ರೆವಿನ್ಯೂ ಸೈಟ್ ಎಂದರೇನು ? ಈ ತರ ಸೈಟ್ ಖರೀದಿಸಿದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಗೊತ್ತಾ?

ರೆವೆನ್ಯೂ ಸೈಟ್ ಎಂದರೇನು? ಅದನ್ನು ತೆಗೆದುಕೊಳ್ಳುವುದು ಒಳ್ಳೆಯದ? ಕೆಟ್ಟದ್ದಾ ? ಅದರಲ್ಲಿರುವ ಸಮಸ್ಯೆಗಳಾದರೆ ಏನು ನಿಮಗೆ ಗೊತ್ತೇ?ರೆವಿನ್ಯೂ ಸೈಟ್ ಅಥವಾ ಕಂದಾಯ ನಿವೇಶನ ಎಂದರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ನಿವೇಶನ ಅಥವಾ ಯಾವುದೇ ಕಾರ್ಖಾನೆ ನಿರ್ಮಾಣದ ಉದ್ದೇಶಕ್ಕಾಗಿ ನೇರವಾಗಿ ಬಳಸಲಾಗುವುದಿಲ್ಲ. ಅವುಗಳನ್ನು ರೆವೆನ್ಯೂ ಸೈಟ್ ಎಂದು ಬದಲಾಯಿಸಿ ನಂತರ ಮಾಡ ಬೇಕಾಗುತ್ತದೆ ಇವುಗಳನ್ನು ಆಯಾ ಜಿಲ್ಲೆಯ ಟೌನ್ ಡೆವಲಪ್ಮೆಂಟ್ ಅತೋರಿಟಿ ಅವರು ರೆವಿನ್ಯೂ ಸೈಟ್ಗಳನ್ನು ಲೇಔಟ್ ಗಳಾಗಿ ಬದಲಾಯಿಸುತ್ತಾರೆ ನಂತರ ಹಂಚಿಕೆ ಮಾಡುತ್ತಾರೆ. ಇವುಗಳು ಮೂಲ ಕೃಷಿ ಭೂಮಿ ಗಳಾಗಿರುತ್ತವೆ. ಈ ರೀತಿ ಮೂಲ ಕೃಷಿ ಭೂಮಿಯನ್ನು ವಾಣಿಜ್ಯ ಅಥವಾ ವಸತಿ ಭೂಮಿಗಾಗಿ ಬದಲಾಯಿಸುವುದನ್ನು ರೆವಿನ್ಯೂ ಸೈಟ್ಸ್ ಎನ್ನುತ್ತಾರೆ. ಇದು ಕೆಲವೊಮ್ಮೆ ಕಾನೂನು ಬದ್ಧವಾಗಿ ಇರುವುದಿಲ್ಲ ಆದರೆ ಇವುಗಳನ್ನು ಲೇಔಟ್ ಗಳಾಗಿ ಬದಲಾಯಿಸಿದ ಮೇಲೆ ಆಕರ್ಷಕ ಬೆಲೆಯಲ್ಲಿ ಕಡಿಮೆ ಬೆಲೆಗೆ ಮಾರಿ ಬಿಡುತ್ತಾರೆ ಇದರಿಂದ ಜನರ ಆಕರ್ಷಣೆಗೊಂಡು ಖರೀದಿಸುತ್ತಾರೆ.

