ಟೀ ಕಾಫಿ ಕುಡಿತೀರಾ ಅಬ್ಬಾ ಎಷ್ಟು ಡೇಂಜರ್ ಡಾಕ್ಟರ್ ಹೇಳಿದ ಮಾತು ಟೀ ಕಾಫಿಯಿಂದ ಎಷ್ಟು ಕಾಯಿಲೆ ಬರ್ತವೆ..ನೋಡಿ - Karnataka's Best News Portal

ಟೀ ಕಾಫಿ ಕುಡಿತೀರಾ ಅಬ್ಬಾ ಎಷ್ಟು ಡೇಂಜರ್ ಡಾಕ್ಟರ್ ಹೇಳಿದ ಮಾತು ಟೀ ಕಾಫಿಯಿಂದ ಎಷ್ಟು ಕಾಯಿಲೆ ಬರ್ತವೆ..ನೋಡಿ

ಟೀ ಕಾಫಿ ಎಷ್ಟು ಡೇಂಜರ್. ಎನ್ನುವ ಬಗ್ಗೆ ಇವತ್ತಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.ಇಂದಿನ ದಿನಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಹೆಚ್ಚಿನವರಿಗೆ ಅಭ್ಯಾಸಕ್ಕಿಂತ ಲೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಬಹುದು! ಅದರಲ್ಲೂ ಸಿಟಿ ಲೈಫ್‌‌ಸ್ಟೈಲ್‌ಗೆ ಎಡ್ಜೆಸ್ಟ್ ಆದವರಿಗೆ ಈ ಅಭ್ಯಾಸ ಇದ್ದೇ ಇರುತ್ತದೆ.

ಮುಖ ತೊಳೆಯದೇ, ಹಲ್ಲುಜ್ಜದೆ ಖಾಲಿ ಹೊಟ್ಟೆಗೆ ಒಂದು ಲೋಟ ಕಾಫಿ ಕುಡಿದರೆ, ಮಾತ್ರವೇ ಅವರಿಗೆ ಸಮಾಧಾನವಾಗುವುದು ಕೆಲವರಿಗಂತು ಬೆಳಗ್ಗೆ ಕಾಫಿ ಅಥವಾ ಟೀ ಕುಡಿಯದೆ ಹೋದರೆ ತಲೆನೋವು ಬಂದು ಬಿಡುತ್ತದೆ ಎಂದು ಹೇಳುವುದು ಉಂಟು.ಮೊದಲಿಗೆ ಫ್ಯಾಷನ್ ರೀತಿಯಲ್ಲಿ ಶುರು ಮಾಡಿಕೊಂಡಿ ರುವ ಈ ಅಭ್ಯಾಸ, ಆಮೇಲೆ ಇದಕ್ಕೆ ಎಡಿಕ್ಟ್ ಆಗಿ ಬಿಟ್ಟಿರು ತ್ತಾರೆ. ಇನ್ನು ಕೆಲವರು, ಬೆಳಗ್ಗೆ ಎದ್ದ ಕೂಡಲೇ ಕಾಫಿ ಬದಲು ಬಿಸಿ ಬಿಸಿ ಚಹಾ ಕುಡಿಯುವ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಆದರೆ ಖಾಲಿ ಹೊಟ್ಟೆಗೆ, ಅಥವಾ ದಿನದಲ್ಲಿ ಮೂರು- ನಾಲ್ಕು ಬಾರಿ ಈ ಎರಡೂ ಪಾನೀಯಗಳನ್ನು ಕುಡಿಯು ವುದು, ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ.ಇದರ ಬದಲು ಬೆಳಗ್ಗೆ ತಿಂಡಿ ತಿಂದು ಆನಂತರ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದ ಮೆಟಬಾಲಿಸಂ ಪ್ರಕ್ರಿಯೆ ಸರಿಯಾಗಿ ನಡೆಯು ವುದು ಜೊತೆಗೆ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಆದರೆ ಗೊತ್ತಿರಲಿ, ಟೀ-ಕಾಫಿಗೆ ಸಕ್ಕರೆ ಬೆರೆಸದೆ ಕುಡಿ ಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..

ಕೆಫಿನ್ ಅಂಶ ಹೆಚ್ಚಿರುವ ಚಹಾ ಅಥವಾ ಕಾಫಿ ಕುಡಿ ಯುವ ಕುಡಿಯುವ ಅಭ್ಯಾಸ ಮಾಡಿಟ್ಟುಕೊಂಡರೆ, ದಿನಾ ಹೋದ ಹಾಗೆ ನಮ್ಮ ದೇಹದ ರಕ್ತದಲ್ಲಿ ಪಾಲಿಫಿನಾಲ್ ಹಾಗೂ ಟ್ಯಾನಿನ್ ಎನ್ನುವ ಸಂಯುಕ್ತ ಅಂಶಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ.ಇದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳಿಂದ, ಸಿಗಬಹುದಾದ ಕಬ್ಬಿಣಾಂಶದ ದೇಹಕ್ಕೆ ಸರಿಯಾಗಿ ಸಿಗದೇ ಹೋಗಬಹುದು! ಇದರ ಅಡ್ಡಪರಿಣಾಮ ಎನ್ನುವಂತೆ, ಮುಂದಿನ ದಿನಗಳಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾರು ವಿಪರೀತ ವಾಗಿ ಸಕ್ಕರೆ ಬೆರೆಸಿರುವ ಚಹಾ-ಕಾಫಿ ಹೆಚ್ಚಾಗಿ ಕುಡಿ ಯುವ ಅಭ್ಯಾಸ ಮಾಡಿಕೊಂಡಿರುವವರಿಗೆ ಅಜೀರ್ಣ- ಮಲಬದ್ಧತೆ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತ ದೆಯಂತೆ.ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ ಮೊದಲೇ ಹೇಳಿದ ಹಾಗೆ, ದಿನದಲ್ಲಿ ಮೂರು-ನಾಲ್ಕು ಬಾರಿಕ್ಕಿಂ ತಲೂ ಹೆಚ್ಚಾಗಿ ಈ ಪಾನೀಯದ ಸೇವನೆಯಿಂದ ನಿರ್ಜ ಲೀಕರಣ ಸಮಸ್ಯೆ ಉಂಟಾಗಿ ಬಿಡುತ್ತದೆ. ಇದರಿಂದಾಗಿ ದೇಹದಲ್ಲಿರುವ ನೀರಿನಾಂಶ ಕಡಿಮೆ ಆಗಿ, ಇಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಕೊನೆಗೆ ಇದೇ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಅಜೀರ್ಣತೆ, ಮಲಬದ್ಧತೆ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ.ವಿಶೇಷವಾಗಿ ಟೀ-ಕಾಫಿಗೆ ಹಾಕುವ ಹಾಲು ಸಕ್ಕರೆಯ ಜೊತೆ ಕೆಫಿನ್ ಅಂಶ ಮಿಕ್ಸ್ ಆಗಿ ಬಿಟ್ಟರೆ, ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ.ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲಿ ಎಂದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡವರಲ್ಲಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಹದ ನೀರಿನಾಂಶ ಮೂತ್ರದ ಮೂಲಕ ಹೊರ ಹೋಗುತ್ತಾ ಇರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..