ಬಿಗ್ ಬಾಸ್ ನಿಂದ ಡ್ರೋಣ್ ಹಾಗೂ ಸಂಗೀತ ಹೊರಕ್ಕೆ.. ಕಾರಣ ಕೇಳಿದರೆ ಅಯ್ಯೋ ಪಾಪ ಅಂತೀರಾ..‌!

ಬಿಗ್ ಬಾಸ್ ನಿಂದ ಡ್ರೋನ್ ಮತ್ತು ಸಂಗೀತ ಹೊರಕ್ಕೆ! ಬಿಗ್ ಬಾಸ್ ಮನೆಯಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ. ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಮತ್ತು ಸಂಗೀತ ಶೃಂಗೇರಿ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಮನೆಯಲ್ಲಿ ನಡೆದಿರುವಂತಹ ಟಾಸ್ಕ್‌ನಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

WhatsApp Group Join Now
Telegram Group Join Now

ಇನ್ನು ಈ ಸುದ್ದಿಗೆ ಪುಷ್ಟಿ ಎನ್ನುವಂತೆ ಜಿಯೋ ಸಿನೆಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಟೆಲಿಕಾಸ್ಟ್ ಮಾಡ್ತಾ ಇದ್ದು, ಅದ್ರಲ್ಲಿ ಡ್ರೋನ್ ಮತ್ತು ಸಂಗೀತ ಕಾಣಿಸಿಕೊಳ್ಳದೇ ಇರುವುದೇ ಅನುಮಾನಕ್ಕೆ ಕಾರಣ ವಾಗಿದೆ. ಕಳೆದ ಎರಡು ದಿನಗಳಿಂದ ಗಂಧರ್ವ ಮತ್ತು ರಾಕ್ಷಸರು ಅಂತ ಎರಡು ಗುಂಪುಗಳನ್ನಾಗಿ ವಿಂಗಡಿಸಿ ಹಲವು ಟಾಸ್ಕ್‌ಗಳನ್ನು ಬಿಗ್ ಬಾಸ್ ನಿಜಕ್ಕೂ ರಾಕ್ಷಸರ ರೀತಿಯಲ್ಲಿ ಹಲವರು ನಡೆಸಿಕೊಳ್ತಾ ಇದ್ರು. ಅವರು ಟಾಸ್ಕ್ ಆಡುವ ರೀತಿಗೆ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಅನಾಹುತ ಆಗಲಿದೆ ಅನ್ನೋ ಅಂದಾಜಿತ್ತು.

ಅದು ಈಗ ನಿಜವಾದಂತೆ ಕಾಣುತ್ತಿದೆ. ಟಾಸ್ಕ್ ಒಂದರಲ್ಲಿ ಡ್ರೋನ್ ಪ್ರತಾಪ್‌ಗೆ ಮತ್ತು ಸಂಗೀತಾಳಿಗೆ ಏಟು ಬಿದ್ದಿದೆ ಅಂತ ಹೇಳಲಾಗ್ತಾ ಇದೆ. ಬಲವಾದ ಏಟು ಬಿದ್ದಿರುವ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇನ್ನು ಈ ವಿಚಾರದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಕರಾಗಲಿ, ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿಯಾಗಿ ಸೇಲ್ ಆಗ್ತಾ ಇದೆ. ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರಿ ಕದನವೇ ನಡೀತಾ ಇದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡ್ತಿದ್ದಾರೆ.

ಅದರಲ್ಲೂ ಸಂಗೀತ ಮತ್ತು ವಿನಯ್ ಮಧ್ಯೆ ಕಾರ್ತಿಕ್ ಮತ್ತು ವಿನಯ್ ಮಧ್ಯೆ ಸಂಗೀತ ಮತ್ತು ನಮ್ರತಾ ಮಧ್ಯೆ ಹೀಗೆ ವೈಯಕ್ತಿಕವಾಗಿ ಆಟಗಳನ್ನಾಡಿದ್ದಾರೆ. ಒಬ್ಬರಿಗೊಬ್ಬರನ್ನ ಕೆದಕುತ್ತಿದ್ದಾರೆ. ಅದು ಎಲ್ಲೋ ಒಂದು ಕಡೆ ಅನಾಹುತ ಮಾಡಿದೆ ಅನ್ನೋ ಅಂದಾಜು ಈಗ ಕಾಣಿಸುತ್ತಿದೆ. ಬಹುಶಃ ಅದೇ ಆಗಿರಬಹುದು ಸದ್ಯಕ್ಕೆ ಡ್ರೋನ್ ಮತ್ತು ಸಂಗೀತನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಕೇಳಿ ಬರ್ತಾ ಇದೆ. ಈ ಹಿಂದೆ ತನಿಶಾರನ್ನ ಹೀಗೆ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆ ನಂತರ ಬಿಗ್ ಬಾಸ್ ಮನೆಗೆ ಕರೆತರಲಾಯಿತು. ಈ ಇಬ್ಬರನ್ನು ಹಾಗೆ ಮಾಡುವ ಸಾಧ್ಯತೆ ಇದೆ. ಡ್ರೋನ್ ಮತ್ತು ಸಂಗೀತಾಗೆ ನಿಜವಾಗಿಯೂ ಗಾಯಗಳಾಗಿದ್ದರೆ ಬೇಗ ಗುಣವಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]