ಗಂಡಂದಿರೇ ಇನ್ಮುಂದೆ ನಿಮ್ಮ ಆಟ ನಡೆಯೋಲ್ಲ..ವಿವಾಹಿತ ಮಹಿಳೆಯರಿಗೆ ಇದು ಖುಷಿ ಸುದ್ದಿ..ಏನಿದು ಹೊಸ ವಿಷಯ ನೋಡಿ

ಗಂಡಂದಿರೇ ಇನ್ಮುಂದೆ ನಿಮ್ಮ ಆಟ ನಡೆಯೋಲ್ಲ..ವಿವಾಹಿತ ಮಹಿಳೆಯರಿಗೆ ಇದು ಖುಷಿ ಸುದ್ದಿ..ಏನಿದು ಹೊಸ ವಿಷಯ ನೋಡಿ
ನಮಸ್ಕಾರ ನೀವು ನೋಡ್ತಾ ಇದ್ದೀರಾ ನ್ಯೂಸ್ ಫಾರ್ ಸ್ಪೆಷಲ್ ನಾನು ವಿನುತಾ ಪರಮೇಶ್ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಮದುವೆಯಾಗಬೇಕು ಅಂದ್ರೆ ಇದೊಂದು ವಿಚಾರದ ಬಗ್ಗೆ ಆತಂಕ ಇರುತ್ತೆ.

WhatsApp Group Join Now
Telegram Group Join Now

ಇಷ್ಟು ದಿನ ಅಪ್ಪ ಅಮ್ಮ ಇದ್ರು ಅವರೇ ನಮ್ಮ ಜವಾಬ್ದಾರಿ ತಗೊಳ್ತಾ ಇದ್ರು ನಾವೇ ದುಡಿತಾ ಇದ್ರೂನು ಏನಾದ್ರು ಸಮಸ್ಯೆ ಆದ್ರೆ ಅಪ್ಪ ಇಲ್ಲ ಅಮ್ಮ ಇಡ್ತಿದ್ರು ಮದುವೆ ಆದ್ಮೇಲೆ ಹೇಗಪ್ಪಾ ಅನ್ನೋ ಟೆನ್ಶನ್ ಇರುತ್ತೆ.

ಆದರೆ ಈ ಸಮಸ್ಯೆಗೆ ಕಡಿವಾಣ ಹಾಕೋಕೆ ಸುಪ್ರೀಂಕೋರ್ಟ್ ಮುಂದಾಗಿದೆ ಹೆಣ್ಣುಮಕ್ಕಳಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್ ಕೊಟ್ಟಿದೆ ಅದೇನಪ್ಪಾ ಅಂದ್ರೆ ಇನ್ಮುಂದೆ ಮನೆ ನೋಡಿಕೊಳ್ಳುವ ಹೆಂಡತಿಗೆ ಗಂಡ ಅಕೌಂಟ್ ಮಾಡಿಸಿ ಎಟಿಎಂ ಕೊಡಬೇಕು ಅಂತ ಅಭಿಪ್ರಾಯ ಪಟ್ಟಿದೆ.

ಭಾರತದಲ್ಲಿ ವರ್ಕಿಂಗ್ ವುಮೆನ್ ಜೊತೆ ಜೊತೆಗೆ ಭಾಗಶಹ ಗೃಹಿಣಿಯರೇ ಹೆಚ್ಚಾಗಿದ್ದಾರೆ ಹೀಗೆ ಮನೆ ನಿಭಾಯಿಸ್ತಾ ಇರೋ ಅದೆಷ್ಟೋ ಮಹಿಳೆಯರಿಗೆ ಸಣ್ಣ ಪುಟ್ಟ ಖರ್ಚಿಗೂ ಗಂಡನ ಬಳಿ ಹಣ ಕೇಳೋದಕ್ಕೆ ಮುಜುಗರವಾಗ್ತಾ ಇತ್ತು.

ಹೀಗಾಗಿ ಹಣ ಕೇಳೋದೇ ಬೇಡ ಅಂತ ತಮ್ಮ ಆಸೆಗಳನ್ನೇ ಹೆಣ್ಣುಮಕ್ಕಳು ಸ್ಯಾಕ್ರಿಫೈಸ್ ಮಾಡ್ತಾ ಇದ್ರು ಆದ್ರೀಗ ಈ ಆದೇಶದಿಂದ ವಿವಾಹಿತ ಮಹಿಳೆಯರಿಗೆ ಸಮಾಧಾನ ತರಿಸಿದೆ ಹಾಗಾದ್ರೆ ಸುಪ್ರೀಂಕೋರ್ಟ್ ಏನು ಹೇಳಿದೆ.

ಅಂದ್ರೆ ಜೀವನಾಂಶ ಅನ್ನೋದು ದಾನವಲ್ಲ ಅದೊಂದು ವಿವಾಹಿತ ಮಹಿಳೆಯ ಹಕ್ಕು ಪತಿಯು ಪತ್ನಿಗೆ ಯಾವೆಲ್ಲಾ ಸೌಕರ್ಯ ನೀಡಬೇಕು ಅನ್ನೋದನ್ನ ನ್ಯಾಯಪೀಠ ಸವಿವರವಾಗಿ ಹೇಳಿದೆ.

ಮನೆ ನೋಡಿಕೊಳ್ಳುವ ಯಜಮಾನಿ ಹೆಂಡತಿ ಅಂದ್ರೆ ಸುಮ್ನೆ ಅಲ್ಲ ಆಕೆಗೂ ಜವಾಬ್ದಾರಿಗಳಿದೆ ಆಕೆಗೂ ಸ್ವಂತ ಖರ್ಚಿಗೆ ಹಣದ ಅವಶ್ಯಕತೆಗಳಿದೆ ಜೀವನಾಂಶ ಅನ್ನೋದು ವಿವಾಹಿತ ಮಹಿಳೆಯ ಹಕ್ಕು ಅಂತ ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.

