ರಕ್ತದಲ್ಲಿ ಪ್ಲೆಟ್ಲೇಟ್ ಹೆಚ್ಚಿಸುವ ಹತ್ತು ಆಹಾರಗಳು ಇಲ್ಲಿವೆ ನೋಡಿ.. ಎಳನೀರು,ಬಿಟ್ರೂಟ್ ಸೇವಿಸಿದರೆ ಏನಾಗುತ್ತೆ ನೋಡಿ

ಮನುಷ್ಯನ ದೇಹದ ರಕ್ತದಲ್ಲಿ ಮೂರು ಬಗೆಯ ಅಂಶಗಳಿವೆ. ಕೆಂಪು ರಕ್ತಕಣ, ಬಿಳಿ, ರಕ್ತಕಣ ಮತ್ತು ಪ್ಲೇಟ್‌ಲೆಟ್ ಗಳು. ಒಂದು ವೇಳೆ ಡೆಂಗ್ಯೂ ಜ್ವರ ಬಂದರೆ ನೇರವಾಗಿ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ನಿಧಾನವಾಗಿ ಕಡಿಮೆಯಾಗಿ ತಲೆನೋವು, ವಾಂತಿ, ಕಣ್ಣು, ನೋವು, ಹೊಟ್ಟೆ ನೋವು, ಉಸಿರಾಟದ ತೊಂದರೆ, ಆಯಾಸ ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಇದ್ದರೆ ಸಾಕು 50,000 ಪಡೆಯುವ ಯೋಜನೆ ಶುರು ಆಗಿದೆ.ಹೇಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ನೋಡಿ..

WhatsApp Group Join Now
Telegram Group Join Now
  • ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳದಂತೆ ಪ್ಲೇಟ್‌ಲೆಟ್‌ಗಳು ಸಮರ್ಪಕ ಸಂಖ್ಯೆಯಲ್ಲಿ ನಮ್ಮ ದೇಹದಲ್ಲಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕಾಯಿಲೆಗಳಿಗೆ ಗುರಿಯಾಗ ಬೇಕಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಅಂದರೆ ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್ಗಳ ಸಂಖ್ಯೆಯನ್ನು ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.ಕೇವಲ ಜ್ವರ ಬಂದಾಗ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಈ ಆಹಾರ ಪದಾರ್ಥಗಳನ್ನು ಸೇವಿಸಿ ಪ್ಲೇಟ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳ ಬಹುದು.

    ಕೆಂಪು ರಕ್ತ ಕಣಗಳಂತೆ ಇವುಗಳು ಕೂಡ ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ ಎಂಬುದನ್ನು ಮರೆಯಬೇಡಿ. ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುವ 10 ರೀತಿಯ ಆಹಾರಗಳು. ಪಪ್ಪಾಯಿ ಹಣ್ಣು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಇದರಲ್ಲಿ ಪಪೈನ್ ಎನ್ನುವ ಅಂಶ ಕೂಡ ಇರುವುದರಿಂದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಒಮ್ಮೆಲೆ ಹೆಚ್ಚುವಂತೆ ಮಾಡುತ್ತದೆ.ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ದೇಹದಲ್ಲಿ ಆರೋಗ್ಯಕರವಾದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ ದೇಹದಲ್ಲಿ ರಕ್ತ ಸಂಚಾರವನ್ನು ಕೂಡ ವೃದ್ಧಿಸುವಂತೆ ಮಾಡುತ್ತದೆ. ದಾಳಿಂಬೆ ಹಣ್ಣು ಕೂಡ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲೂ ಸಹ ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಜೊತೆಗೆ ಒಂದು ವಿಶೇಷವಾದ ಆಂಟಿಆಕ್ಸಿಡೆಂಟ್ ಇದರಲ್ಲಿ ಇರುವುದರಿಂದ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇರುವ ಪ್ಲೇಟ್ಲೆಟ್ ‌ಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

    ಜಿಂಕ್ ಮತ್ತು ವಿಟಮಿನ್ ಸಿ ಅಂಶ ಗಳನ್ನು ಹೆಚ್ಚಾಗಿ ಒಳಗೊಂಡಿರುವ ಕುಂಬಳಕಾಯಿ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರಕ್ತದಲ್ಲಿನ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಗಾಯ ಆದಂತಹ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಲು ಸಹಾಯ ಮಾಡುತ್ತದೆ.ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಖನಿಜಾಂಶಗಳು ಅಲೋವೆರಾದಲ್ಲಿ ಹೆಚ್ಚಾಗಿದ್ದು, ಇದರಲ್ಲಿ ವಿಟಮಿನ್ ಬಿ ಸಿ ಮತ್ತು ವಿಟಮಿನ್ ಈ ಅಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ. ಇವೆಲ್ಲದರ ಕಾರಣದಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ತದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಸಹ ರೋಧಿಸುತ್ತದೆ.

    ಹಾಸನಾಂಬೆ ಗರ್ಭಗುಡಿ ರಹಸ್ಯ ಒಂದು ಹನಿ ಎಣ್ಣೆಯಿಂದ ವರ್ಷವಿಡೀ ಉರಿಯುತ್ತೆ ದೇವಸ್ಥಾನದ ದೀಪ…

    ಡೆಂಗ್ಯೂ ಜ್ವರ ಬಂದಾಗ ಯಾವಾಗಲೂ ಪಪ್ಪಾಯ ಎಲೆಗಳಿಂದ ಜ್ಯೂಸ್ ಮಾಡಿ ಕುಡಿಯಲು ಹೇಳಿರುತ್ತಾರೆ. ಪಪ್ಪಾಯಿ ಮರದ ಎಲೆ ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಒಳಗಿನಿಂದಲೇ ಬಲಪಡಿಸಿ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ವೃದ್ಧಿಸುತ್ತದೆ. ಬೇರುಗಳ ದಿಂದ ಬಹಳ ಬೇಗನೆ ವಾಸಿ ಆಗುವಂತೆ ಪಪ್ಪಾಯಿ ಎಲೆಗಳು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಬೀಟ್‌ರೂಟ್ ಸೇವನೆಯಿಂದ ಕೆಂಪು ರಕ್ತ ಕಣಗಳ ಸಂಖ್ಯೆಯು ನಮ್ಮ ದೇಹದಲ್ಲಿ ಬಹು ಬೇಗ ಹೆಚ್ಚಾಗುತ್ತದೆ. ಇದರ ಜೊತೆಗೆ ಪ್ಲೇಟ್‌ಲೆಟ್‌ಗಳ ಪ್ರಮಾಣ ವನ್ನು ಸಹ ಹೆಚ್ಚಿಸುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">