ಅರ್ಧಕ್ಕೆ ನಿಂತು ಹೋದ ಸಿನಿಮಾಗಳು. ನಮ್ಮ ಸಿನಿಮಾ ರಂಗ ಈ ದಿನಗಳಲ್ಲಿ ಅತ್ಯಂತ ಒಳ್ಳೆಯ ಸಿನಿಮಾಗಳನ್ನು ಕೊಡುತ್ತಿದೆ ಹೊರದೇಶದಲ್ಲೂ ಕೂಡ ಪ್ರಚಾರವಾಗುತ್ತಿದೆ. ನಾವು ಇವತ್ತು ಮಾತನಾಡಕ್ಕೆ ಹೊರಟಿರೋದು ಕ್ಯಾನ್ಸಲ್ ಆಗಿರುವಂತ ಕೆಲವೊಂದು ಸಿನಿಮಾಗಳ ಬಗ್ಗೆ. ಈ ಲಿಸ್ಟ್ ನಲ್ಲಿ ಯಾವುದೆಲ್ಲ ಸಿನಿಮಾಗಳು ಕಾಣುತ್ತೆ ಅಂತ ನೋಡೋಣ ಬನ್ನಿ.
ಕಮಲಶಿಲೆಯಲ್ಲಿ ದೇವಿಯ ಉದ್ಬವ ಶಿಲೆಯಿಂದ ಪ್ರತಿದಿನ ಪವಾಡ.. ಏನಿದು ಇಲ್ಲಿತನಕ ಯಾರಿಗೂ ತಿಳಿಯದ ವಿಸ್ಮಯ…
ಮೊದಲನೇದಾಗಿ ಕುಸ್ತಿ ಸಿನಿಮಾ. ಬರೀ ಕುಸ್ತಿ ಅಂತ ಅಂದ್ರೆ ಜನರಿಗೆ ಗೊತ್ತಾಗಲ್ಲ ದುನಿಯಾ ವಿಜಯ್ ನಟಿಸಿರುವ ಕುಸ್ತಿ ಸಿನಿಮಾ ಅಂತಂದ್ರೆ ಎಲ್ಲರಿಗೂ ಕೂಡ ಗೊತ್ತಾಗುತ್ತೆ. ತನ್ನ ಫಸ್ಟ್ ಲುಕ್ ಇಂದ ಸಾಕಷ್ಟು ಸದ್ದು ಮಾಡಿರುವ ಸಿನಿಮಾ ಕುಸ್ತಿ. ಇದರ ಜೊತೆಗೆ ದುನಿಯಾ ವಿಜಯ ಅವರ ಮಗ ಸಾಮ್ರಾಟ್ ಕೂಡ ಕಾಣಿಸಿಕೊಳ್ಳಬೇಕಾಗಿತ್ತು. ಅಂತದೆ ಚಿತ್ರೀಕರಣ ಆದ್ಮೇಲೆ ಈ ಸಿನಿಮಾ ಏನಾಯ್ತು ಅಂತ ಯಾರಿಗೂ ಕೂಡ ಗೊತ್ತಾಗ್ತಿಲ್ಲ.
ಹಾಗೆ ನಿಮಗೆಲ್ಲ ಗೊತ್ತಿರಬಹುದು ಬಹಳಷ್ಟು ವರ್ಷಗಳಿಂದ ಸಿನೆಮಾ ರಂಗದಲ್ಲಿ ಇದ್ದರೂ ಕೂಡ ಧನಂಜಯ್ ಅವರಿಗೆ ಯಾವುದೇ ಸಿನಿಮಾ ಕೂಡ ನಾಯಕನಟನಾಗಿ ಇನ್ನು ಸಿಕ್ಕಿಲ್ಲ. ಆ ಸಂದರ್ಭದಲ್ಲಿ ಇವರ ಕೈಯನ್ನ ಹಿಡಿದಿದ್ದು ಶಿವಣ್ಣ ನಟನೆಯ ಟಗರು ಸಿನಿಮಾ. ಇದರಲ್ಲಿ ಡಾಲಿ ಎನ್ನುವ ಪಾತ್ರವನ್ನು ಮಾಡಿದ್ದರು ಇವತ್ತು ಅವತ್ತಿನಿಂದ ಎಲ್ಲರೂ ಇವರನ್ನ ಇವತ್ತಿನವರೆಗೂ ಡಾಲಿ ಅಂತಾನೆ ಕರೆಯುತ್ತಾರೆ.
