ಕೇರಳ ಕಣ್ಮರೆ ದಕ್ಷಿಣದಲ್ಲೂ ಹಿಮಾಲಯ ಭಾರತಕ್ಕೆ ಬರ್ತಿದೆ ಆಫ್ರಿಕಾದ ಈ ಭೂ ಖಂಡ..
ಗೆಳೆಯರೇ ನಿಮಗೆ ಕಾಂಟಿನೆಂಟಲ್ ಡ್ರಿಫ್ಟ್ ಬಗ್ಗೆ ಗೊತ್ತಿದೆ ಅಲ್ವಾ ಈ ಭೂಮಿ ರಚನೆಯಾದ ಆರಂಭದ ದಿನಗಳಲ್ಲಿ ನೆಲ ಎಲ್ಲಾ ಒಂದು ಕಡೆ ನೀರೆಲ್ಲ ಒಂದು ಕಡೆ ಇತ್ತು ಆನಂತರ ಭೂಖಂಡ ಸಣ್ಣ ಸಣ್ಣ ತುಂಡುಗಳಾಗಿ ಬೇರ್ಪಡುತ್ತಾ ಹೋಯ್ತು ಇವತ್ತು.
ನಾವು ನೋಡ್ತಾ ಇರೋ ಬೇರೆ ಬೇರೆ ಖಂಡಗಳು ಹುಟ್ಟಿಕೊಂಡವು ಅದರ ನಡುವೆ ನೀರು ನಿಲ್ತಾ ಹೋಯ್ತು ಹಾಗೆ ಆಫ್ರಿಕಾದಿಂದ ಬೇರ್ಪಟ್ಟ ಭೂಖಂಡ ಒಂದು ಸಮುದ್ರದಲ್ಲಿ ತೇಲ್ತಾ ಬಂದು ಏಷ್ಯಾ ಖಂಡವನ್ನು ಸೇರಿಕೊಳ್ಳುತ್ತೆ.
ಅಂದಹಾಗೆ ಡೆಕ್ಕಿ ಹೊಡೆದ ರಭಸಕ್ಕೆ ಇಲ್ಲಿ ಹಿಮಾಲಯ ಪರ್ವತಗಳು ಸೃಷ್ಟಿಯಾದವು ಇವತ್ತಿಗೂ ಕೂಡ ಭಾರತದ ಭೂಪಲಕ ಏಷ್ಯಾ ಪ್ಲೇಟ್ ಅನ್ನ ಒತ್ತುತ್ತಲೇ ಇದೆ.
ಹೀಗಾಗಿನೇ ಹಿಮಾಲಯ ಪರ್ವತಗಳು ಸ್ವಲ್ಪ ಸ್ವಲ್ಪವಾಗಿ ಬೆಳಿತಾ ಹೋಗ್ತಾ ಇವೆ ಮತ್ತು ಆ ಭಾಗದಲ್ಲಿ ಭೂಕಂಪನಗಳು ಅನಾಹುತಗಳು ಇವೆಲ್ಲ ಆಗ್ತಾ ಇರುತ್ತವೆ.
ಹಾಗೆ ಅಲ್ಲಿ ಹಿಮಾಲಯ ಪರ್ವತಗಳು ಇರುವುದರಿಂದ ಭಾರತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗುತ್ತೆ ಶುದ್ಧ ನೀರು ನಮಗೆ ಹಿಮಾಲಯದಿಂದ ಸಿಗ್ತಾ ಇದೆ ಇನ್ನು ನಾವಿದ್ದೀವಲ್ಲ ದಕ್ಷಿಣದ ಜನ ನಮಗೆ ಹಿಮಾಲಯ ಮತ್ತು ಅದರ ತಪ್ಪಲಿನ ಜನ ಅನುಭವಿಸುವ ಯಾವ ಸಮಸ್ಯೆಗಳು ಇಲ್ಲ.
ಭೂಕಂಪಗಳು ನಮ್ಮಲ್ಲಿ ತುಂಬಾ ಕಡಿಮೆ ಶೀತ ಮಾರುತಗಳ ಸಮಸ್ಯೆಯನ್ನು ನಾವು ಅನುಭವಿಸುವುದೇ ಇಲ್ಲ ಸ್ವಲ್ಪ ಬಿಸಿಲು ಜಾಸ್ತಿ ಅನ್ನೋದು ಬಿಟ್ರೆ ಹಿಮಾಲಯದ ತಪ್ಪಲಿನ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ.
ನಾವು ದಕ್ಷಿಣದ ಜನ ತುಂಬಾನೇ ಸೇಫ್ ಆಗಿದ್ದೀವಿ ಅಂತ ನಾವು ಅಂದುಕೊಳ್ಳುತ್ತಾ ಇರ್ತೀವಿ ಆದರೆ ಇದು ಕೂಡ ಎಷ್ಟು [ಸಂಗೀತ] ದಿನ ಈ ಪ್ರಶ್ನೆ ಯಾಕೆ ಅಂದ್ರೆ ಗೆಳೆಯರೇ ನಾವು ಇವತ್ತು ಹಿಮಾಲಯವನ್ನು ಏನು ನೋಡ್ತಾ ಇದೀವಿ.
