ಕೊರೋನಾಗೆ ಬೆಂಗಳೂರಿನಲ್ಲಿ 3 ಬಲಿ ರಾಜ್ಯದಲ್ಲಿ ಹೆಚ್ಚಾಗ್ತಿದೆಯಾ ಕೊರೊನಾ..ವೈದ್ಯರು ಹೇಳಿದ್ದೇನು ನೋಡಿ..

ಒಂದು ಕರೋನಾ ವೈರಸ್ ಬರ್ತಾ ಇದ್ದ ಹಾಗೆ ಇಡೀ ಜಗತ್ತೇ ಬೆಚ್ಚಿ ಬೀಳುತ್ತೆ. ಈ ಕೊರೋನ ವೈರಸ್ ನಿಂದಾಗಿ ಅದೆಷ್ಟೋ ಮಂದಿ ಪ್ರಾಣ ಕಳಕೊಂಡರೆ ಇನ್ನೊಂದಷ್ಟು ಮಂದಿಯ ಬದುಕು ಬೀದಿಗೆ ಬಂದು ಈ ಕೊರೋನ ವೈರಸ್ ನಿಂದಾಗಿ ಲಾಕ್ ಆಯಿತಲ್ಲ. ಅದರಿಂದಾಗಿ ಅದೆಷ್ಟೋ ಜನರ ಬದುಕು ಸಂಪೂರ್ಣವಾಗಿ ಬುಡಮೇಲಾಗಿ ಬಿದ್ದಿತು. ಹೀಗಾಗಿ ಈಗಲೂ ಕೂಡ ಈ ಕೊರೋನ ವೈರಸ್ ಎನ್ನುವ ಪದ ಕೇಳಿದ ಹಾಗೆ ಸಹಜವಾಗಿ ಜನ ಆತಂಕಕ್ಕೆ ಈಡಾಗಿದ್ದಾರೆ. ಮತ್ತೊಮ್ಮೆ ಲಾಕ್ ಆಗಿ ಬಿಟ್ರೆ ನಮ್ಮ ಪರಿಸ್ಥಿತಿ ಏನಪ್ಪಾ ಅಂತ ಜನ ಭಯಪಡುತ್ತಿದ್ದಾರೆ. ಒಂದು ಕಡೆ ಕೊರೊನಾ ವೈರಸ್‌ನಿಂದಾಗಿ ಪ್ರಾಣ ಕೊಡ್ತೀವಿ ಅನಾರೋಗ್ಯ ಸಮಸ್ಯೆ ಆ ಭಯ ಇದ್ರೆ ಅದಕ್ಕಿಂತ ಹೆಚ್ಚಿನ ಭಯ ಇರೋದು ಈ ಲಾಕ್ ಎನ್ನುವ ಭೂತಕ್ಕೆ ಅಪ್ಪಿತಪ್ಪಿ ಹಾಗೇನಾದರೂ ಆಗಿಬಿಟ್ಟರೆ ನಮ್ಮ ಕತೆ ಏನು ಅಂತ ಯಾಕಂದ್ರೆ ಈ ಹಿಂದೆ ಅಷ್ಟರ ಮಟ್ಟಿಗೆ ಜನ ಪೆಟ್ಟು ತಿಂದು ಬಿಟ್ಟಿದ್ದಾರೆ.

WhatsApp Group Join Now
Telegram Group Join Now

ಅದು ಕೂಡ ಹೊಸದಾಗಿ ಹೋಟೆಲ್ ಅನ್ನು ಶುರು ಮಾಡಿ ಅಂತವರಿಗೆ ಅಥವಾ ಇನ್ಯಾವುದೋ ಹೊಸ ಬಿಸಿನೆಸ್ ಅನ್ನು ಶುರು ಮಾಡು ಅಂತ ವರಿಗೆ ಇನ್ನೊಂದು ಮಾಡುತ್ತಾ ಇಲ್ಲ ಅಂತವರಿಗೆ ಸಹಜವಾಗಿ ಆತಂಕ ಆಗ್ತಾ ಇದೆ. ಈಗಾಗಲೇ ಮಾಧ್ಯಮಗಳಲ್ಲಿ ಗಮನಿಸಿರುತ್ತೀರಿ. ಬೆಳಗ್ಗೆಯಿಂದ ರಾತ್ರಿವರೆಗೂ ಕೂಡ ಮತ್ತೊಮ್ಮೆ ಕೊರೋನ ಜಪ ಶುರುವಾಗಿದೆ. ಮತ್ತಷ್ಟು ಕ್ರೇಜ್ ಜಾಸ್ತಿ ಆಯಿತು ಅಷ್ಟೇ ಜಾಸ್ತಿ ಆಯಿತು ಅಷ್ಟು ಜನ ಪ್ರಾಣ ಕಳಕೊಂಡರು ಹಾಗೆ ಹೀಗೆ ಅಂತ ಮಾಧ್ಯಮಗಳನ್ನ ನೋಡಿ ನೀವು ಸಹಜವಾಗಿ ಆತಂಕಕ್ಕೆ ಈಡಾಗುತ್ತೀರಿ ಹಾಗಾದ್ರೆ ಕೊರೋನ ಸದ್ಯದ ಪರಿಸ್ಥಿತಿ ಹೇಗಿದೆ? ವಾಸ್ತವಾಂಶ ಏನು? ಅದೆಲ್ಲ ಡೀಟೇಲ್ಸ್ನ್ನ ನಿಮ್ಮ ಮುಂದೆ ಹೆಳ್ತಾ ಹೋಗ್ತೀನಿ.