ಡಾಲಿ ಹೆಸರಿನಿಂದನೆ ಧನಂಜಯ್ ಒಂದು ಸಿನಿಮಾ ವನ್ನು ಅನೌನ್ಸ್ ಮಾಡಿದ್ರು ಅದರಲ್ಲಿ ಡಿಂಪಲ್ ಕ್ವೀನ್ ರಚಿತಾ ನಟಿಸಿದ್ದರು ಆದರೆ ಕೆಲವೇ ದಿನಗಳಲ್ಲಿ ಈ ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗುತ್ತೆ. ಸಿಂಪಲ್ ಸಿನಿಮಾ ದ ಮನಮೋಹಕ ಎನ್ನು ಚಿತ್ರದಲ್ಲಿ ನಟಿಸುವುದಕ್ಕೆ ಶಿವಣ್ಣ ಅವರು ತಯಾರಿಯನ್ನು ಮಾಡಿಕೊಂಡಿರುತ್ತಾರೆ. ಹಾಗೂ ಇದರ ಫೋಟೋ ಶೂಟ್ ಕೂಡ ನಡೆದಿತ್ತು ಆದರೆ ಇದು ಸಡನ್ನಾಗಿ ನಿಂತು ಹೋಯ್ತು.
ಸಿಂಪಲ್ ಸುನಿ ಹಾಗೂ ಶಿವಣ್ಣ ಅವರ ಕಾಂಬಿನೇಷನ್ ಇದು ಒಂದು ಡ್ರೀಮ್ ಕಾಂಬಿನೇಷನ್ ಗಳಲ್ಲಿ ಒಂದಾಗಿದೆ. ಆದರೂ ಕೂಡ ಇದು ಮುಂದುವರಿಯದೆ ಅರ್ಧಕ್ಕೆ ನಿಂತು ಹೋಯ್ತು, ಏನಂತ ಗೊತ್ತಾಗ್ತಿಲ್ಲ ನಿಜವಾಗಲೂ. ಆದರೆ ಮನಮೋಹಕ ಸಿನಿಮಾದ ಬಗ್ಗೆ ಇನ್ನೂ ಮಾತೇ ಇದ್ದಿಲ್ಲ ಅಲ್ಲಿಗೆ ಇದು ನಿಂತು ಹೋಗಿದೆ. ಇವರಿಬ್ರೂ ಸೇರಿ ಸಿನಿಮಾವನ್ನ ಮತ್ತೆ ಶುರು ಮಾಡಿದ್ರೆ ಒಂದು ಒಳ್ಳೆ ಸಿನಿಮಾ ಖಂಡಿತ ಆಗುತ್ತೆ ಆದರೆ ಆ ಸಿನಿಮಾದ ಬಗ್ಗೆ ಯಾಕೋ ಮಾತೇ ಎದ್ದಿಲ್ಲ.
ನೂರಾರು ಕೋಟಿಯ ಒಡೆಯ..! ಚೈತ್ರ ಕುಂದಾಪುರ ವಂಚಿಸಿದ ಈ ಗೋವಿಂದ ಬಾಬು ಪೂಜಾರಿ ಯಾರು ಗೊತ್ತಾ ?
ಕಿಚ್ಚ ಸುದೀಪ್ ಅವರ ಜೀವನದಲ್ಲಿ ಬಚ್ಚನ್ ಎನ್ನುವ ಸಿನಿಮಾ ತುಂಬಾ ಕನಸಿನ ಸಿನಿಮಾ ಅಂತಾನೆ ಹೇಳಬಹುದು. ಅದ ನಂತರ ಕನ್ವರ್ ಲಾಲ್ ಎಂಬ ಸಿನಿಮಾದಲ್ಲಿ ಕೂಡ ಕಿಚ್ಚ ಸುದೀಪ್ ಕಾಣಿಸಿಕೊಳ್ಳಬೇಕಾಗಿತ್ತು. ಫೋಟೋಶೂಟ್ ಕೂಡ ಮಾಡ್ಸಿದ್ರು ಅಂಬಿ ಅವರ ಐಕವರಿಂಗ್ ಡೈಲಾಗ್ ನೆನಪಾಗುತ್ತೆ. ಸಿನಿಮಾ ವನ್ನ ಕಿಚ್ಚ ಸುದೀಪ್ ಅವರೇ ನಿರ್ದೇಶನ ಮಾಡೋದು ಅಂತ ಕೂಡ ಫಿಕ್ಸ್ ಆಗಿತ್ತು. ಇದುವರೆಗೂ ಕೂಡ ಈ ಸಿನಿಮಾ ಪತ್ತೆನೇ ಇಲ್ಲ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹು ನಿರೀಕ್ಷಿತ ಸಿನಿಮಾ ಇದು. ನಾನು ಮಾತಾಡ್ತಾ ಇರೋದು ಮಂಜಿನ ಹನಿ ಸಿನಿಮಾದ ಬಗ್ಗೆ. ಕೇವಲ ನಿರ್ದೇಶನ ಮಾಡೋದಲ್ದೆ ನಿರ್ಮಾಣವನ್ನು ಕೂಡ ರವಿಚಂದ್ರನ್ ಅವರೇ ಮಾಡ್ತಾ ಇದ್ರು. ಹರಿಪ್ರಿಯಾ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದರು ಅಂತ ಸುದ್ದಿಯಾಗಿದೆ. ರವಿಚಂದ್ರನ್ ಅವರು ಈ ಸಿನಿಮಾ ವನ್ನ ಅಡ್ವಾನ್ಸ್ ಟೆಕ್ನಾಲಜಿ ಮೂಲಕ ಮಾಡಿದ್ರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.