ಅಡುಗೆ ಮನೆಯನ್ನು ಸ್ವಚ್ಛವಾಗಿ ಇಡುವಂತಹ ಸರಳ ವಿಧಾನಗಳು.ಅಡುಗೆ ಮನೆ ನಮ್ಮ ಮನೆಯ ಹೃದಯ ಭಾಗ ಅಂತ ಕರೆಯುತ್ತೇವೆ ಅಂದರೆ ನಮ್ಮ ದಿನನಿತ್ಯದ ಕೆಲಸ ಆರಂಭವಾಗುವುದೇ ಅಡುಗೆ ಮನೆಯಿಂದ. ಮನುಷ್ಯ ದುಡಿಯುವುದು ಹೊಟ್ಟೆಗಾಗಿ ಹಾಗೂ ಆಹಾರಕ್ಕಾಗಿ ಹಾಗಾಗಿ ಈ ಒಂದು ಹೊಟ್ಟೆಗೆ ಬೇಕಾದಂತಹ ಆಹಾರ ಸಿದ್ಧವಾಗುವುದು ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ಅಷ್ಟೇ ಸ್ವಚ್ಛವಾಗಿ ನಮ್ಮ ಆರೋಗ್ಯವೂ ಕೂಡ ಇರುತ್ತದೆ. ಹಾಗಾಗಿ ಇಂದು ನಿಮಗೆ ಅಡುಗೆ ಮನೆಯ ಬಗ್ಗೆ ಕೆಲವೊಂದಷ್ಟು ಸಲಹೆಗಳನ್ನು ನೀಡುತ್ತಿದ್ದೇನೆ ಈ ಸಲಹೆಗಳನ್ನು ನೀವು ಅನುಸರಿಸಿದರೆ ಖಚಿತವಾಗಿಯೂ ಕೂಡ ನಿಮ್ಮ ಮನೆಯಲ್ಲಿ ಇರುವಂತಹ ಅಡುಗೆ ಕೋಣೆಯನ್ನು ನೀವು ಸದಾಕಾಲ ಸ್ವಚ್ಛತೆಯಿಂದ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಮನೆಯ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು ಆರೋಗ್ಯ ದೃಷ್ಟಿಯಿಂದಲೂ ಕೂಡ ಇದು ತುಂಬಾನೇ ಉತ್ತಮ ಅಂತ ಹೇಳಬಹುದು.ಮೊದಲನೇದಾಗಿ ನಾವು ಯಾವುದೇ ರೀತಿಯಾದಂತಹ ಆಹಾರವನ್ನು ತಯಾರಿ ಮಾಡಬೇಕಾದರೂ ಕೂಡ ಮೊದಲು ತರಕಾರಿಗಳನ್ನು ಕತ್ತರಿಸಿ ಕೊಳ್ಳುತ್ತೇವೆ. ಈರುಳ್ಳಿ ಅಥವಾ ಇನ್ನಿತರ ತರಕಾರಿ ಆಗಿರಬಹುದು ಬೆಳ್ಳುಳ್ಳಿ ಆಗಿರಬಹುದು ಹೀಗೆ ನಾವು ಯಾವ ಅಡುಗೆಯನ್ನು ತಯಾರು ಮಾಡುತ್ತೆವೆ ಅದಕ್ಕೆ ಸಂಬಂಧಪಟ್ಟಂತಹ ತರಕಾರಿಗಳನ್ನು ಕತ್ತರಿಸಿದಾಗ ಅದರಿಂದ ಬರುವಂತಹ
ಸಿಪ್ಪೆಯನ್ನು ಯಾವುದೇ ಕಾರಣಕ್ಕೂ ಕೂಡ ನೆಲದ ಮೇಲೆ ಹಾಕಬೇಡಿ ಯಾವುದಾದರೂ ಒಂದು ತಟ್ಟೆ ಅಥವಾ ಕವರ್ ನಾ ಮೇಲೆ ಹಾಕಬೇಕು.ಈ ರೀತಿ ಮಾಡುವುದರಿಂದ ಅಡುಗೆ ಮನೆಯ ಸ್ವಚ್ಛವಾಗಿರುತ್ತದೆ ಅಷ್ಟೇ ಅಲ್ಲದೆ ಈ ಕಸವನ್ನು ನೀವು ತುಂಬಾ ಸುಲಭವಾಗಿ ನೀವು ಡಸ್ಟ್ಬಿನ್ ಗೆ ಹಾಕಬಹುದು. ಕೆಲವೊಮ್ಮೆ ತರಕಾರಿಗಳನ್ನು ಕತ್ತರಿಸುವುದಕ್ಕಿಂತ ಮುಂಚೆ ಅವುಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕಾಗುತ್ತದೆ.ಅಂತಹ ಸಮಯದಲ್ಲಿ ಅಗಲವಾದ ಯಾವುದಾದರೂ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೊದಲು ನೀರನ್ನು ಹಾಕಿಕೊಂಡು ಎಲ್ಲಾ ಬಗೆಯ ತರಕಾರಿಗಳನ್ನು ನೀರಿಗೆ ಹಾಕಿ ಶುದ್ಧವಾಗಿ ತೊಳೆದುಕೊಳ್ಳಬೇಕು. ಕೆಲವರು ಊ ನೀರನ್ನು ವ್ಯರ್ಥ ಮಾಡುತ್ತಾರೆ ಆದರೆ ನಿಮ್ಮ ಮನೆಯಲ್ಲಿ ನೀವೇನಾದರೂ ಗಾರ್ಡನ್ ಅಥವಾ ಗಿಡಗಳನ್ನು ಬೆಳೆಸಿದ್ದಾರೆ ಈ ನೀರನ್ನು ನೀವು ಅದಕ್ಕೆ ಬಳಕೆ ಮಾಡಬಹುದು. ಎರಡನೇದಾಗಿ ನೀವು ತರಕಾರಿ ಕತ್ತರಿಸಲು ಬಳಸುವಂತಹ ಚಾಕು ಅಥವಾ ಅಥವಾ ಪ್ಲೇಟುಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು. ಕತ್ತರಿಸಿದ ಜಾಗವನ್ನು ಒಂದು ಬಟ್ಟೆಯಿಂದ ಒರೆಸಿಕೊಳ್ಳಬೇಕು ಈ ರೀತಿಯ ಮಾಡಿದರೆ ನಿಮ್ಮ ಅಡುಗೆ ಮನೆ ಅರ್ಧ ಸ್ವಚ್ಛವಾದಂತೆ ಲೆಕ್ಕ ಬಾಕಿ ಉಳಿದಂತಹ ಸಲಹೆಗಳನ್ನು ತಿಳಿಯಲು ಕೆಳಗಿನ ವಿಡಿಯೋ ನೋಡಿ.
ಪ್ರತಿ ನಿತ್ಯ ಅಡುಗೆ ಮನೆಯನ್ನು ಈ ವಿಧಾನ ಅನುಸರಿಸಿ ಕ್ಲೀನ್ ಮಾಡೋದು,ಅಡುಗೆ ಮಾಡೋದು ಮಾಡಿದ್ರೆ ಕೆಲಸ ಬಹಳ ಸುಲಭ..
Cook
[irp]