ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ…ನಂತರ ಬದಲಾವಣೆ ನೋಡಿ
ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ… ಇವತ್ತು ನಾನು ಮನೆಯಲ್ಲಿ ಹೇಗೆ ನೈಸರ್ಗಿಕವಾಗಿ ಕೂದಲು ಹಚ್ಚುವುದೇ ಎಂದು ತಿಳಿಸಿಕೊಡುತ್ತೇನೆ ಇದನ್ನು ಮಾಡಿದ್ದೆಯಾದಲ್ಲಿ ನೀವು ಆಚೆ ಪಾರ್ಲರ್ಗೆ ಆಗಲಿ ಬೇರೆ ಕಡೆಯಾಗಲಿ ಹೋಗುವುದೇ ಬೇಡ ಅಥವಾ ಆಚೆಯಿಂದ ತಂದು ಕಲರನ್ನು ಕೂಡ ಮಾಡುವ ಅವಶ್ಯಕತೆ ಇರುವುದಿಲ್ಲ.
ನೈಸರ್ಗಿಕವಾಗಿಯೇ ಮನೆಯಲ್ಲಿ ಕಲರ್ ಮಾಡಿಕೊಳ್ಳಬಹುದು. ಅದಕ್ಕಾಗಿ ಮೊದಲನೆಯದಾಗಿ ಒಂದು ಬೀಟ್ರೂಟ್ ಅನ್ನು ತೆಗೆದುಕೊಂಡಿದ್ದೇನೆ ಅದನ್ನು ತುರಿದುಕೊಳ್ಳಬೇಕು ತುರಿದಿರುವಂತಹ ಬೀಟ್ರೂಟ್ ಅನ್ನು ನೀವು ಯಾವ ರೀತಿ ಬಳಸಬೇಕು ಎಂದು ನಾನು ತಿಳಿಸುತ್ತೇನೆ ಬೀಟ್ರೂಟ್ ನಮ್ಮ ಕೂದಲಿಗೆ ಬಣ್ಣವನ್ನು ಕೊಡುವುದಷ್ಟೇ ಅಲ್ಲದೆ.
ಅದು ಕೂದಲಿಗೆ ಶೈನಿಂಗ್ ಮತ್ತು ಬೆಳೆಯುವುದಕ್ಕೆ ಸ್ಮೂತ್ ಆಗುವುದಕ್ಕೆ ತುಂಬಾನೇ ಒಳ್ಳೆಯ ಕೆಲಸ ಮಾಡುತ್ತದೆ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿದ ನಂತರ ಒಂದು ತೆಳುವಾದ ಬಟ್ಟೆಯನ್ನು ಆಸಿ ಒಂದು ಬಟ್ಟಲಿಗೆ ಹಿಂಡಿಕೊಂಡಾಗ ಅದರ ರಸವೆಲ್ಲ ಬಟ್ಟಲಿಗೆ ಬೀಳುತ್ತದೆ ಈಗ ಅದನ್ನು ಚೆನ್ನಾಗಿ ಹಿಂಡಿಕೊಳ್ಳಿ ತೆಗೆದಾದ ನಂತರ ಏನು ಮಾಡಬೇಕು ಎಂದು.
ಮುಂದೆ ಹೇಳುತ್ತೇನೆ ಈ ರೀತಿಯಾಗಿ ನೀವು ಮನೆಯಲ್ಲಿಯೇ ಒಂದು ಬಾರಿ ನೈಸರ್ಗಿಕವಾಗಿ ಉಪಯೋಗಿಸಿ ನೋಡಿ, ಶೋಧಿಸಿಕೊಂಡಿರುವಂತಹ ಪೂರ್ತಿ ರಸವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಅದಾದ ನಂತರ ಇದಕ್ಕೆ ಅಗಸೆ ಬೀಜವನ್ನು ಹಾಕಬೇಕು ಅಗಸೆ ಬೀಜ ನಮ್ಮ ಕೂದಲಿಗೆ ತುಂಬಾನೇ ಒಳ್ಳೆಯದು ನನಗೆ ಪೂರ್ತಿಯಾಗಿ ಬರ್ಕಂಡಿ ರೀತಿ ಬರಬಾರದು.
ಎಂದು ನಾನು ಇದಕ್ಕೆ ಸ್ವಲ್ಪ ಕಾಫಿ ಪುಡಿಯನ್ನು ಹಾಕಿಕೊಳ್ಳುತ್ತಾ ಇದ್ದೇನೆ ನಿಮಗೆ ಕೇವಲ ಬರ್ಗಂಡಿ ರೀತಿಯೇ ಬೇಕು ಎಂದರೆ ನೀವು ಕಾಫಿ ಪೌಡರ್ ಅನ್ನು ಹಾಕಿಕೊಳ್ಳುವುದು ಬೇಡ ಬ್ರೌನ್ ಆಗಿ ಬರಬೇಕು ಎಂದರೆ ಕಾಫಿ ಪೌಡರ್ ಸ್ವಲ್ಪ ಜಾಸ್ತಿ ಹಾಕಿಕೊಳ್ಳಬಹುದು ಇದನ್ನು ಒಂದು ಬಾರಿ ಮಿಶ್ರಣ ಮಾಡಿಕೊಂಡು ಕುದಿಯುವುದಕ್ಕೆ ಇಡಬೇಕು.
