ಬಿಗ್ ಬಾಸ್ ಸೀಸನ್ 10 ಪ್ರಾರಂಭಕ್ಕೆ ಮುಂಚಿತವಾಗಿಯೂ ಕೂಡ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದಂತಹ ಬಿಗ್ ಬಾಸ್ಗೆ ಯಾರೆಲ್ಲಾ ಬರ್ತಾರೆ. ಬಂದವರು ಹೇಗಿರುತ್ತಾರೆ? ಈ ಬಾರಿ ಕಾಂಟ್ರವರ್ಸಿ ಜಾಸ್ತಿ ಇರುತ್ತೆ ಅಥವಾ ಏನಾದರೂ ಹೊಸದಾಗಿರುತ್ತವೆ ಅನ್ನುವಂತ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಬಿಗ್ ಬಾಸ್‌ನಲ್ಲಿ ಎಲಿಮಿನೇಷನ್ ಕೂಡ ಆಗಿ ಹೋಗಿದೆ. ಹೌದು, ಮೊದಲ ವಾರದಲ್ಲಿ ಸ್ನೇಕ್ ಶಾಮ್ ಅವರನ್ನ ಮನೆ ಯಿಂದ ಹೊರಗೆ ಕಳಿಸಲಾಗಿದೆ. ಇದೆಲ್ಲದರ ನಡುವೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಜಗಳ ಕೂಡ ಶುರುವಾಗಿ ಬಿಟ್ಟಿದೆ.
ಹೌದು, ನಾರ್ಮಲ್ ಆಗಿ 2 ವಾರ ಆದ್ಮೇಲೆ ಬಿಗ್ ಬಾಸ್ನಲ್ಲಿ ಜಗಳ ಶುರುವಾಗ್ತಿತ್ತು. ಆದರೆ ಈ ಬಾರಿ ಹಾಗಲ್ಲ ಮೊದಲ ವಾರದಲ್ಲೇ ಸಿಕ್ಕಾ ಪಟ್ಟೆ ಕಿರಿಕ್ ಆಗ್ತಾ ಇದೆ. ಅದು ಕೂಡ ಸಮರ್ಥರು ಅಸಮರ್ಥರು ಅನ್ನುವಂತದ್ದು ಆದ ನಂತರ ಅದರಲ್ಲಿದ್ದವರು ಕೆಲವು ಚೇಂಜ ಕೂಡ ಆಗಿದ್ದಾರೆ. ಸಮರ್ಥ ಗ್ಯಾಂಗ್ ನಲ್ಲಿದ್ದವರು ಅಸಮರ್ಥರಾಗಿ ಅಸಮರ್ಥರ ಗ್ಯಾಂಗ್ಗಳಲ್ಲಿದ್ದವರು ಸಮರ್ಥರ ಗ್ಯಾಂಗಿಗೆ ಕೂಡ ಸೇರಿದ್ದಾರೆ. ಇದೀಗ ಬಿಗ್ ಬಾಸ್‌ನಲ್ಲಿ ಏನಿದು ಜಗಳ ಜಗಳ ಜಗಳ ಹಾಗಿದ್ರೆ ಇಷ್ಟು ಮಟ್ಟಿಗೆ ಜಗಳ ಪ್ರಾರಂಭ ಆಗಿರೋದು ಯಾಕೆ ಏನು ಸಮಸ್ಯೆ?
ಯಾರಿಗೆ ಸಪೋರ್ಟ್ ಮಾಡ್ತಾ ಇದ್ದಾರೆ? ಇದು ಹೊರಗಡೆ ಜನಕ್ಕೆ ಯಾವ ರೀತಿಯಾಗಿ ಕಾಣಿಸಿಕೊಳ್ತಾ ಇದೆ. ಇದೆಲ್ಲವೂ ಕೂಡ ಇದೀಗ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣ ವಾಗಿದೆ. ಬಿಗ್ ಬಾಸ್ ಸೀಸನ್ 10 ಎರಡನೇ ವಾರ ಕ್ಕೆ ಕಾಲಿಟ್ಟಿದೆ. ಅಸಮರ್ಥರಾಗಿ ಮನೆ ಪ್ರವೇಶ ಮಾಡಿದವರೆಲ್ಲ ಇದೀಗ ಎಲ್ಲರೂ ಒಂದಾಗಿದ್ದಾರೆ ಈ ನಡುವೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಿದೆ. ಮುನಿಸು ಮನೆ ಮಾಡಿದೆ ಒಂದೇ ಬಿಗ್ ಬಾಸ್ ಮನೆ ಎರಡು ಹೋಳಾಗಿ ರಣರಂಗ ವಾಗಿದೆ. ಮೊದಲಿನಿಂದಲೂ ಸಣ್ಣ ಸಣ್ಣ ಜಗಳ ಆಡುತ್ತಲೇ ಬರುತ್ತಾ ಇದ್ದ ವಿನಯ್ ಗೌಡ ಮತ್ತು ಸಂಗೀತ ಶೃಂಗೇರಿ ಇಬ್ಬರ ಮುನಿಸು ಮಂಗಳವಾರ ಮಿತಿಮೀರಿ ಹೋಗಿತ್ತು.
