ಹೀಗೆ ಮಾಡಿದರೆ ಸಾಕು ಬಿಳಿಯ ಬಟ್ಟೆಗಳು ಬೆಳ್ಳಗೆ ಹೊಳೆಯುತ್ತವೆ..ಹಣದ ಜೊತೆಗೆ ಸಮಯದ ಉಳಿತಾಯ..

ಹೀಗೆ ಮಾಡಿದರೆ ಸಾಕು ಬಿಳಿಯ ಬಟ್ಟೆಗಳು ಬೆಳ್ಳಗೆ ಹೊಳೆಯುತ್ತವೆ..ಹಣದ ಜೊತೆಗೆ ಸಮಯದ ಉಳಿತಾಯ..
ಕೆಲವೊಂದು ಮನೆಯಲ್ಲಿ ಮಾಡಿಕೊಳ್ಳುವಂತಹ ಸುಲಭವಾದ ಉಪಯುಕ್ತ ಮಾಹಿತಿಗಳು ಹಾಗೂ ಇದಕ್ಕೆ ಹೆಚ್ಚು ಹಣ ಖರ್ಚಾಗುವುದಿಲ್ಲ ಈ ವಿಷಯ ತಿಳಿಯದೆ ಎಷ್ಟೋ ಜನ ಬಹಳಷ್ಟು ಹಣವನ್ನು ದುಂದು ವೆಚ್ಚ ಮಾಡಿರುತ್ತಾರೆ. ಹೀಗೆ ಮಾಡಿದರೆ ಬಿಳಿಯ ಬಟ್ಟೆಗಳು ಬೆಳ್ಳಗೆ ಪಳಪಳ ಹೊಳೆಯುತ್ತದೆ ಪೂರ್ತಿ ಮಾಹಿತಿಯನ್ನ ಈಗ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಹಬ್ಬ ಹರಿದಿನಗಳಲ್ಲಿ ಕೆಲವೊಂದು ಹಣ್ಣುಗಳನ್ನ ಮೂರು ದಿನ ಮುಂಚೆ ಮನೆಗೆ ತಂದಿರುತ್ತೀರ ಅದು ಬೇಗ ಹಣ್ಣು ಆಗಬಾರದು ಎಂದರೆ ಒಂದು ನ್ಯೂಸ್ ಪೇಪರ್ ಅನ್ನು ತೆಗೆದುಕೊಂಡು ಅದರಲ್ಲಿ ಸುತ್ತಿ ಇಟ್ಟರೆ ಹಣ್ಣು ಬೇಗ ಮೆತ್ತಗಾಗುವುದಿಲ್ಲ. ಮತ್ತೊಂದು ಸುಲಭವಾದ ಟಿಪ್ಸ್ ಎಂದರೆ ಮನೆಗೆ ತಂದ ಹಣ್ಣು ಇನ್ನು ಕಾಯಾಗಿದ್ದು ಬೇಗ ಹಣ್ಣಾಗಬೇಕು ಎಂದರೆ ಒಂದು ತಟ್ಟೆಯಲ್ಲಿ ಹಣ್ಣನ್ನು ಇಟ್ಟು ಅದರ ಪಕ್ಕ ಹುದುಗಡ್ಡಿಯನ್ನ ಹಚ್ಚಿ ಒಂದು ಪಾತ್ರೆಯನ್ನು ಅದರ ಮೇಲೆ ರಾತ್ರಿ ಇಡಿ ಮುಚ್ಚಿಡಬೇಕು ಬೆಳಿಗ್ಗೆ ಅದರ ಬಣ್ಣವು ಬದಲಾಗಿರುತ್ತದೆ ಹಾಗೂ ಹಣ್ಣು ಕೂಡ ಆಗಿರುತ್ತದೆ.

ಮದುವೆ ಸಮಾರಂಭ ಕಾರ್ಯಕ್ರಮಗಳಿಗೆ ಹೋಗಬೇಕಾದರೆ ಕಿವಿಗೆ ದಪ್ಪ ಓಲೆ ಹಾಕಿದಾಗ ಕಿವಿಯ ತೂತು ಅಗಲವಾಗುವುದು ಸಹಜ ಆದರೆ ಅದನ್ನು ತಡೆಯುವುದು ಹೇಗೆ ಎಂದರೆ ಹಣೆಗೆ ಇಡುವ ಒಂದು ಸ್ಟಿಕ್ಕರನ್ನು ಬಟ್ಟೆ ಒಪ್ಪಿನಲ್ಲಿ ತೂತು ಮಾಡಿ ಓಲೆಯ ಹಿಂಬಾಗಕ್ಕೆ ಚುಚ್ಚಿ ನಂತರ ಅದಕ್ಕೆ ತಿರುಪನ್ನು ಹಾಕಿದರೆ ಓಲೆ ಬಗ್ಗುವುದು ಇಲ್ಲ ಹಾಗೂ ಕಿವಿ ತುತೂ ಅಗಲವಾಗುವುದು ಇಲ್ಲ ಎಷ್ಟೇ ಭಾರವಾಗಿರುವ ಓಲೆಯನ್ನು ಹಾಕಿಕೊಂಡು ಕಿವಿ ನೋವು ಸಹ ಬರುವುದಿಲ್ಲ.

