ನಾರಾಯಣಗೌಡ ಲೈಫ್ ಸ್ಟೋರಿ 9ನೇ ಕ್ಲಾಸ್ ಅರೆಸ್ಟ್..ಮುಂಬೈಗೆ ಓಟ..ಕರವೇ ನಾರಾಯಣಗೌಡರ ಲೈಫ್ ಸ್ಟೋರಿ

ಅಧ್ಯಕ್ಷ ಟಿ ಎ. ನಾರಾಯಣ ಗೌಡ ಬೆಳೆದು ಬಂದಿದ್ದು ಹೇಗೆ? ಇವರ ಜೀವನದ ಕಥೆ ಗೊತ್ತಾ? ಒಂಬತ್ತನೇ ಕ್ಲಾಸ್‌ನಲ್ಲಿದ್ದಾಗ 2 ದಿನ ಜೈಲಿಗೆ ಹೋಗಿ ಬಂದಿದ್ದು ಯಾಕೆ? ನಾರಾಯಣ ಗೌಡ ಮನೆ ಬಿಟ್ಟು ಮುಂಬೈಗೆ ಹೋಗಿದ್ಯಾಕೆ ಆರೋಗ್ಯ ಸಚಿವರವರೆಗೂ ಇರುವ ಲಿಂಕ್ ಏನು? ಎಲ್ಲ ವನ್ನು ಈ ಲೇಖನದಲ್ಲಿ ಹೇಳ್ತೀವಿ.

WhatsApp Group Join Now
Telegram Group Join Now

ಜನನ ಮತ್ತು ಬಾಲ್ಯ ಹೇಗಿತ್ತು ನಾರಾಯಣ ಗೆ ಗೌಡ ಹೆಸರು ಕೊಟ್ಟ ಶಿಕ್ಷಕ ನಾರಾಯಣ ಗೌಡ, 1956ರ ಜೂನ್ ಹತ್ತರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿ ಅನ್ನು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಅನಂತಯ್ಯ ತಾಯಿ ಗೌರಮ್ಮ ಇವರಿಗೆ ಬಾಲ್ಯದಲ್ಲಿ ತಂದೆ ತಾಯಿ ಇಟ್ಟ ಹೆಸರು ಜಸ್ಟ್ ನಾರಾಯಣ. ಅಂತಷ್ಟೇ ತಂದೆ ತಾಯಿಗೆ ಎಂಟು ಗಂಡು, ಒಂದು ಹೆಣ್ಣು ಸೇರಿ ಒಟ್ಟು ಒಂಬತ್ತು ಜನ ಮಕ್ಕಳು ಮುಂದಿನ ಶಾಲೆಯಲ್ಲಿ ಅವರ ನಾಯಕತ್ವ ಗುಣವನ್ನು ಕಂಡ ಚಿಕ್ಕೆಗೌಡನನ್ನು ಶಿಕ್ಷಕರು ನಾರಾಯಣ ಜೊತೆ ಗೌಡ ಸೇರಿಸಿದರು. ಮುಂದೊಂದು ದಿನ ನೀನು ರಾಜ್ಯಾದ್ಯಂತ ಮನೆಮಾತಾಗಿ ನಿನ್ನಲ್ಲಿ ನಾಯಕತ್ವದ ಗುಣ ಇದೆ. ಗೌಡ ಅನ್ನೋದು ಜಸ್ಟ್ ಜಾತಿ ಹೆಸರ ಲ್ಲ. ಅದು ಊರಿನ ನಾಯಕತ್ವವಹಿಸಿ ಗುಣದ ಪ್ರತಿಬಿಂಬ ಅಂದಿದ್ರಂತೆ. ಅಲ್ಲಿಂದ ನಾರಾಯಣ, ನಾರಾಯಣ ಗೌಡ ಆಗಿ ಬದಲಾದರು.

