ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮೂರು ಕಡೆಗೆ ಸಲ್ಲಿಸಬಹುದು..|| ಪತಿ ತೀರಿಕೊಂಡಿದ್ದರೆ ಅರ್ಜಿಯಲ್ಲಿ ಏನು ತುಂಬಬೇಕು……||
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಬಿಡುಗಡೆಯಾಗಿದ್ದು ಪ್ರತಿ ಯೊಬ್ಬ ಮಹಿಳೆಯು ಕೂಡ ಈ ಒಂದು ಅರ್ಜಿಯನ್ನು ಹಾಕಬಹು ದಾಗಿದೆ ಅದರಲ್ಲೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆಯೂ ಕೂಡ ಈ ಒಂದು ಯೋಜನೆ ಉಪಯುಕ್ತವಾಗುತ್ತಿದ್ದು ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾದರೂ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಯನ್ನು ಈಡೇರಿಸುತ್ತೇವೆ. ಅದರಲ್ಲೂ ಎಲ್ಲರಿಗೂ ಅನುಕೂಲವಾಗುವಂತೆ ಮಹಿಳೆಯರಿಗೆ ಅನುಕೂಲ ವಾಗುವಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಡುತ್ತೇವೆ ಅದರಲ್ಲೂ ಉಚಿತವಾಗಿ ನಿಮಗೆ ಹಲವಾರು ಸೌಕರ್ಯಗಳನ್ನು ಒದಗಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು.
ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು ಅವರು 5 ಗ್ಯಾರಂಟಿಯನ್ನು ಸಹ ಈಡೇರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿಯೊಬ್ಬ ಮಹಿಳೆಗೂ ಕೂಡ ಸರ್ಕಾರಿ ಬಸ್ಗಳಲ್ಲಿ ಉಚಿತ ವಾದಂತಹ ಪ್ರಯಾಣವನ್ನು ಒದಗಿಸಿಕೊಟ್ಟಿದ್ದು. ಈ ಒಂದು ಯೋಜನೆ 11ನೇ ತಾರೀಖಿನಿಂದ ಜಾರಿಗೆ ಬರುತ್ತದೆ ಹಾಗೂ ಸಿದ್ದರಾಮಯ್ಯ ಅವರು ಈ ಒಂದು ಯೋಜನೆಯನ್ನು ಚಾಲ್ತಿ ಮಾಡುತ್ತಿದ್ದಾರೆ ಎಂದೇ ಹೇಳಬಹುದು.
ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಹಿಳೆಗೂ ಅಂದರೆ ಕುಟುಂಬದ ಮುಖ್ಯಸ್ಥೆಗೆ ಪ್ರತಿ ತಿಂಗಳು 2000 ಹಣವನ್ನು ಕೊಡುವಂತ ಗ್ಯಾರಂಟಿಯನ್ನು ನೀಡಿದ್ದರು ಅದೇ ರೀತಿಯಾಗಿ ಈ ಒಂದು ಯೋಜನೆ ಸಹ ಸಂಪೂರ್ಣವಾಗಿ ನೆರವೇರುತ್ತದೆ ಎಂದು ಹೇಳುವುದರ ಮೂಲಕ ಈ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು.
ಮನೆಯ ಮುಖ್ಯ ಸದಸ್ಯೆ ಅಂದರೆ ಮನೆಯಲ್ಲಿ ಮೂರು ಜನ ಹೆಂಗಸರು ಇದ್ದರೆ ಅವರೆಲ್ಲರೂ ಬೇರೆ ಬೇರೆ ಬಿಪಿಎಲ್ ಕಾರ್ಡ್ ಹೊಂದಿದ್ದರೂ ಕೂಡ ಎಲ್ಲರಿಗೂ ಎರಡು ಸಾವಿರ ಹಣ ಸಿಗುವುದಿಲ್ಲ ಬದಲಿಗೆ ಮನೆಯ ಮುಖ್ಯಸ್ಥೆ ಅಂದರೆ ಅತ್ತೆಗೆ ಈ ಒಂದು ಯೋಜನೆಯ ಸೌಕರ್ಯ ಸಿಗುತ್ತದೆ ಹಾಗಗೇನಾದರೂ ಅವಳು ನನಗೆ ಬೇಡ ನನ್ನ ಸೊಸೆಗೆ ಇರಲಿ ಎಂದು ಅನುಮತಿ ಕೊಟ್ಟರೆ ಮಾತ್ರ ಅದು ಸೊಸೆಗೆ ಸೇರಲಿದೆ.
ಈ ಒಂದು ಅರ್ಜಿಯನ್ನು ನೀವು ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸಬಹುದು ಅದೇ ರೀತಿ ನಾಡಕಛೇರಿಯಲ್ಲಿಯೂ ಕೂಡ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿಯಾಗಿ ಮೂರನೆಯದಾಗಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೂ ಸಹ ನೀವು ಅರ್ಜಿಯನ್ನು ಸಲ್ಲಿಸಬಹುದು ಒಟ್ಟಾರೆಯಾಗಿ ಈ ಮೂರು ಕಡೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.