ಸುಪ್ರೀಂಕೋರ್ಟ್ ನ್ಯಾಯಪೀಠದ ಉಲ್ಲೇಖದಂತೆ ಮನೆಯಲ್ಲಿರುವ ಗೃಹಿಣಿಯರಿಗೆ ದುಡಿಯುವ ಗಂಡಂದಿರು ಜಂಟಿ ಬ್ಯಾಂಕ್ ಖಾತೆ ಮಾಡಿಸಬೇಕು ಆಕೆಗೂ ಎಟಿಎಂ ಕಾರ್ಡ್ ನೀಡಬೇಕು.

ಗೃಹಿಣಿಯರಿಗೆ ಹಣಕಾಸಿನ ಸ್ವಾತಂತ್ರ್ಯ ನೀಡೋದ್ರಿಂದ ಅವರಿಗೆ ಮನೆಯಲ್ಲಿ ಹೆಚ್ಚು ಸುರಕ್ಷತೆ ಭಾವನೆ ಮೂಡುತ್ತೆ ಹೀಗಾಗಿ ಮನೆಯ ಖರ್ಚಿನ ಜೊತೆಗೆ ಆಕೆಯ ವೈಯಕ್ತಿಕ ಖರ್ಚುಗಳಿಗೂ ಗಂಡ ಹಣ ಕೊಡಬೇಕು.

ಆಗ ಮಾತ್ರ ಮಹಿಳೆಯು ನೆಮ್ಮದಿಯಿಂದ ಇರಲು ಸಾಧ್ಯ ಎಂಬುದಾಗಿ ಕೋರ್ಟ್ ತಿಳಿಸಿದೆ ಹಾಗಾದ್ರೆ ಇಂಥದೊಂದು ನಿರ್ಧಾರಕ್ಕೆ ಬರೋದಕ್ಕೂ ಒಂದು ಕಾರಣ ಇರಬೇಕಲ್ವಾ.

ಈ ಹಿಂದೆಯೇ ತೆಲಂಗಾಣದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ 20000 ರೂಪಾಯಿ ಜೀವನಾಂಶ ನೀಡಬೇಕು ಅಂತ ಮೊಹಮ್ಮದ್ ಅಬ್ದುಲ್ ಸಮದ್ ಎಂಬವರಿಗೆ ಆದೇಶಿಸಿತ್ತು.

ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನ ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು ಈ ಅರ್ಜಿ ವಜಾಗೊಳಿಸಿದ ಬಿವಿ ನಾಗರತ್ನ ಮತ್ತು ಆಗಸ್ಟಿಸ್ ಜಾರ್ಜ್ ನೇತೃತ್ವದ ನ್ಯಾಯಪೀಠ ಮಹತ್ವದ ತೀರ್ಪು ಕೊಟ್ಟಿದೆ.

ಎಲ್ಲಾ ಮಹಿಳೆಯರಿಗೂ ಸಿಆರ್ ಪಿಸಿ ಸೆಕ್ಷನ್ 120 25 ಅಪ್ಲೈ ಆಗುತ್ತೆ ಯಾವ ಧರ್ಮಕ್ಕೆ ಸೇರಿದವರಾದರೂ ಜೀವನಾಂಶ ಕೇಳಬಹುದು ಜೀವನ ನಿರ್ವಹಣೆ ವೆಚ್ಚ ನೀಡುವುದು ದಾನವಲ್ಲ ಅದು ಮಹಿಳೆಯರ ಹಕ್ಕು ಗೃಹಿಣಿಯರು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿಸಿರುತ್ತಾರೆ.

ಇದನ್ನ ಪುರುಷರು ಗುರುತಿಸಬೇಕು ನಗದು ರೀತಿಯಲ್ಲಾದರೂ ನೀಡಬಹುದು ಇಲ್ಲದೆ ಹೋದಲ್ಲಿ ಗಂಡ ಮತ್ತು ಹೆಂಡತಿ ಜಂಟಿ ಬ್ಯಾಂಕ್ ಖಾತೆ ಮಾಡಿಸಬಹುದು ಒಂದು ಎಟಿಎಂ ಕಾರ್ಡ್ ಮಹಿಳೆ ಕೈಯಲ್ಲಿ ಇದ್ದರೆ ಒಳ್ಳೆಯದು ಅಂತ ಕೋರ್ಟ್ ಹೇಳಿದೆ.

ಒಟ್ಟಿನಲ್ಲಿ ಇಷ್ಟು ದಿನ ನೀವು ಗಂಡನ ಬಳಿ ಕಾಡಿ ಬೇಡಿದರು ಒಂದಿಷ್ಟು ಹಣ ಸಿಗ್ತಾ ಇರ್ಲಿಲ್ಲ ಸಿಕ್ಕಿದ್ರು ಸಮಾಧಾನ ತರ್ತಿರ್ಲಿಲ್ಲ ಆದ್ರೀಗ ನಿಮ್ಮ ಕೈಗೆ ಎಟಿಎಂ ಕಾರ್ಡ್ ಸಿಗೋ ಕಾಲ ಬರ್ತಿರೋದು ಲಾಟರಿ ಅಂದ್ರೆ ತಪ್ಪಾಗಲ್ಲ ಕ್ಷಣಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ . ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]