ಗುರುವಾರ ಹುಟ್ಟಿದವರು ಈ ಎರಡು ಕೆಲಸ ಮಾಡಿದರೆ ತಕ್ಷಣ ಶ್ರೀಮಂತರಾಗುತ್ತಾರೆ…..!!
ಏಳು ವಾರಗಳ ಮಧ್ಯದಲ್ಲಿ ಬರುವಂತಹ ಐದನೇ ದಿನವೇ ಗುರುವಾರ. ಈ ದಿನವೂ ಹಿಂದು ಪಂಚಾಂಗದ ಪ್ರಕಾರ ಅತ್ಯಂತ ಪವಿತ್ರವಾದ ದಿನ ಗುರು ಗ್ರಹ ಹಾಗೂ ಬೃಹಸ್ಪತಿ ದೇವರಿಗೆ ಮೀಸಲಾದ ದಿನ ಅಂತ ಹೇಳಲಾಗುತ್ತದೆ. ಗುರು ಮತ್ತು ಬೃಹಸ್ಪತಿ ದೇವರು ಅತ್ಯಂತ ಶಕ್ತಿಶಾಲಿ ದೇವರು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಅದೃಷ್ಟ ಹಾಗೂ ಯಶಸ್ಸನ್ನು ತಂದು ಕೊಡುತ್ತೆ ಅಂತ ಹೇಳಲಾಗುತ್ತದೆ. ಗುರುವಿನ ಅನುಗ್ರಹ ಇದ್ದರೆ ವ್ಯಕ್ತಿಗೆ ಜೀವನದಲ್ಲಿ ಸುಖ ಸಮೃದ್ಧಿ ಹಾಗೂ ಸಂತೋಷ ನೆಮ್ಮದಿಯನ್ನು ತಂದುಕೊಡುತ್ತದೆ. ಇಂತಹ ಶುಭದಿನದಂದು ಜನಿಸಿದಂತವರ ಜೀವನ ಹಾಗೂ ಅವರ ಸ್ವಭಾವ ಯಾವ ರೀತಿ ಇರುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ನೋಡೋಣ.
ಗುರುವಾರ ಜನಿಸಿದವರನ್ನು ಆಳುವ ಗ್ರಹ ಗುರು ಅದೃಷ್ಟದ ಬಣ್ಣ ಕೇಸರಿ ಮತ್ತು ಕಂದು ಬಣ್ಣ. ಧನಾತ್ಮಕ ಲಕ್ಷಣಗಳು ಶಕ್ತಿಯುತರು, ಸತ್ಯ ನಿಷ್ಠರು, ನಿರ್ಧಾರಿತ ಗುಣದವರು, ಹಾಗೂ ರೋಮ್ಯಾಂಟಿಕ್ ಸ್ವಭಾವದ ವರು. ಋಣಾತ್ಮಕ ಲಕ್ಷಣಗಳು ಪ್ರತೀಕಾರ, ಅಗೌರವ ಅಹಂಕಾರ ಹಾಗೂ ದುರಾಸೆಯ ಗುಣದವರು. ಗುರುವಾರ ಜನಿಸಿದಂತಹ ವ್ಯಕ್ತಿಗಳು ಉದಾರ ಸ್ವಭಾವದವರಾಗಿರುತ್ತಾರೆ. ಇವರು ಜೀವನದಲ್ಲಿ ಅಭಿವೃದ್ಧಿ ಮತ್ತು ಸಂಪತ್ತನ್ನು ನೋಡುವುದಕ್ಕೆ ಬಯಸುತ್ತಾರೆ.
ಇವರ ಆಸೆಯಂತೆಯೇ ಜೀವನದಲ್ಲಿ ಬಯಸಿದಂತಹ ಸಂಗತಿಗಳು ದೊಡ್ಡ ಪ್ರಮಾಣದಲ್ಲಿಯೇ ದೊರೆಯುತ್ತದೆ. ಕೆಲವು ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ಎಂತಹ ಸಂಗತಿಗಳು ಎದುರಾದರೂ ಅವುಗಳನ್ನು ಆಶಾವಾದದಿಂದಾಗಿ ನೋಡುತ್ತಾರೆ. ಹಾಗಾಗಿ ಜೀವನದ ಏರಳಿತಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಉತ್ತಮ ತೀರ್ಪು ಗಾರರಾಗಿ ನಿರ್ಧಾರಗಳನ್ನು ಕೈಗೊಳ್ಳುವುದರಿಂದ, ಇವರ ಸುತ್ತ ಜನರು ಯಾವಾಗಲೂ ಅಭಿಪ್ರಾಯ ಹಾಗೂ ಸಲಹೆಯನ್ನು ಪಡೆಯುವುದಕ್ಕೆ ಬಯಸುತ್ತಾರೆ.
ಗುರುವಾರ ಜನಿಸಿದಂತಹ ವ್ಯಕ್ತಿಗಳು ಸಾಮಾನ್ಯವಾಗಿ ಶಿಕ್ಷಕ ವೃತ್ತಿ ಮಾಡುವುದು ಹೆಚ್ಚು. ಅತ್ಯಂತ ಬುದ್ಧಿವಂತರು ಹಾಗೂ ಮುಕ್ತ ಮನಸ್ಸಿ ನವರಾಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ 3. ಇವರು ಗುರುವಾರ ಗುರುವಿನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುವುದರಿಂದ ಸಂತೋಷದ ಜೀವನವನ್ನು ಅನುಭವಿಸಬಹುದು. ಗುರುವಾರ ದತ್ತಿ ಅಥವಾ ದಾನ ಮಾಡುವುದರಿಂದ ಒಂದಿಷ್ಟು ಪುಣ್ಯ ಫಲಗಳು ಸಹ ದೊರೆಯುತ್ತದೆ.
ಗುರುವಾರ ಜನಿಸಿದಂತಹ ವ್ಯಕ್ತಿಗಳು ಸಾಮಾನ್ಯವಾಗಿ ನಾಯಕರಾಗಿರು ತ್ತಾರೆ. ಇವರು ಆಳುವುದಕ್ಕೆ ಎಂದೇ ಹುಟ್ಟಿರುತ್ತಾರೆ ಅಂತ ಸಹ ಹೇಳಲಾಗುತ್ತದೆ. ಇವರ ಆಕರ್ಷಕ ವ್ಯಕ್ತಿತ್ವವು ಇತರರನ್ನು ಬಹುಬೇಗನೆ ಸೆಳೆದುಕೊಳ್ಳುತ್ತದೆ. ಜೊತೆಗೆ ಸುತ್ತಲಿನ ಜನರು ಇವರ ಅನುಕರಣೆ ಯನ್ನು ಮಾಡುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಹಾಗೂ ಅದರಲ್ಲಿಯೇ ಕೆಲಸವನ್ನು ನಿರ್ವಹಿಸುವುದು ಇವರಿಗೆ ಯಶಸ್ಸ ನ್ನು ತಂದು ಕೊಡುತ್ತದೆ. ಇವರು ಉನ್ನತ ಮಟ್ಟದ ಕಾರ್ಯನಿರ್ವಾಹಕ ಜವಾಬ್ದಾರಿ ಕೆಲಸವನ್ನು ನಿರ್ವಹಿಸೋ ಸಾಮರ್ಥ್ಯ ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.