ದತ್ತು ತಗೋಳೊಕೆ ಏನೆಲ್ಲಾ ರೂಲ್ಸ್ ಇದೆ ಗೊತ್ತಾ ! ಸೋನು ಜೈಲು ಪಾಲಾಗಿದ್ದು ಇದೇ ಕಾರಣಕ್ಕೆ...ಇವರು ಹೇಳ್ತಾರೆ ಕೇಳಿ » Karnataka's Best News Portal

ದತ್ತು ತಗೋಳೊಕೆ ಏನೆಲ್ಲಾ ರೂಲ್ಸ್ ಇದೆ ಗೊತ್ತಾ ! ಸೋನು ಜೈಲು ಪಾಲಾಗಿದ್ದು ಇದೇ ಕಾರಣಕ್ಕೆ…ಇವರು ಹೇಳ್ತಾರೆ ಕೇಳಿ

ಸೋನು ಗೌಡ ಜೈಲು ಪಾಲಾಗಲು ಇಲ್ಲಿದೆ ಕಾರಣ

WhatsApp Group Join Now
Telegram Group Join Now

ಸೋಶಿಯಲ್ ಮಿಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ, ಬಿಗ್ ಬಾಸ್ ಅಂಗಳಕ್ಕೂ ತಲುಪಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಮತ್ತಷ್ಟು ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರು ಅರೆಸ್ಟ್ ಆಗಿದ್ದಾರೆ.ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಕಾರಣ ಕೇಳಿದ್ರೆ ಮಾತ್ರ ಒಂದು ಕ್ಷಣ ಶಾಕ್ ಆಗೋದಂತು ನಿಜ. ಸೋನು ಗೌಡ ‘ಸೇವಂತಿ’ ಎನ್ನುವ 8 ವರ್ಷದ ಬಡ ಬಾಲಕಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಅವರೇ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಇದೆ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.ಸೋನು ಶ್ರೀನಿವಾಸ್ ಗೌಡ ಉತ್ತರ ಕರ್ನಾಟಕ ಭಾಗದ 8 ವರ್ಷದ ಮಗು ಸೇವಂತಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ, ಅವರು ಕಾನೂನು ಬಾಹಿರವಾಗಿ ಅವರು ಮಗುವನ್ನು ದತ್ತು ಪಡೆದಿದ್ದಾರೆ ಎಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಜೆ.ಜೆ.ಆ್ಯಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ. ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ. ಈ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಬಂಧಿಸಿದ್ದಾರೆ. ಮಗು ದತ್ತು ಪಡೆದಿರುವುದಾಗಿ, ಮಗುವಿನ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಂಟು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

ದತ್ತು ಪಡೆದಿರುವ ಹೆಣ್ಣು ಮಗುವನ್ನು ಪ್ರಚಾರಕ್ಕೆ ಬಳಸಿಕೊಂಡಿರುವ ಆರೋಪ ಸೋನು ಮೇಲಿದೆ. ಸಾರ್ವಜನಿಕವಾಗಿ ಮಗುವಿನ ಮಾಹಿತಿ ಹಂಚಿಕೊಳ್ಳುವಂತಿಲ್ಲ. ಇನ್ನು ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸಹ ಸರಿಯಾಗಿ ಮಾಡಿಲ್ಲ ಎಂಬ ಆರೋಪ ಸಹ ಇದೆ‌. ಸದ್ಯ ಪೊಲೀಸರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೂರು ತಿಂಗಳಿಂದ ಪಾಸಿಟಿವ್ ಆಗಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುಶಃ ಇವಳನ್ನು ದತ್ತು ತೆಗೆದುಕೊಂಡಿದ್ದಕ್ಕೋ ಏನೋ’ ಎಂದು ಸೋನು ಶ್ರೀನಿವಾಸ್ ಗೌಡ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದರು. ‘ನಾನು ಅಪಾರ್ಟ್​ಮೆಂಟ್ ಕೆಳಗೆ ನಾಯಿಗೆ ಬಿಸ್ಕಿಟ್ ಹಾಕುವಾಗ ಇವಳು ಸಿಕ್ಕಿದ್ದಳು. ಅವಳಿಗೆ ಚಾಕೋಲೇಟ್ ಕೊಡಿಸಿದೆ. ನಂತರ ಶಾಪಿಂಗ್ ಹೋದೆವು. ಮನೆಗೆ ಕರೆದುಕೊಂಡು ಹೋಗಿ ಎಂದು ಕೇಳಿದಳು. ನಾನು ದತ್ತು ತೆಗೆದುಕೊಳ್ಳುವುದಕ್ಕೂ ಮೊದಲೇ ಅವಳಿಗೆ ಚೈನ್ ಕೊಡಿಸಿದ್ದೆ’ ಎಂದು ಹೇಳಿಕೊಂಡಿದ್ದರು ಸೋನು ಶ್ರೀನಿವಾಸ್ ಗೌಡ.

ನಾನು ಅವಳ ಅಮ್ಮನ ಬಳಿ ದತ್ತು ಕೊಡುವಂತೆ ಕೇಳಿದೆ. ಇದನ್ನು ಕೇಳಿ ಅವಳ ತಾಯಿ ರಾಯಚೂರಿಗೆ ಹೋದರು. ಮಗುವಿಗೆ ನಾನಿಲ್ಲದೆ ಜ್ವರ ಬಂದಿತ್ತು. ಫೋನ್ ಮೂಲಕ ಸೇವಂತಿ ಬಳಿ ಮಾತನಾಡಿದೆ. ನಂತರ ಅವಳನ್ನು ಕರೆದುಕೊಂಡು ಬಂದೆ. ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳಲು 3 ತಿಂಗಳು ಬೇಕು. ಅವಳ ಅಪ್ಪ ಅಮ್ಮನಿಗೆ ಒಪ್ಪಿಗೆ ಇದೆ. ನನಗೂ ಒಪ್ಪಿಗೆ ಇದೆ. ಕಾನೂನು ಕ್ರಮ ನಡೆಯುತ್ತಿದೆ’ ಎಂದು ಸೋನು ಹೇಳಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಆರಂಭಕ್ಕೂ ಮೊದಲು ‘ಬಿಗ್ ಬಾಸ್ ಒಟಿಟಿ’ ನಡೆದಿತ್ತು. ನನ್ನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗೃಹಲಕ್ಷ್ಮಿ ಹೊಸ ಅಧ್ಯಾಯ ಎದೆ ಗಟ್ಟಿ ಮಾಡಿಕೊಳ್ಳಿ,ಇಷ್ಟು ದಿನ 2000 ಹಣ ತಿಂಗಳು ತಿಂಗಳು ಪಡೆದವರಿಗೆ ಕಾದಿದೆ ಕಹಿ ಸುದ್ದಿ

[irp]


crossorigin="anonymous">