ಜೊತೆಗೆ ಸಂಬಂಧ ಪಟ್ಟ ಹಾಗೆ ತಜ್ಞ ವೈದ್ಯರನ್ನು ಕೂಡ ಮಾತನಾಡಿದ್ದೀನಿ. ಅವರ ಮಾತಿನ ಆಡಿಯೋ ಕ್ಲಿಪ್ ನ ಕೊನೆಯ ದಾಗಿ ಹಾಕಿರ್ತೀನಿ. ಅದನ್ನು ಒಮ್ಮೆ ಕೇಳಿಸಿಕೊಳ್ಳಿ. ಅವರ ಮಾತನ್ನು ಕೇಳಿಸಿಕೊಂಡ ನಂತರ ಈ ಕೊರೊನಾಗೆ ಆತಂಕ ಪಡಬೇಕಾ ಅಥವಾ ಆತಂಕ ಪಡಬಾರದು ಅನ್ನೋದನ್ನ ನೀವೇ ನಿರ್ಧಾರ ಮಾಡಿ ಸದ್ಯ ಒಂದಷ್ಟು ಅಂಕಿ ಅಂಶವನ್ನು ಗಮನಿಸುತ್ತಾ ಹೋಗೋಣ ಅಂದ್ರೆ ವಾಸ್ತವ ಸ್ಥಿತಿ ಏನಿದೆ ಅದನ್ನು ಮೊದಲು ಗಮನಿಸಬೇಕಾಗುತ್ತದೆ. ಅದಕ್ಕೂ ಮುನ್ನ ಈ ವೇರಿಯಂಟ್ ಬಗ್ಗೆ ಒಂದು ವಿಚಾರವನ್ನು ಗಮನಿಸೋಣ, ಕೊರೊನ ಹೊಸ ಉಪ ತಳಿ ಜೆಎನ್ ಅಂತ ಕಾಣಿಸಿಕೊಂಡಿದೆ. ಈ ಕಾರ್ನರ್ ಹೇಗೆ ಅಂದ್ರೆ ಈ ಸೂರ್ಯ ಚಂದ್ರ ಎಲ್ಲಿಯ ವರೆಗೆ ಇರುತ್ತಾರೋ ಕೋರೋಣ ಕೂಡ ಅಲ್ಲಿವರೆಗೆ ಇದ್ದೇ ಇರುತ್ತೆ. ಈ ವೈರಸ್ ಅಂತ್ಯ ಆಗೋದಕ್ಕೆ ಸಾಧ್ಯವೇ ಇಲ್ಲ.

ಒಂದಲ್ಲ ಒಂದು ಉಪ ತಳಿ ಕಾಣಿಸಿಕೊಳ್ತಾನೆ ಹೋಗ್ತಾ ಇರುತ್ತೆ. ಅದು ಮುಗಿಯದಂತಹ ಕಥೆ. ಸ್ವಲ್ಪ ದಿನ ಸೈಲೆಂಟಾಗಿರುತ್ತೆ, ಮತ್ತೊಮ್ಮೆ ಇನ್ನೊಂದು ರೀತಿಯಾದಂತ ಉಪ ತಳಿ ಕಾಣಿಸಿಕೊಳ್ಳುತ್ತೆ. ಆದರೆ ಒಂದು ವಿಚಾರ ಏನಂದ್ರೆ ಈ ಕೊರೋನ ಮೊದಲ ಅಲೆ ಎರಡನೇ ಅಲೆ ಮೂರನೇ ಅಲೆ ಇದೆಲ್ಲವನ್ನು ಗಮನಿಸಿದ್ದೇವಲ್ಲ ಹೌದು ಆಗ ಅತ್ಯಂತ ಸ್ಟ್ರಾಂಗ್ ಆಗಿತ್ತು. ತುಂಬಾನೇ ಸಮಸ್ಯೆ ಆಯಿತು. ಆದರೆ ಈಗ ಬರ್ತಾ ಬರ್ತಾ ಬರ್ತಾ ಆ ಕೊರೊನದ ಅ ಪವರ್ ಇರುತ್ತಲ್ಲ. ಅದು ನಿಧಾನಕ್ಕೆ ಕಡಿಮೆ ಆಗ್ತಾ ಹೋಗುತ್ತೆ. ಕೊರೊನ ಉಪ ತಳಿ ಮತ್ತೆ ಮತ್ತೆ ಕಾಣಿಸಿಕೊಂಡು ಕೂಡ ಮನುಷ್ಯನ ದೇಹಕ್ಕೆ ಹೆಚ್ಚು ಅದು ಬಾಧಿಸುವುದಿಲ್ಲ ಅಥವಾ ಪ್ರಾಣ ತೆಗೆಯುವ ಹಂತದವರೆಗೂ ಕೂಡ ತೆಗೆದುಕೊಂಡು ಹೋಗುವುದಿಲ್ಲ.