ಎಷ್ಟರ ಮಟ್ಟಿಗೆ ಕುದಿಸಬೇಕು ಎಂದರೆ ಅಗಸೆ ಬೀಜ ಜಲ್ ರೀತಿ ಬರುತ್ತದೆ ಆ ರೀತಿ ಬರುವವರೆಗೂ ಅದನ್ನು ಬಿಸಿ ಮಾಡಿಕೊಳ್ಳಬೇಕು.ಈ ಮೂರು ವಸ್ತುಗಳು ನಮ್ಮ ಕೂದಲನ್ನು ಸಾಫ್ಟ್ ಆಗಿ ಸಿಲ್ಕಿಯಾಗಿ ತುಂಬಾ ಚೆನ್ನಾಗಿ ಬೆಳವಣಿಗೆ ಆಗುವುದಕ್ಕೆ ಸಹಾಯ ಮಾಡುವಂತಹ ಅಂಶಗಳನ್ನು ಹೊಂದಿವೆ, ಇದು ತುಂಬಾನೇ ಚೆನ್ನಾಗಿ ಕೆಲಸವನ್ನ ಮಾಡುತ್ತದೆ.
ಅದು ಚೆನ್ನಾಗಿ ಕುದಿ ಬರಬೇಕು ಅಂದರೆ ಅದು ಪೂರ್ತಿಯಾಗಿ ಗಟ್ಟಿಯಾಗಿ ಬಿಡುತ್ತದೆ ಬಿಸಿ ಮಾಡಿದ ನಂತರ ಸ್ವಲ್ಪ ತಣ್ಣಗಾಗುವದಕ್ಕೆ ಬಿಡಿ ನೀವು ಕಬ್ಬಿಣದ ಬಾಂಡಲಿಯನ್ನು ಬಳಸಿದ್ದೀರಾ ಎಂದರೆ ಇನ್ನೂ ತುಂಬಾನೆ ಒಳ್ಳೆಯದು ಕಬ್ಬಿಣದ ಬಾಂಡಲಿಯನ್ನು ಬಳಸಿದರೆ ಅದು ಕಪ್ಪಾಗುವುದಕ್ಕೆ ಸಹಾಯಮಾಡುತ್ತದೆ.
ಅದರಲ್ಲಿರುವಂತಹ ಕಬ್ಬಿನಾಂಶ ನಮ್ಮ ಕೂದಲು ಕಪ್ಪಾಗುವುದಕ್ಕೆ ಸಹಾಯ ಮಾಡುತ್ತದೆ ಅದಾದ ನಂತರ ಮತ್ತೆ ಅದನ್ನು ಶೋಧಿಸಿಕೊಳ್ಳಬೇಕು ನಾವು ಮೊದಲೇ ಶೋಧಿಸಿಕೊಂಡಿದ್ದಂತಹ ಬಟ್ಟೆಗೆ ಮತ್ತೆ ಹಾಕಿ ಶೋಧಿಸಿಕೊಳ್ಳೋಣ ನಾನು ಇಲ್ಲಿ ನಿಶಾ ಮೆಹಂದಿಯನ್ನು ಬಳಸುತ್ತಿದ್ದೇನೆ ಮಾಮೂಲಿ ಮೆಹಂದಿಯನ್ನು ತೆಗೆದುಕೊಳ್ಳಿ.
ನಿಮಗೆ ಯಾವ ಬಣ್ಣ ಬೇಕು ಎಂದರೆ ಅದನ್ನು ಆಯ್ಕೆ ಮಾಡಿ ತೆಗೆದುಕೊಳ್ಳಿ ಇದನ್ನು ಮಿಶ್ರಣ ಮಾಡಿ ಪೂರ್ತಿ ರಾತ್ರಿ ಹಾಗೆ ಇಟ್ಟು ಕೂಡ ನೀವು ಬಳಸಿಕೊಳ್ಳಬಹುದು ಇಲ್ಲವೆಂದರೆ ಎರಡು ಗಂಟೆಯಾದರೂ ಇದು ನೆನೆಯುವುದಕ್ಕೆ ನೀವು ಬಿಡಬೇಕಾಗುತ್ತದೆ ಏಕೆಂದರೆ ನೆನೆಸಿ ಉಪಯೋಗಿಸುವುದರಿಂದ ಇದರ ಪ್ರಯೋಜನ ತುಂಬಾ ಚೆನ್ನಾಗಿರುತ್ತದೆ ತಕ್ಷಣವೇ ಹಾಕಿದರೆ ಅಷ್ಟೊಂದು ಪರಿಣಾಮಕಾರಿಯಾಗಿ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.