ಮಾತಿಗೆ ಮಾತು ಬೆಳೆದಿತ್ತು. ಮಾತನಾಡಲೇ ಬೇಡಿ ಎನ್ನುವಷ್ಟರ ಮಟ್ಟಿಗೆ ಇಬ್ಬರ ಕಿತ್ತಾಟ ನಡೆದಿತ್ತು. ಮಂಗಳವಾರ ಟಾಸ್ಕ್ ವಿಚಾರ ವಾಗಿ ಮನೆಯಲ್ಲಿ ವಿನಯ್ ಗೌಡ ಸಂಗೀತ, ಪ್ರತಾಪ್ ಕಾರ್ತಿಕ್ ಮತ್ತು ನಮ್ರತಾ ನಡುವೆ ಮಾತು ಜೋರಾಗಿತ್ತು. ವಿನಯ ಗೌಡ ಮಾತನಾಡಿ ದರೆ ನಿಮ್ಮ ಮಾತು ನನಗೆ ಇರ್ರಿಟೇಟ್ ಆಗ್ತಿದೆ ನೀವು ಮೊದಲು ಅದನ್ನ ಬದಲಿಸಿಕೊಳ್ಳಿ ಎಂದಿದ್ದಾರೆ ಸಂಗೀತ. ಅದೇ ರೀತಿ ಅದಕ್ಕೆ ಪ್ರತಿಕ್ರಿಯಿಸಿದ ವಿನಯ್ ಗೌಡ, ನಾನು ಇರೋದೇ ಹೀಗೆ ನಾನು ಮಾತಾಡುವ ರೀತಿಯೇ ಹೀಗೆ ಅವರಿಗಾಗಿ ನಾನು ಬದಲಿಸಿ ಕೊಳ್ಳುವುದಿಲ್ಲ ಅಂತ ಹೇಳಿದರೆ ಮತ್ತೊಂದು ಕಡೆ ಸಂಗೀತ ವರ್ತನೆ ಗಳು ಸಹ ಮಾತಿಗೆ ಮಾತು ಬೆಳೆಸಿದ್ದಾರೆ.
ವಿನಯ್ ಬೆಂಬಲಕ್ಕೆ ಬಂದ ಮೃತ ಕಾರ್ತಿಕ್ ಕಿರುಚಾಡಿದ್ದು ಇತ್ತಲ್ವಾ ಅಂತ ಸಂಗೀತಗೆ ಪ್ರಶ್ನಿಸಿದ್ದಾರೆ. ಟಾಸ್ಕ್ನಲ್ಲಿ ಸೋತಿದ್ದಕ್ಕೆ ಸಂಗೀತ ಮತ್ತು ಪ್ರತಾಪ್ಗೆ ಶಿಕ್ಷೆ ನೀಡಲಾಯಿತು. ಸಂಗೀತಗೆ ಸಗಣಿ ನೀರು ಹಾಕಿದರೆ ಪ್ರತಾಪ್ ಬಟ್ಟೆಗಳನ್ನೆಲ್ಲ ಸ್ವಿಮ್ಮಿಂಗ್ ಪೂಲ್ಗೆ ಹಾಕಲಾಯಿತು. ಇದು ಮುಗಿದ ಬಳಿಕ ಟಾಸ್ಕ್ ವಿಚಾರ ವಾಗಿ ಸ್ಪರ್ಧಿಗಳು ಪೋಸ್ಟ್ ಮಾಡಿದ್ರು. ಟಾಸ್ಕ್ ವೇಳೆ ಅನ್ಯಾಯ ಆಗಿದೆ ಅಂತ ಪ್ರತಾಪ್ ಮಾತನಾಡುತ್ತಿದ್ದಂತೆ ಮಧ್ಯ ಪ್ರವೇಶಿಸಿದ ವಿನಯ್ ನನಗೆ ಅನ್ಯಾಯವಾಯಿತು ಅಂತ ಕೊಂಚ ಜೋರಾಗಿ ಕೇಳಿದ್ದಾರೆ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.