ಆದಿ ಸುಬ್ರಮಣ್ಯದಲ್ಲಿ ಅಡಗಿದೆ ಈ ದೈತ್ಯ ರಹಸ್ಯ ಇಲ್ಲಿಯ ತನಕ ಯಾರಿಗೂ ಅರಿಯದ ಈ ವಿಷಯ ನೋಡಿ

ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಡಗಿದೆ ಈ ಸತ್ಯ!!
ತಾರಕಾಸುರನ ಸಂಹಾರಕ್ಕಾಗಿ ಕುಮಾರ ಸಂಭವ ನಡೆಯಿತು ಎಂದು ಪುರಾಣಗಳು ಸಾರುತ್ತವೆ ಕುಮಾರ ಎಂದರೆ ಸಾಕ್ಷಾತ್ ಶಿವ ಪಾರ್ವತಿಯ ಸುಪುತ್ರ ಷಣ್ಮುಖ ಅಂದರೆ ಸುಬ್ರಮಣ್ಯ ತಾರಕಾಸುರರ ರಕ್ಕಸರ ರುಂಡ ಮುಂಡ ಗಳನ್ನು ಚಂಡಾಡಿದ ಬಳಿಕ ತನ್ನ ಶಕ್ತಿಯ ಆಯುಧವನ್ನು ದಕ್ಷಿಣ ಕನ್ನಡ ಜಿಲ್ಲೆಯ ಧಾರ ನದಿಯಲ್ಲಿ ತೊಳೆದಿದ್ದನು ಎಂದು ಶಾಸ್ತ್ರ ಪುರಾಣ ಗಳು ಹೇಳುತ್ತದೆ ಇಲ್ಲಿ ಕುಮಾರನು ತನ್ನ ಆಯುಧ ವನ್ನು ಧಾರಾ ನದಿಯಲ್ಲಿ ತೊಳೆದಿದ್ದಕ್ಕೆ ಈ ನದಿಯನ್ನು ಕುಮಾರಧಾರ ನದಿ ಎಂದು ಕರೆಯಲಾಗುತ್ತದೆ ಈ ನದಿಯ ದಂಡೆಯಲ್ಲಿಯೇ ಇದೆ ಈ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ನೈಸರ್ಗಿಕ ಗಿರಿ ಶಿಖರಗಳಿಂದ ಕೂಡಿದ ಮನೋಹರ ಪ್ರದೇಶವಾಗಿದೆ ಈ ರಮಣೀಯ ತಾಣ ಮಧ್ಯಭಾಗ ದಲ್ಲಿ ಸುಂದರವಾದಂತಹ ಆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದೆ.

ಬಂದರು ನಗರಿ ಮಂಗಳೂರಿನಿಂದ ಕೇವಲ 104 ಕಿಲೋಮೀಟರ್ ದೂರದಲ್ಲಿ ಇರುವ ಶ್ರೀ ಕ್ಷೇತ್ರ ಶಿವ ಪಾರ್ವತಿಯರ ಕುಮಾರ ಸುಬ್ರಹ್ಮಣ್ಯ ದೇವಸ್ಥಾನ ಇದೆ ಹಾಗೂ ದೇವಾನುದೇವತೆಗಳು ಅಲ್ಲದೆ ಶ್ರೀ ಶಂಕರಾ ಚಾರ್ಯರ ಪಾದಸ್ಪರ್ಶದಿಂದ ಇದು ಪುನೀತವಾಗಿದೆ ಎಂದು ಪುರಾಣ ಮತ್ತು ಇತಿಹಾಸಗಳು ಸಾರುತ್ತದೆ ಸ್ಕಂದ ಪುರಾಣದ ಪ್ರಕಾರ ಶಂಕರಾಚಾರ್ಯರ ಕೃತಿಯಲ್ಲಿಯೂ ಕುಕ್ಕೆಯ ಪ್ರಸ್ತಾಪ ಇದೆ ಶಿವಕುಮಾರ ನ ಪಾದಸ್ಪರ್ಶದಿಂದ ಪುನೀತವಾದ ಈ ನದಿ ಈಗ ಕುಮಾರಧಾರ ನದಿ ಎಂದೇ ಪ್ರಖ್ಯಾತವಾಗಿದೆ ಈ ನದಿಯ ತೀರದಲ್ಲಿಯೇ ಕುಮಾರಸ್ವಾಮಿಯು ದೇವ ಸೇನೆಯನ್ನು ಒದಿಸಿದ್ದನು ಎಂಬ ಉಲ್ಲೇಖವು ಪುರಾಣದಲ್ಲಿ ಇದೆ. ತಾರಕಾಸುರನನ್ನು ಸಂಹರಿಸಿ ದಂತಹ ಕುಮಾರನಿಗೆ ಸುರಪತಿಯಾದ ದೇವೇಂದ್ರನು ತನ್ನ ಮಗಳಾದ ದೇವ ಸೇನೆಯನ್ನು ಧಾರ ನದಿಯ ತಟದಲ್ಲಿ ಧಾರೆ ಎರೆದು ಕೊಡುತ್ತಾನೆ.

WhatsApp Group Join Now
Telegram Group Join Now

ಈ ಶುಭ ಸಂದರ್ಭದಲ್ಲಿ ವಾಸುಕಿ ಎಂಬ ಮಹಾ ಸರ್ಪ ಗರುಡನಿಂದ ಪ್ರಾಣ ರಕ್ಷಣೆಗಾಗಿ ತಾನು ಧಾರ ನದಿ ಯಲ್ಲಿ ಶಾಶ್ವತವಾಗಿ ನೆಲೆಸುವಂತೆ ಕುಮಾರಸ್ವಾಮಿ ಯನ್ನು ಪ್ರಾರ್ಥಿಸುತ್ತಾನೆ ವಾಸುಕಿಯ ಬೇಡಿಕೆಯನ್ನು ಈಡೇರಿಸಲು ಈ ಪುಣ್ಯಕ್ಷೇತ್ರದಲ್ಲಿಯೇ ಶಿರ ರೂಪಿಯಾಗಿ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದಾನೆ ಎಂಬುದು ಎಲ್ಲಾ ಭಕ್ತರ ಆಚಲ ನಂಬಿಕೆಯಾಗಿದೆ ಹಿಂದೆ ಕುಕ್ಕೆ ಎಂದು ಹೆಸರಾಗಿದ್ದಂತಹ ಈ ಕ್ಷೇತ್ರ ಇಂದು ಸುಬ್ರಹ್ಮಣ್ಯನ ದಯೆಇಂದ ಕುಕ್ಕೆ ಸುಬ್ರಹ್ಮಣ್ಯವಾಗಿದೆ ಆದರೆ ಈ ಸ್ಥಳಕ್ಕೆ ಕುಕ್ಕೆ ಎಂಬ ಹೆಸರು ಬರಲು ಒಂದು ವಿಚಿನ್ನ ಹೇಳಿಕೆ ಇದೆ ಈ ಕ್ಷೇತ್ರದಲ್ಲಿ ಹಿಂದೆ ಜನರು ಕುಕ್ಕೆ ಗಳಲ್ಲಿ ಈಶ್ವರ ಲಿಂಗವನ್ನು ಇಟ್ಟು ಪೂಜಿಸುತ್ತಿದ್ದರು ಹೀಗಾಗಿ ಈ ಊರಿಗೆ ಕುಕ್ಕೆ ಎಂದು ಹಾಗೂ ಇಲ್ಲಿನ ಶಿವಲಿಂಗಕ್ಕೆ ಕುಕ್ಕೆ ಲಿಂಗ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">