ರಾತ್ರಿ ನಡೆಯುತ್ತೆ ಈ ದೇವಸ್ಥಾನದಲ್ಲಿ ಚೀಟಿ ಪವಾಡ..ಗಾಣಗಟ್ಟೆ ಕ್ಷೇತ್ರದ ನಿಜವಾದ ಪವಾಡ ಏನು ನೋಡಿ.

ರಾತ್ರಿ ನಡೆಯುತ್ತದೆ ಈ ದೇವಸ್ಥಾನದಲ್ಲಿ ಚೀಟಿ ಪವಾಡ…. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆಯ ಮಾಯಮ್ಮನ ದೇವಸ್ಥಾನ ಕಳೆದ ಒಂದು ವರ್ಷದಿಂದೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಮಾಯಮ್ಮ ತಾಯಿ ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವಳು. ಆ ತಾಯಿ ನೂರಾರು ವರ್ಷಗಳ ಹಿಂದೆ ತನ್ನ ವಾಹನದ ಕೋಣನ ಮೇಲೆ ಕುಳಿತು ಗಾಣಗಟ್ಟೆಗೆ ಬಂದು ನೆಲೆಸಿದಳು ಎಂದು ಈ ದೇವಸ್ಥಾನದ ಭಕ್ತರು ಹೇಳುತ್ತಾರೆ.ಇದಕ್ಕೆ ಯಾವ ದಾಖಲೆಗಳೂ ಇಲ್ಲ. ಕಷ್ಟಗಳು, ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುವ ಭಕ್ತರಿಗೆ ಮಾಯಮ್ಮ ತಾಯಿ ಅಭಯ ಹಸ್ತ ಚಾಚಿ ರಕ್ಷಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಗಾಣಗಟ್ಟೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ದೇವ ದೇವತೆಗಳಿಗೆ ಭಕ್ತರು ಹಣ್ಣು, ಕಾಯಿ, ಹೂ ಇತ್ಯಾದಿಗಳನ್ನು ತಮ್ಮ ಭಕ್ತಿಯ ಸಂಕೇತವಾಗಿ ಅರ್ಪಿಸುವ ಪರಿಪಾಠ ಇದ್ದರೆ ಮಾಯಮ್ಮನಿಗೆ ಹಣವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.ಭಕ್ತರು ತಮ್ಮ ಶಕ್ತಿ ಇದ್ದಷ್ಟು ಹಣವನ್ನು ಕಾಣಿಕೆಯಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಮಕ್ಕಳಿಲ್ಲದ ಭಕ್ತರು ಹರಕೆ ಕಟ್ಟಿಕೊಂಡ ನಂತರ ಹುಟ್ಟಿದ ಮಗುವಿನ ತೂಕದ ಹಣ ನೀಡುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ.

ಇನ್ನು ಕೆಲವು ಮಗುವಿನ ತೂಕದ ಹೂ, ಹಣ್ಣು, ಬೆಲ್ಲ ಇತ್ಯಾದಿಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.ಸೀರೆ, ಚಿನ್ನದ ಬಳೆ, ಗಾಜಿನ ಬಳೆಗಳನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಭಕ್ತಾದಿಗಳು ತಮ್ಮ ಬೇಡಿಕೆಯನ್ನು ಎರಡು ಸಿಟಿಯಲ್ಲಿ ಬೇಕು ಒಬ್ಬ ಆಗುತ್ತದೆ ಇಲ್ಲ ಆಗುವುದಿಲ್ಲ ಎಂದು ಬರೆದು ದೇವಸ್ಥಾನದ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟಿರುತ್ತಾರೆ ಅದನ್ನು ದೇವಿಯನ್ನು ಹೊತ್ತ ಅರ್ಚಕರು ಚೀಟಿ ಇರುವ ಪತ್ತೆ ಹಚ್ಚಿ ತೆಗೆದುಕೊಡುತ್ತಾರೆ. ಅದರ ಆಧಾರದ ಮೇಲೆ ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಯ ಸಾಧ್ಯ-ಅಸಾಧ್ಯಗಳ ಬಗ್ಗೆ ಚಿಂತಿಸುತ್ತಾರೆ.ಒಟ್ಟಿನಲ್ಲಿ ಮಾಯಮ್ಮಗೆ ನಡೆಕೋ, ಪಡೆದುಕೋ ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಮಾಯಮ್ಮನ ಸನ್ನಿಧಿಯಲ್ಲಿ ಒಂದು ರಾತ್ರಿ ಕಳೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ, ಹೀಗಾಗಿ ಕೆಲವು ದೇವಸ್ಥಾನ ಬಳಿಯೇ ಒಂದು ರಾತ್ರಿ ಕಳೆಯುತ್ತಾರೆ. ಹಾಗೆಯೇ ದೇವಸ್ಥಾನಕ್ಕೆ ಬಂದು ಮಂತ್ರಿಸಿದ ನೀರನ್ನು ತಮ್ಮ ತಲೆಯ ಮೇಲೆ ಹಾಕಿಸಿಕೊಂಡು ನಮ್ಮಲ್ಲಿ ಇರುವಂತಹ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಾರೆ.

WhatsApp Group Join Now
Telegram Group Join Now