ಅದೇ ತರದ ಪರ್ವತ ಒಂದು ನಮ್ಮ ದಕ್ಷಿಣದಲ್ಲಿ ಕೂಡ ತಲೆ ಎತ್ತುವ ಸಾಧ್ಯತೆಗಳಿವೆ ಮತ್ತು ನಾವು ಕೇರಳ ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಒಂದಷ್ಟು ಕರಾವಳಿ ತೀರಗಳನ್ನೇನು ನೋಡ್ತಾ ಇದ್ದೀವಿ.
ಅವೆಲ್ಲ ಕಾಣೆಯಾಗಿ ಆ ತೀರ ಪ್ರದೇಶದ ಉದ್ದಕ್ಕೂ ದೊಡ್ಡ ಪರ್ವತ ಒಂದು ಎದ್ದು ನಿಲ್ಲುತ್ತೆ ಪರಶುರಾಮರಿಂದ ಸೃಷ್ಟಿಸಲ್ಪಟ್ಟ ಕ್ಷೇತ್ರ ಏನಿದೆ ಅದು ಕಣ್ಮರೆಯಾಗಿ ಹೋಗುತ್ತೆ ಆಮೇಲೆ ನಮ್ಮ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ತಮಿಳುನಾಡುಗಳಲ್ಲಿ ಕೂಡ ಭೂಕಂಪನಗಳು ಶುರುವಾಗುತ್ತವೆ ಮಾನ್ಸೂನ್ ಮಾರುತಗಳ ದಿಕ್ಕು ಬದಲಾಗುತ್ತೆ.
ಭಾರತದ ಮ್ಯಾಪ್ ಕೂಡ ಸಂಪೂರ್ಣವಾಗಿ ಬದಲಾಗಿ ಹೋಗುತ್ತೆ ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇ ಶೈವ ದಕ್ಷಿಣಂ ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಹಿ ಅಂತ ನಾವು.
ಇವತ್ತು ಭಾರತ ಮತ್ತು ಭಾರತೀಯರ ಗುರುತನ್ನು ಏನು ಹೇಳ್ಕೊತಾ ಇದ್ದೀವಿ ಅದು ಬದಲಾಗಿ ಹೋಗುತ್ತೆ ಸಮುದ್ರ ಇವತ್ತು ಇರೋ ಕಡೆ ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಇವತ್ತಿನ ದಕ್ಷಿಣ ಅಂತ ನಾವು ಏನು ಹೇಳ್ತಾ ಇದ್ದೀವಿ.
ಇಲ್ಲಿ ಕೂಡ ಹಿಮಾಲಯದಂತಹ ಪರ್ವತ ಒಂದು ತಲೆಯೆತ್ತಿ ನಿಂತಿರುತ್ತೆ ಎರಡು ಮಹಾಪರ್ವತಗಳ ನಡುವಿನ ಭೂಮಿ ಭಾರತ ಅನ್ನಿಸಿಕೊಳ್ಳುತ್ತೆ ಇಷ್ಟೆಲ್ಲ ಆಗೋದಿಕ್ಕೆ ಕಾರಣ ಏನು ಗೊತ್ತಾ! ಆಫ್ರಿಕಾದಿಂದ ಬೇರೆ ಆಗ್ತಾ ಇರೋ ಭೂಪದರ ಒಂದು ಭಾರತವನ್ನ ಸೇರೋದಕ್ಕೆ ಹೊರಟಿರೋದು ಒಂದು ವೇಳೆ ಹಾಗೇನಾದರೂ ಆದ್ರೆ ಭಾರತ ಉಪಖಂಡ ಏನಿದೆ.
ಅದು ಸಂಪೂರ್ಣ ಖಂಡವಾಗಿ ಭರತ ಖಂಡವಾಗಿ ಬದಲಾಗುವ ಸಾಧ್ಯತೆ ಕೂಡ ಇರುತ್ತೆ ಹಾಗಾದ್ರೆ ಇದು ಸಾಧ್ಯ ಆಗೋದು ಹೇಗೆ ಇದಕ್ಕೆ ಇನ್ನೆಷ್ಟು ವರ್ಷಗಳು ಬೇಕು ಒಂದು ವೇಳೆ ಭಾರತ ಮತ್ತು ಆಫ್ರಿಕಾದ ದೇಶಗಳು ಒಂದಕ್ಕೊಂದು ಸೇರಿಕೊಂಡು ಬಿಟ್ರೆ ಇಲ್ಲಿ ಏನೆಲ್ಲಾ ಆಗಬಹುದು? ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನಾವಿಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