ಇವರು ಕೂಡ ನಿದ್ದೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಂದು ದಿನ ಮಣಿಪಾಲಿಗೆ ಹೋಗಿದ್ದ ಕಾರ್ತಿಕ್ ಗೌಡ ಹಾಗೂ ಅವನ ಸ್ನೇಹಿತರು ವಾಪಸ್ ಬರುತ್ತಿದ್ದರು.

ಕಾರಿನ ಹಿಂದಿನ ಭಾಗದ ಸೀಟಿನಲ್ಲಿ ಕಾರ್ತಿಕ್ ಗೌಡರವರು ಕುಳಿತಿದ್ದರು. ರಾತ್ರಿ ಒಂಬತ್ತು ಗಂಟೆ ವೇಳೆಗೆ ಕಾರು ಅಪಘಾತವಾಯಿತು. ಸ್ಥಳದಲ್ಲೇ ಇಬ್ಬರು ಪ್ರಾಣವನ್ನಪ್ಪಿ ಕಾರ್ತಿಕ್ ಗೌಡ ರವರು ಗಂಭೀರ ಗಾಯವಾಗಿದ್ದರು. ಗಾಯಗೊಂಡಿದ್ದ ಕಾರ್ತಿಕ್ ರವರನ್ನು ದಾರಿಯಲ್ಲಿ ಹೋಗುತ್ತಿದ್ದ ಒಬ್ಬರು ಆಸ್ಪತ್ರೆಗೆ ಕರೆದುಯ್ದಿದ್ದರು. ಆ ವ್ಯಕ್ತಿಯ ಹೆಸರು ಸುರೇಶ್ ಈ ವ್ಯಕ್ತಿಯನ್ನು ಸದಾನಂದ ಗೌಡರವರು ಇನ್ನೂ ಕೂಡ ಮರೆತಿಲ್ಲ. ಮಣಿಪಾಲಿನ ರಾಜ ಎನ್ನುವ ಡಾಕ್ಟರ್ ಕಾರ್ತಿಕ್ ರವರಿಗೆ ಚಿಕಿತ್ಸೆಯನ್ನು ನೀಡಿದ್ದರು. ಬೆಳಗ್ಗೆಯವರೆಗೂ ಕೂಡ ಯಾರಿಗೂ ಮಾಹಿತಿ ತಿಳಿದಿರಲಿಲ್ಲ.

ಸದಾನಂದ ಗೌಡರವರು ಈ ಸಮಯದಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು. ಅಪಘಾತದ ಮರುದಿನವೇ ರಾಷ್ಟ್ರೀಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯಲಿತ್ತು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

[irp]