ಈ ತಳಿ ಬಗ್ಗೆ ಸ್ವಲ್ಪ ಮಟ್ಟಿನ ಆತಂಕ ಯಾಕಪ್ಪ ಅಂದ್ರೆ ಇದು ರೋಗ ನಿರೋಧಕ ಶಕ್ತಿಗೆ ಸೆಡ್ಡು ಹೊಡೆಯುವಂತಹ ಸಾಮರ್ಥ್ಯವನ್ನ ಹೊಂದಿದೆ. ಅಂದರೆ ಲಸಿಕೆ ಪಡೆದಿದ್ದರೂ ಕೂಡ ನಿಮ್ಮನ್ನ ಈ ವೈರಸ್ ಬಾಧಿಸುತ್ತೆ. ಈಗಾಗಲೇ ಕೊರೊನಾ ಬಂದು ಹೋಗಿದ್ದು ಕೂಡ ಮತ್ತೊಮ್ಮೆ ನಿಮ್ಮಲ್ಲಿ ಕೊರೋನ ಕಾಣಿಸಿಕೊಳ್ಳಬಹುದು. ಹಾಗಂದ ಮಾತ್ರಕ್ಕೆ ತುಂಬಾ ಡೇಂಜರ್ ಇಲ್ಲ. ಮೊದಲ ಅಲೆ ಎರಡನೇ ಅಲೆ ಮೂರನೇ ಅಲೆಯ ಸಂದರ್ಭದಲ್ಲಿ ನಿಮ್ಮ ಪ್ರಾಣ ಹೋಗುವ ಹಂತದ ವರೆಗೂ ಕೂಡ ಕೊರೊನ ನಿಮ್ಮನ್ನ ಕಾಡ್ತಾ ಇತ್ತು. ಆದರೆ ಇದು ಅಲ್ಲಿಯವರೆಗೆ ನಿಮ್ಮನ್ನ ಕಾಡಲ್ಲ. ಅಬ್ಬಬ್ಬಾ ಅಂದ್ರೆ ಏನು ಮಾಡಬಹುದು ಅಂದ್ರೆ ನಿಮ್ಮ ಸ್ವಲ್ಪ ಮಟ್ಟಿಗೆ ಅಂದ್ರೆ ನಿಮ್ಮ ಆರೋಗ್ಯ ದಲ್ಲಿ ಡಿಸ್ಟರ್ಬ್ ಮಾಡಬಹುದು.

ನಿಮಗೆ 2 3 ದಿನಗಳ ಕಾಲ ಜ್ವರ, ಶೀತ ಅಥವಾ ಮೈ ಕೈ ನೋವು ಇಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದನ್ನು ಮೀರಿ ಹೆಚ್ಚಿನ ಸಮಸ್ಯೆ ನಿಮ್ಮಲ್ಲಿ ಉಂಟು ಮಾಡುವುದಿಲ್ಲ. ಹೀಗಾಗಿ ನಾನು ಆರಂಭ ದಲ್ಲೇ ಹೇಳ್ತಾ ಇದ್ದೀನಿ. ಈ ಉಪ ತಳಿಗೆ ಸಂಬಂಧಪಟ್ಟ ಹಾಗೆ ನೀವು ಯಾರು ಕೂಡ ಆತಂಕಕ್ಕೀಡಾಗುವಂತೆ ಯಾವ ಅವಶ್ಯಕತೆಯೂ ಕೂಡ ಇಲ್ಲ. ತಜ್ಞ ವೈದ್ಯರು ಮತ್ತೊಮ್ಮೆ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ನಿರ್ಲಕ್ಷ ವನ್ನು ತೋರೋದಕ್ಕೆ ಹೋಗಬೇಡಿ. ಯಾರೂ ನಿರ್ಲಕ್ಷ್ಯವನ್ನು ತೋರಬಾರದು ಅಂದ್ರೆ ಚಿಕ್ಕ ಮಕ್ಕಳು, ಬಾಣಂತಿಯ ರು, ಗರ್ಭಿಣಿಯರು, ವಯೋವೃದ್ಧ ರು ಈಗಾಗಲೇ ಹೃದಯ ಸಂಬಂಧಿ ಸಮಸ್ಯೆ ಇದ್ದವರು ಉಸಿರಾಟದ ಸಮಸ್ಯೆ ಇದ್ದವರು. ನೀವು ಯಾರು ಕೂಡ ನಿರ್ಲಕ್ಷ ವನ್ನು ತೋರೋದಕ್ಕೆ ಹೋಗಬೇಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">