ಏಳನೇ ಕ್ಲಾಸ್‌ನಲ್ಲೇ ಹೋರಾಟ ಒಂಬತ್ತನೇ ಕ್ಲಾಸ್‌ನಲ್ಲೇ ಜೈಲು ಪಾಲು ನಾರಾಯಣ ಗೌಡ ಕರೆ ಹಳ್ಳಿ ಮತ್ತು ಅರಸಿನ ಕೆರೆಯಲ್ಲಿ ಆರಂಭಿಕ ಶಿಕ್ಷಣ ಪಡೆದುಕೊಂಡರು. ಏಳನೇ ಕ್ಲಾಸಿನಲ್ಲಿ ಓದುತ್ತಿದ್ದಾಗಲೇ ಪಬ್ಲಿಕ್ ಗೆ ಎಂಟ್ರಿಕೊಟ್ಟರು. ರೈತ ಸಂಘದ ನಾಯಕರಾದ ನಂಜುಂಡ ಸ್ವಾಮಿ ಮತ್ತು ಸುಂದರೇಶ್ ರಿಂದ ಪ್ರಭಾವಿತರಾದರು. ಆದರೆ ಇವರಲ್ಲಿ ಹೋರಾಟದ ಮನೋಭಾವನೆ ಬೆಳೆಯಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಆರ್ ಎಸ್ ನಾಯ್ಕ ದುರ್ಗಪ್ಪ ಶೆಟ್ಟಿ 1982 ರಿಂದ 1985 ರ ನಡುವೆ ಆರ್‌ಸಿ ಎಸ್ ಜೊತೆ ಕೆಲಸ ಮಾಡ್ತಾ ಮಾಡ್ತಾ ನಾರಾಯಣಗೌಡರಲ್ಲಿ ಹೋರಾಟ ಚಳವಳಿಯ ವ್ಯಕ್ತಿತ್ವ ರೂಪುಗೊಳ್ಳ ತು ಅದರಲ್ಲೂ ಆ ಒಂದು ಘಟನೆ ನಾರಾಯಣಗೌಡರನ್ನ ಕಂಪ್ಲೀಟ್ ಆಗಿ ಬದಲಿಸಿತು.

ಆದರೆ ಇವರ ಒಂಬತ್ತನೇ ಕ್ಲಾಸ್ ಮುಗಿದಿತ್ತು. ಆಗ ಒಂದಿನ ಇವರ ಊರಿನ ಗಣಪತಿ ಉತ್ಸವದಲ್ಲಿ ತಮಿಳು ಆರ್ಕೆಸ್ಟ್ರ ಆಯೋಜಿಸ ಲಾಗಿತ್ತು. ಇದನ್ನು ವಿರೋಧಿಸಿದ ನಾರಾಯಣ ಗೌಡ ಮತ್ತವರ ತಂಡ ಗಲಾಟೆ ಮಾಡಿತ್ತು. ಆಗ ಮಧ್ಯ ಬಂದ ಪೊಲೀಸರ ಜೊತೆಯೂ ವಾಗ್ವಾದಕ್ಕೆ ಇಳಿದರು ವಾದ ಜೋರಾಗಿ ಸಿಟ್ಟಿಗೆದ್ದ ಪೊಲೀಸರು ನಾರಾಯಣಗೌಡರನ್ನ ಒಳಗೆ ಹಾಕಿದ್ರು. 2 ದಿನ ಜೈಲಿನಲ್ಲೇ ಇದ್ದು ಸಿಕ್ಕಾ ಪಟ್ಟೆ ಒದೆ ತಿಂದರು. ನಂತರದಲ್ಲಿ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಕಡೆಯಿಂದ ಇವರನ್ನ ರಿಲೀಸ್ ಮಾಡಿಸ ಲಾಯಿತು. ಮನೆ ಬಿಟ್ಟು ಹೋಗು ಎಂದ ತಂದೆ ರಾತ್ರೋ ರಾತ್ರಿ ಹೊರಟ ನಾರಾಯಣ ಗೌಡ ಪೊಲೀಸ್ ಲಾಕಪ್‌ನಲ್ಲಿ 2 ದಿನ ಇದ್ದು, ಬಂದ್ಮೇಲೆ ನಾರಾಯಣ ಗೌಡ ಮನೆಯಲ್ಲಿ ಸಮಸ್ಯೆ ಶುರುವಾಯಿತು.