ನಾವು ಬಳಸುವ ಕನ್ನಡಕದಲ್ಲಿ ಬಹಳ ಧೂಳು ಮತ್ತು ಸ್ಕ್ರಾಚ್ ಇದ್ದಾಗ ಇದನ್ನು ಬಹಳ ಈಸಿಯಾಗಿ ಶುಚಿಗೊಳಿಸಿ ಹಾಕಿಕೊಳ್ಳಬಹುದು ಹೇಗೆ ಎಂದರೆ ಬಿಳಿ ಬಣ್ಣದ ಟೂತ್ಪೇಸ್ಟ್ ಅನ್ನು ಕನ್ನಡಕದ ಗ್ಲಾಸ್ ಮೇಲೆ ಸ್ವಲ್ಪ ಸ್ವಲ್ಪ ಹಾಕಿಕೊಂಡು ಅದಕ್ಕೆ ಸ್ವಲ್ಪ ವಿನಿಗರನ್ನು ಸೇರಿಸಿ ಬೆರಳಿನಿಂದ ನಿಧಾನವಾಗಿ ಉಜ್ಜ ಬೇಕು ಐದು ನಿಮಿಷ ಬಿಟ್ಟು ನಂತರ ಅದನ್ನು ತೊಳೆದು ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು ಇದರಿಂದ ಕನ್ನಡಕದಲ್ಲಿ ಆಗಿರುವ ಸ್ಕ್ರಾಚಸ್ ಹಾಗೂ ಧೂಳು ಶುಚಿಯಾಗಿ ಕನ್ನಡಕದ ವಿಷನ್ ಸರಿಯಾಗಿ ಕಾಣಿಸುತ್ತದೆ.

ಅನ್ನ ಮಾಡಿದಾಗ ಬಸಿದಾಗ ಗಂಜಿಯಿಂದ ಈ ಒಂದು ಸುಲಭವಾದ ಟಿಪ್ಸ್ ಅನ್ನು ಮಾಡಿಕೊಳ್ಳಬಹುದು ಒಂದು ಬಕೆಟ್ ಗೆ ಗಂಜಿಯನ್ನು ಹಾಕಿಕೊಂಡು ಅರ್ಧ ಸ್ಪೂನ್ ಉಪ್ಪನ್ನು ಸೇರಿಸಿ ನಂತರ ಅದಕ್ಕೆ ಬಟ್ಟೆ ಒಗೆಯುವುದಕ್ಕೆ ಬಳಸುವ ಲಿಕ್ವಿಡ್ ಅನ್ನು ಸ್ವಲ್ಪ ಬೆರೆಸಿ ಕೈಯಿಂದ ಕಲಸಿಕೊಳ್ಳಬೇಕು ನಂತರ ಅದಕ್ಕೆ ಬಿಳಿ ಬಣ್ಣದ ಬಟ್ಟೆಯನ್ನು ಹಾಕಿ ಅರ್ಧ ಗಂಟೆ ನೆನೆಸಿಟ್ಟುಕೊಳ್ಳಬೇಕು ನಂತರ ಬ್ರಷ್ನಿಂದ ಅಥವಾ ಕೈಯಿಂದ ಉಜ್ಜಿದರೆ ಬಟ್ಟೆಯ ಎಲ್ಲಾ ಕೊಳೆ ಹೋಗುತ್ತದೆ ಹಾಗೂ ಬಹಳ ಶುದ್ಧವಾದ ಬಿಳಿಪನ್ನು ನೀಡುತ್ತದೆ ಬಟ್ಟೆಗೆ.

ಮನೆಯಲ್ಲಿ ಸೊಪ್ಪು ಸೋಸುವ ಪಾತ್ರೆ ಇದ್ದರೆ ಸಾಕು ರಂಗೋಲಿ ಹಾಕುವುದಕ್ಕೆ ಬರದೇ ಇರುವವರು ಸಹ ಸುಂದರವಾದ ರಂಗೋಲಿಯನ್ನು ಬಿಡಿಸಬಹುದು ರಂಗೋಲಿ ಬಿಡಿಸುವ ಜಾಗವನ್ನು ಮೊದಲು ನೀಟಾಗಿ ಕ್ಲೀನ್ ಮಾಡಿಕೊಂಡು ಸೊಪ್ಪು ಸೋಸುವ ಜಾಲರಿಯನ್ನು ಇಟ್ಟು ಅದರ ಮೇಲೆ ಸ್ವಲ್ಪ ರಂಗೋಲಿ ಪುಡಿಯನ್ನು ಸ್ಪ್ರೆಡ್ ಆಗುವಂತೆ ಹಾಕಿ ತೆಗೆದರೆ ಅದರಲ್ಲಿ ಚುಕ್ಕಿಗಳು ಇರುತ್ತವೆ ಅದರ ಮೇಲೆ ಆರಾಮಾಗಿ ಗೀಟು ಎಳೆಯುವ ಮೂಲಕ ಒಂದು ಸುಂದರವಾದ ರಂಗೋಲಿಯನ್ನು ಬಿಡಿಸಬಹುದು ಮತ್ತಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.