ಈ ರೀತಿ ಕನ್ವರ್ಟ್ ಆದ ಲೇಔಟ್ ಗಳಲ್ಲಿ ಬೇಸಿಕ್ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಕೆಲವೊಮ್ಮೆ 30 ಅಡಿಗಳಷ್ಟು ರಸ್ತೆಯು ಸಹ ಇರುವುದಿಲ್ಲ, ಎಲೆಕ್ಟ್ರಿಕಲ್ ಪೂಲ್ಸ್ ಸಹ ಇರುವುದಿಲ್ಲ, ಸರಿಯಾದ ಚರಂಡಿ ವ್ಯವಸ್ಥೆಗೂ ಯೋಜನೆ ಇರುವುದಿಲ್ಲ ಈ ಎಲ್ಲ ಕಾರಣಗಳಿಂದ ಅದನ್ನು ಅತಿ ಕಡಿಮೆ ಬೆಲೆಗೆ ಕೊಡಲಾಗುತ್ತದೆ .ಆದರೆ ಜನರು ಇವುಗಳಿಗೆ ಬೇಗ ಆಕರ್ಷಿತರಾಗಿ ಬಿಡುತ್ತಾರೆ. ಆದರೂ ಇದರಲ್ಲಿ ಕೆಲವೊಮ್ಮೆ ಅಕ್ರಮಗಳು ಅಥವಾ ಮೋಸ ಮಾಡುವುದು ಹೆಚ್ಚು. ಪಂಚಾಯಿತಿಯ ಮುದ್ರೆಯ ಆಧಾರದ ಮೇಲೆ ನಿವೇಶನ ಮಾಲೀಕರು ಖಾತೆ ಸಂಖ್ಯೆಯನ್ನು ಪಡೆಯುತ್ತಾರೆ. ಆದರೆ ಆ ನಿವೇಶನ ಪಂಚಾಯತ್ ಕಚೇರಿಯ ನಿಗದಿತ ಅಂತರದಲ್ಲಿ ಇದ್ದರೆ ಮಾತ್ರ ವ್ಯಾಲಿಡ್ ಆಗಿರುತ್ತದೆ. ಅದಕ್ಕಾಗಿ ಇ-ಸ್ವತ್ತು ಎನ್ನುವ ಕ್ರಮ ಇದೆ ಇದನ್ನು ಫಾರ್ಮ್ 9 ಫಾರ್ಮ 11ರಲ್ಲಿ ಉಲ್ಲೇಖಿಸುತ್ತಾರೆ. ಯಾಕೆಂದರೆ ಕೆಲವೊಮ್ಮೆ ಡಾಕ್ಯುಮೆಂಟ್ಗಳು ಲಂಚ ತೆಗೆದುಕೊಂಡು ಫೇಕ್ ಡಾಕ್ಯುಮೆಂಟನ್ನು ಕ್ರಿಯೇಟ್ ಮಾಡಿರುತ್ತಾರೆ.

WhatsApp Group Join Now
Telegram Group Join Now

ಸರ್ಕಾರದಿಂದ ಬಂದಿರುವ ಪತ್ರಗಳೇ ಕೆಲವೊಮ್ಮೆ ಸರಿಯಾಗಿ ಇರುವುದಿಲ್ಲ ಮತ್ತು ಗ್ರಾಮ ವ್ಯಾಪ್ತಿಯನ್ನು ಮೀರಿದ ಪ್ರದೇಶಗಳನ್ನು ಕೂಡ ಅವರ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಪರ್ಮಿಷನ್ ಕೊಡುತ್ತಿದ್ದರು ಇವೆಲ್ಲವನ್ನು ಸರಿಪಡಿಸುವ ಉದ್ದೇಶದಿಂದಲೇ ಈ ಇ-ಸ್ವತ್ತು ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಇದು ಪೂರ್ತಿಯಾಗಿ ಕಂಪ್ಯೂಟರೈಜ್ ಡಾಕ್ಯುಮೆಂಟ್ ಆಗಿರುತ್ತದೆ. ಆದರೆ ರೆವೆನ್ಯೂ ಸೈಟ್ ಗಳಿಗೆ ಈ ರೀತಿಯ ಯಾವುದೇ ಕಂಪ್ಯೂಟರೈಸ್ಡ್ ಡಾಕುಮೆಂಟ್ ಇರುವುದಿಲ್ಲ ಇದರಿಂದ ಜನರನ್ನು ಸುಲಭವಾಗಿ ಮೋಸಗೊಳಿಸುತ್ತಾರೆ. ಇವೆಲ್ಲವುಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

[irp]