ಸಿಟ್ಟಿಗೆದ್ದ ತಂದೆ ಅನಂತಯ್ಯ ಯಾವಾಗಲೂ ಊರಿನ ಉಸಾಬರಿಗೆ ಯಾಕೆ ಹೋಗುತ್ತಿಯ ಎಷ್ಟು ಅಷ್ಟು ನೋಡೋಕೆನು ನೀನು ನನ್ನ ಮಗನಾಗಿ ಹುಟ್ಟಬಾರದಿತ್ತು. ಹೀಗೆ ಮಾಡೋದಾದ್ರೆ ನನ್ನ ಮನೆಯಲ್ಲಿ ಇರಲೇಬೇಡ ನೀನು ಅಂತ ನಾರಾಯಣ ಗೌಡ ತಂದೆ ಬೈದರು. ಇದರಿಂದ ನೊಂದ ನಾರಾಯಣ ಗೌಡ ಮನೆ ಬಿಡೋ ನಿರ್ಧಾರಕ್ಕೆ ಬಂದರು ಇವರ ಊರಿಂದ ಮುಂಬೈಗೆ ಹೊರಟ ತೆಂಗಿನಕಾಯಿಯ ಲಾರಿ ಹತ್ತಿದರು ಮುಂಬೈಗೆ ಕೆಲಸ ಹುಡುಕಿಕೊಂಡು ಹೋದರು. ಅಲ್ಲಿ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ ಗೌಡರು ಸುಮಾರು ಮೂರು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ರು. ಈ ವೇಳೆ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಭಾಷೆಯ ಆಧಾರದ ಗಲಾಟೆಗಳು ಇವರಲ್ಲಿ ಗಾಢ ಪ್ರಭಾವ ಬೀರಿದ್ದವು.

ಅಣ್ಣನ ಮನವಿ ಮೇರೆಗೆ ಬೆಂಗಳೂರಿಗೆ ಇವರು ಒಬ್ಬರು ಅಣ್ಣ ಬೆಂಗಳೂರಿನಲ್ಲಿದ್ದರು. ಅವರ ಮಾತಿನಂತೆ ನಾರಾಯಣ ಗೌಡ ಬೆಂಗಳೂರಿಗೆ ಬಂದ್ರು, ಸೌತ್ ಇಂಡಿಯನ್ ಕಂಪ್ಯೂಟರ್ಸ್ ಲಿಮಿಟೆಡ್ ಅನ್ನು ಹಾರ್ಡ್‌ವೇರ್ ಅಸೆಂ ಬಲ್ ಸಂಸ್ಥೆಯಲ್ಲಿ ಕೆಲಸ ಶುರು ಮಾಡಿದ್ರು. ಅಲ್ಲೂ ಸ್ವಲ್ಪ ಟೈಮ್ ಕೆಲಸ ಮಾಡಿದ ಬಳಿಕ ವೈಶ್ಯ ಬ್ಯಾಂಕ್‌ನಲ್ಲಿ ಕೆಲಸ ಪಡೆದರು. ಅದು ತಮಿಳುನಾಡು ಮೂಲದ ಬ್ಯಾಂಕ್ ಆಗಿದ್ದರಿಂದ ತಮಿಳರೇ ತುಂಬಿ ತುಳುಕುತ್ತಿದ್ದರು. ಹೀಗಾಗಿ ಕನ್ನಡಿಗರಾದ ನಾರಾಯಣ ಗೌಡಗೆ ತುಂಬಾ ಹಿಂಸೆ ನೀಡಲಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">